More

    ದಕ್ಷಿಣ ಆಫ್ರಿಕಾದ ಎದುರು ಪಾಕಿಸ್ತಾನ ಸೋತಿದ್ದು ಕೆಟ್ಟ ಅಂಪೈರಿಂಗ್‌, ನಿಯಮದಿಂದ ಎಂದ ಭಾರತದ ಮಾಜಿ ಆಟಗಾರ

    ಚೆನ್ನೈ: ಶುಕ್ರವಾರ ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್​ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ದಕ್ಷಿಣಾ ಆಪ್ರಿಕಾ ತಂಡವು 1 ವಿಕೆಟ್​ ಜಯಗಳಿಸುವ ಮೂಲಕ ಗೆಲುವಿನ ನಗೆ ಬೀರಿದೆ. ಸತತ 4ನೇ ಸೋಲು ಅನುಭವಿಸಿದ ಬಾಬರ್ ಪಡೆಗೆ ವಿಶ್ವಕಪ್​ ಸೆಮೀಸ್​ ಹಾದಿ ಮತ್ತಷ್ಟು ದುರ್ಬಗೊಂಡಿದೆ.

    ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 46.4 ಓವರ್​​ಗಳಲ್ಲಿ 270 ರನ್ ಗಳಿಸಿ ಆಲೌಟ್​ ಆಯಿತು. ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ತಂಡವು 47.2 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 271 ರನ್ ಗಳಿಸಿ ಗೆಲುವಿನ ನಗೆ ಬೀರಿತ್ತು. ಇನ್ನು ಪಾಕಿಸ್ತಾನದ ಸೋಲನ್ನು ವಿಶ್ಲೇಷಿಸಿರುವ ಭಾರತದ ಮಾಜಿ ಆಟಗಾರ ಕೆಟ್ಟ ನಿಯಮ ಹಾಗೂ ಅಂಪೈರ್​ಗಳ ತಪ್ಪು ತೀರ್ಪಿನಿಂದ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    271 ರನ್‌ ಗುರಿ ಹಿಂಬಾಲಿಸಿದ್ದ ದಕ್ಷಿಣ ಆಫ್ರಿಕಾ ತಂಡ 45.5 ಓವರ್‌ಗಳಿಗೆ 9 ವಿಕೆಟ್‌ ನಷ್ಟಕ್ಕೆ 263 ರನ್‌ ಗಳಿಸಿತ್ತು. ಈ ವೇಳೆ ಪಾಕಿಸ್ತಾನ ಗೆಲ್ಲಲು ಒಂದು ವಿಕೆಟ್‌ ಅಗತ್ಯವಿತ್ತು ಹಾಗೂ ದಕ್ಷಿಣ ಆಫ್ರಿಕಾ ಗೆಲ್ಲಲು 7 ರನ್‌ ಬೇಕಿತ್ತು. ಈ ವೇಳೆ 46ನೇ ಓವರ್‌ನ ಕೊನೆಯ ಎಸೆತದಲ್ಲಿ ಹ್ಯಾರಿಸ್‌ ರೌಫ್‌ ಎಸೆತವನ್ನು ಅರಿಯುವಲ್ಲಿ ವಿಫಲವಾದ ತಬ್ರೈಝ್‌ ಶಾಮ್ಸಿ, ಚೆಂಡನ್ನು ಪ್ಯಾಡ್‌ ಮೇಲೆ ಹಾಕಿಕೊಂಡರು ಹಾಗೂ ಪಾಕ್‌ ಆಟಗಾರರು ಎಲ್‌ಬಿಡಬ್ಲ್ಯುಗೆ ಬಲವಾಗಿ ಮನವಿ ಮಾಡಿದರು ಹಾಗೂ ಆನ್‌ಫೀಲ್ಡ್ ಅಂಪೈರ್‌ ನಾಟ್‌ ಔಟ್‌ ನೀಡಿದ್ದರು.

    ಇದನ್ನೂ ಓದಿ: VIDEO| ಅತ್ಯಾಚಾರ, ಲೂಟಿ, ಡಕಾಯಿತಿಯಲ್ಲಿ ಮುಸ್ಲಿಮರೇ ನಂಬರ್ 1; ವಿವಾದದ ಕಿಡಿ ಹೊತ್ತಿಸಿದ ಮುಸ್ಲಿಂ ಮುಖಂಡನ ಹೇಳಿಕೆ

    ಈ ವೇಳೆ ಪಾಕ್‌ ನಾಯಕ ಬಾಬರ್‌ ಆಝಮ್‌, ಮೂರನೇ ಅಂಪೈರ್‌ ಮೊರೆ ಹೋದರು. ವಿಡಿಯೋ ರೀಪ್ಲೆನಲ್ಲಿ ಚೆಂಡು ಸ್ಟಂಪ್ಸ್‌ಗೆ ತಗುಲಿತ್ತಿರುವುದು ಸ್ಪಷ್ಟವಾಗಿತ್ತು. ಆದರೆ, ಆನ್‌ಫೀಲ್ಡ್ ಅಂಪೈರ್‌ ಕಾಲ್‌ ಆಗಿದ್ದ ಕಾರಣ ಮೂರನೇ ಅಂಪೈರ್ ನಾಟ್‌ಔಟ್‌ ನೀಡಿದ್ದರು. ಇದರಿಂದ ಶಾಮ್ಸಿ ಎಲ್‌ಬಿಡಬ್ಲ್ಯುನಿಂದ ಬಚಾವ್ ಆದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡ ಒಂದು ವಿಕೆಟ್‌ ರೋಚಕ ಗೆಲುವು ಸಾಧಿಸಿತು.

    ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ಕೆಟ್ಟ ಅಂಪೈರಿಂಗ್‌ ಹಾಗೂ ಕೆಟ್ಟ ನಿಯಮಗಳಿಂದಾಗಿ ಪಾಕಿಸ್ತಾನ ತಂಡ ಈ ಪಂದ್ಯದಲ್ಲಿ ಸೋಲುವಂತಾಯಿತು. ಐಸಿಸಿ ತನ್ನ ನಿಯಮಗಳಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಅಂಪೈರ್‌ ಔಟ್‌ ಕೊಡಲಿ ಅಥವಾ ಕೊಡದೆ ಇರಲಿ, ಚೆಂಡು ಸ್ಟಂಪ್ಸ್‌ಗೆ ತಗುಲುತ್ತಿದ್ದರೆ, ಅದನ್ನು ಔಟ್‌ ಎಂದು ಪರಿಗಣಿಸಬೇಕು. ಇಲ್ಲವಾದಲ್ಲಿ ತಂತ್ರಜ್ಞಾನದ ಬಳಕೆಯಿಂದ ಏನು ಪ್ರಯೋಜನ, ಎಂದು ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇತ್ತ ಹರ್ಭಜನ್​ ಸಿಂಗ್​ ಟ್ವೀಟ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಬ್ಯಾಟಿಂಗ್ ಮಾಡುವ ದಕ್ಷಿಣ ಆಫ್ರಿಕಾದ ಆಟಗಾರರು ಸಹ ಇದೇ ಸಮಸ್ಯೆಗಳನ್ನು ಎದುರಿಸಿದ್ದರು ಅವರ ಪರ ನೀವು ಯಾಕೆ ಧ್ವನಿ ಎತ್ತುತ್ತಿಲ್ಲ ಎಂದು ಹಲವರು ಪ್ರಶ್ನಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts