

ಬೆಂಗಳೂರು: ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿ ನಾಯಕನಾಗಿಯೂ ನಟಿಸಿದ್ದ ‘ಲವ್ ಮಾಕ್ಟೇಲ್’ ಸಿನಿಮಾ, ಪ್ರೇಕ್ಷಕರಿಂದ ಮೆಚ್ಚುಗೆ ಗಿಟ್ಟಿಸಿಕೊಂಡಿತ್ತು. ಅಷ್ಟೇ ಅಲ್ಲ ಅಮೆಜಾನ್ ಪ್ರೖೆಂನಲ್ಲಿಯೂ ಸಿನಿಮಾ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಿರುವಾಗಲೇ ಈ ಚಿತ್ರ ತೆಲುಗಿನಲ್ಲಿ ರಿಮೇಕ್ ಆಗಲಿದೆ ಎಂಬ ಸುದ್ದಿ ಹರಿದಾಡಿತ್ತು.
ಕನ್ನಡದ ನಿರ್ದೇಶಕ ನಾಗಶೇಖರ್ ನಿರ್ದೇಶನ ಮಾಡುವ ಬಗ್ಗೆ ಹೇಳಿಕೊಂಡಿದ್ದರು. ಇದೀಗ ಇದೇ ಸಿನಿಮಾಕ್ಕೆ ಪಾತ್ರವರ್ಗದ ಆಯ್ಕೆ ಆಗಿದೆ. ಮೂಲ ಕನ್ನಡದಲ್ಲಿ ಮಿಲನಾ ನಾಗರಾಜ್ ಮಾಡಿದ್ದ ಪಾತ್ರವನ್ನು ತೆಲುಗಿನಲ್ಲಿ ‘ಮಿಲ್ಕಿ ಬ್ಯೂಟಿ’ ತಮನ್ನಾ ನಿಭಾಯಿಸಲಿದ್ದಾರೆ. ಅವರಿಗೆ ಸತ್ಯದೇವ್ ಜೋಡಿಯಾಗಲಿದ್ದಾರೆ. ವಿಶೇಷ ಎಂಬಂತೆ ಕನ್ನಡದ ಖ್ಯಾತ ಛಾಯಾಗ್ರಾಹಕ ಸತ್ಯ ಹೆಗಡೆ ತೆಲುಗಿನ ‘ಲವ್ ಮಾಕ್ಟೇಲ್’ಗೆ ಛಾಯಾಗ್ರಹಣ ಮಾಡಲಿದ್ದಾರೆ.
ತೆಲುಗು ನಿರ್ವಪಕ ಭವಾನಿ ರವಿ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಇನ್ನು ನಿರ್ದೇಶನದ ಜತೆಗೆ ನಿರ್ವಣದಲ್ಲೂ ನಾಗಶೇಖರ್, ಭವಾನಿ ರವಿ ಜತೆಗೆ ಕೈ ಜೋಡಿಸಿ ದ್ದಾರೆ. ಸದ್ಯ ಕರೊನಾ ಹಿನ್ನೆಲೆಯಲ್ಲಿ ಸಿನಿಮಾ ಶೂಟಿಂಗ್ ಕೆಲಸಗಳು ಸ್ಥಗಿತ ಗೊಂಡಿದ್ದರಿಂದ ಸೆಪ್ಟಂಬರ್ ಎರಡಷನೇ ವಾರದಿಂದ ಶೂಟಿಂಗ್ ಮಾಡಿಕೊಳ್ಳುವ ಪ್ಲಾ್ಯನ್ ಚಿತ್ರತಂಡದ್ದು.