ನವಾಜುದ್ದೀನ್​ಗೆ ಸದಾ ಹುಡುಗಿಯರದ್ದೇ ಧ್ಯಾನ ... ಹೆಂಡತಿ ಆರೋಪ

Nawazuddin-Final
Published on

ಇನ್ನು ಮುಂದೆ, ತಮ್ಮ ಬಗ್ಗೆ ಅಪಪ್ರಚಾರ ಮಾಡಿ, ಮಾನನಷ್ಟ ಮಾಡಿದರೆ ಸುಮ್ಮನಿರುವುದಿಲ್ಲ ಎಂದು ತಮ್ಮ ಪತ್ನಿ ಆಲಿಯಾಗೆ ಕಳೆದ ತಿಂಗಳೇ ಸ್ಪಷ್ಟಪಡಿಸಿದ್ದರು ನವಾಜುದ್ದೀನ್​ ಸಿದ್ದೀಕ. ಅಷ್ಟೇ ಅಲ್ಲ, ತಮ್ಮ ಲಾಯರ್​ಗಳ ಮೂಲಕ ನೋಟೀಸ್​ ಸಹ ಕಳುಹಿಸಿದ್ದರು.

ಆದರೆ, ನವಾಜುದ್ದೀನ್​ ಅವರ ಬೆದರಿಕೆಗಳಿಗೆಲ್ಲಾ ಆಲಿಯಾ ಜಗ್ಗುವಂತೆ ಕಾಣುತ್ತಿಲ್ಲ. ಸ್ವಲ್ಪ ದಿನ ಸುಮ್ಮನಿದ್ದ ಆಕೆ, ಈಗ ನವಾಜುದ್ದೀನ್​ ವಿರುದ್ಧ ಮತ್ತೆ ತಿರುಗಿ ಬಿದ್ದಿದ್ದಾರೆ. ನವಾಜುದ್ದೀನ್​ ವಿರುದ್ಧ ದಾಂಪತ್ಯ ದ್ರೋಹದ ಆರೋಪ ಹೊರಿಸಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ನವಾಜ್​ಗೆ ಸದಾ ಹುಡುಗಿಯರದ್ದೇ ಧ್ಯಾನ. ಆತ ಯಾವಾಗಲೂ ಬೇರೆಯವರೊಂದಿಗೆ ಸಂಬಂಧ ಇಟ್ಟುಕೊಂಡಿದ್ದ. ನಾವು ಮದುವೆಯಾಗುವುದಕ್ಕಿಂತ ಮುಂಚೆಯೂ ಅವರಿಗೆ ಬೇರೆ ಹುಡುಗಿಯರೊಂದಿಗೆ ಸಂಬಂಧ ಇತ್ತು. ಇದೇ ವಿಷಯವಾಗಿ ನಾವು ಸಾಕಷ್ಟು ಬಾರಿ ಜಗಳ ಮಾಡಿಕೊಂಡಿದ್ದೇವೆ' ಎಂದು ಅವರು ಹೇಳಿದ್ದಾರೆ.

ಇನ್ನು ತಾವು ಗರ್ಭಿಣಿಯಾಗಿದ್ದಾಗಿನ ಸಂದರ್ಭವನ್ನು ನೆನಪಿಸಿಕೊಂಡಿರುವ ಅವರು, 'ಇದೆಲ್ಲಾ ಕ್ರಮೇಣ ಸರಿಹೋಗಬಹುದು ಎಂದುಕೊಂಡಿದ್ದೆ. ಆದರೆ, ಸರಿ ಹೋಗಲಿಲ್ಲ. ನಾನು ಗರ್ಭಿಣಿಯಾಗಿದ್ದಾಗಲೂ ಚೆಕಪ್​ಗಳಿಗೆ ನಾನೇ ಹೋಗಿ ಬರುತ್ತಿದೆನೇ ಹೊರತು, ನವಾಜ್​ ಬರುತ್ತಿರಲಿಲ್ಲ. ನನಗೆ ಲೇಬರ್ ಪೇಯ್ನ್​ ಕಾಣಿಸಿಕೊಳ್ಳುವುದಕ್ಕಿಂತ ಮುನ್ನ, ನವಾಜ್​ ಮತ್ತು ಆತನ ತಂದೆ-ತಾಯಿ ಇದ್ದರು. ನೋವು ಕಾಣಿಸಿಕೊಳ್ಳುತ್ತಿದ್ದಂತೆಯೇ ಯಾರೂ ಇಲ್ಲ. ನನಗೆ ನೋವಿದ್ದಾಗ, ನನ್ನ ಗಂಡ ಆತನ ಗರ್ಲ್​ಫ್ರೆಂಡ್​ಗಳ ಜತೆಗೆ ಮಾತನಾಡುತ್ತಾ ಬ್ಯುಸಿಯಾಗಿದ್ದರು' ಎಂದು ಆರೋಪ ಮಾಡಿದ್ದಾರೆ ಆಲಿಯಾ.

ನವಾಜ್​ ಹುಡುಗಿಯರೊಂದಿಗೆ ಫ್ಲರ್ಟ್​ ಮಾಡುವ ವಿಷಯವನ್ನು ತಮಗೆ ತಿಳಿಸಿದ್ದೇ ಅವರ ಸಹೋದರ ಎಂದು ಹೇಳಿಕೊಂಡಿರುವ ಆಲಿಯಾ, 'ನವಾಜ್​ ಅವರ ಸಹೋದರನೇ ನನಗೆ ನವಾಜ್​ನ ಎಲ್ಲಾ ಸಂಬಂಧಗಳ ಬಗ್ಗೆ ಹೇಳಿದ್ದು. ಅಷ್ಟೇ ಅಲ್ಲ, ನವಾಜ್​ನ ಫೋನ್​ ಬಿಲ್​ಗಳನ್ನು ನನಗೆ ಕೊಟ್ಟಿದ್ದು ಸಹ ಆತನೇ. ನವಾಜ್​, ಇದೇ ತರಹ ಮೂರ್ನಾಲ್ಕು ವರ್ಷಗಳ ಕಾಲ ಬೇರೆಯವರೊಂದಿಗೆ ಮಾತಾಡುತ್ತಲೇ ಕಳೆ. ಇವೆಲ್ಲಾ ಕಾರಣಗಳಿಗೇ, ನಾನು ಅವರನನು ಬಿಟ್ಟು ಹೊರಬಂದಿದ್ದು' ಎಂದು ಹೇಳಿಕೊಂಡಿದ್ದಾರೆ ಆಲಿಯಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net