ಅಹಮದಾಬಾದ್: ಅಘಾತಕಾರಿ ಘಟನೆಯೊಂದರಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಮಂಗಗಳಿಗೆ ಊಟದ ಆಮಿಷವೊಡ್ಡಿ ಅದಕ್ಕೆ ಚಪ್ಪಲಿಯಿಂದ ಪದೇ ಪದೇ ಹೊಡೆದಿರುವ ಘಟನೆ ನಡೆದಿದೆ. ಘಟನೆಯು ಗುಜರಾತ್ನ ಅಹಮದಾಬಾದ್ನಲ್ಲಿರುವ ಕಂಕರಿಯಾ ಮೃಗಾಲಯದಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Video Viral) ಆಗಿದೆ.
ವೈರಲ್ ಆಗಿರುವ ವಿಡಿಯೋ (Video Viral) ನೋಡುವುದಾದರೆ ವ್ಯಕ್ತಿಯೋರ್ವ ಮಂಗಗಳಿಗೆ ಉದ್ದೇಶಪೂರ್ವಕವಾಗಿ ಆಹಾರ ನೀಡುವ ರೀತಿ ಮಾಡಿ ಅವನ ಬಳಿ ಬಂದಾಗ ಚಪ್ಪಲಿಯಲ್ಲಿ ಥಳಿಸುತ್ತಾನೆ. ಈ ವಿಡಿಯೋವನ್ನು ಪ್ರವಾಸಿಗರೊಬ್ಬರು ಸೆರೆ ಹಿಡಿದಿದ್ದು, ಕೂಡಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಅಧಿಕಾರಿಗಳು ವ್ಯಕ್ತಿಯ ವಿರುದ್ಧ ಕ್ರಮ ಜರುಗಿಸಿದ್ದು, ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧಿತನ ಹೆಸರು ಅಬ್ದುಲ್ ಎಂದು ತಿಳಿದು ಬಂದಿದ್ದು, ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ ಬಸ್ಕಿಯನ್ನು ಹೊಡೆಸಿ ಕಳಿಸಿದ್ದಾರೆ. ಸದ್ಯ ವ್ಯಕ್ತಿಯ ನಡೆ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದು, ಆತನ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ ಕೇಳಿ ಬರುತ್ತಿದೆ.
ನಿಧಿಯ ಆಸೆಗಾಗಿ ವ್ಯಕ್ತಿಯನ್ನು ಬಲಿಕೊಟ್ಟ ದುರುಳರು; ಜ್ಯೋತಿಷಿ ಸೇರಿದಂತೆ ಇಬ್ಬರು ಅರೆಸ್ಟ್
ವರನ ಅತಿಯಾಸೆಗೆ ಮುರಿದುಬಿತ್ತು ಮದುವೆ; ಅಷ್ಟಕ್ಕೂ UPSC ಆಕಾಂಕ್ಷಿ ಡಿಮ್ಯಾಂಡ್ ಮಾಡಿದ್ದಾದರು ಏನು?