ವರನ ಅತಿಯಾಸೆಗೆ ಮುರಿದುಬಿತ್ತು ಮದುವೆ; ಅಷ್ಟಕ್ಕೂ UPSC ಆಕಾಂಕ್ಷಿ ಡಿಮ್ಯಾಂಡ್​ ಮಾಡಿದ್ದಾದರು ಏನು?

Marriage
Published on

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮದುವೆಗೆ (Marriage) ಸಂಬಂಧಿಸಿದ ಸುದ್ದಿಗಳು ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದ್ದು, ಸಾರ್ವಜನಿಕರ ಗಮನ ಸೆಳೆಯುವಲ್ಲಿ ಮಾತ್ರ ಹಿಂದೆ ಬೀಳುತ್ತಿಲ್ಲ. ಅಡುಗೆ ಕಡಿಮೆ ಮಾಡಿಸಿದ್ದಾರೆಂದು, ಸಿಬಿಲ್ ಸ್ಕೋರ್ ಕಡಿಮೆ ಇದೆ ಎಂದು ಕ್ಷುಲಕ ಕಾರಣಗಳಿಗೆ ಮದುವೆಗಳು ಮುರಿದು ಬೀಳುತ್ತಿದ್ದು, ಇದೀಗ ವರ ಹೆಚ್ಚಿನ ಉಡುಗೊರೆಗೆ ಬೇಡಿಕೆ ಇರಿಸಿದ ಎಂಬ ಕಾರಣಕ್ಕೆ ಮದುವೆಯನ್ನು ರದ್ದುಪಡಿಸಲಾಗಿದ್ದು, ಈ ಕುರಿತಾದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವೃತ್ತಿಯಲ್ಲಿ ವರ ಶಿಕ್ಷಕನಾಗಿದ್ದು, ಯುಪಿಎಸ್​ಸಿಗೆ (UPSC) ತಯಾರಿ ನಡೆಸುತ್ತಿದ್ದಾನೆ. ಈತನ ಅತಿಯಾಸೆಗೆ ಮದುವೆ ಮರಿದುಬಿದ್ದಿದ್ದು, ಸದ್ಯ ಈ ಕುರಿತಾದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ರೆಡ್ಡಿಟ್​ನಲ್ಲಿ ವೈರಲ್ ಆಗಿರುವ ಪೋಸ್ಟ್ ನೋಡುವುದಾದರೆ ವರನು ತನ್ನ ಭಾವಿ ಮಾವ ನೀಡಿದ ಉಡುಗೊರೆಗಳನ್ನು ಇಷ್ಟಪಡದಿರುವ ಬಗ್ಗೆ ವಧುವಿನ ಬಳಿ ದೂರಿದ್ದಾನೆ. ಉಡುಗೊರೆಗೆ ಸಂಬಂಧಿಸಿದಂತೆ ವರ ವಧುವಿನ ಬಳಿ ಸುದೀರ್ಘವಾಗಿ ಚಾಟ್ ಮಾಡಿದ್ದು, ಬಹುಪಾಲು ಸಮಯ ಆಕೆಯ ಜೊತೆ ಜಗಳವಾಡಿದ್ದಾನೆ. 

ಈ ಪೋಸ್ಟ್​ಅನ್ನು ವಧುವಿನ ಸಹೋದರಿ ರೆಡ್ಡಿಟ್​ನಲ್ಲಿ ಹಂಚಿಕೊಂಡಿದ್ದು, ಆತ ಶಿಕ್ಷಕ ಮತ್ತು ಯುಪಿಎಸ್​ಸಿಗೆ (UPSC) ತಯಾರಿ ನಡೆಸುತ್ತಿದ್ದಾರೆ. ನನ್ನ ಸಹೋದರಿ ಸಹ ಸರ್ಕಾರಿ ಉದ್ಯೋಗಿಯಾಗಿದ್ದಾರೆ. ನಮ್ಮ ದೇಶವನ್ನು ಆಶೀರ್ವದಿಸಿ. ಸದ್ಯ ಈ ಮದುವೆಯನ್ನು (Marriage) ಅಧಿಕೃತವಾಗಿ ರದ್ದುಗೊಳಿಸಲಾಗಿದೆ ಎಂದು ಪೋಸ್ಟ್ ಮಾಡಿದ್ಧಾರೆ. ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ಅನೇಕರು ವಧುವಿನ ನಿರ್ಧಾರವನ್ನು ಪ್ರಶಂಶಿಸಿದ್ದು, ವರನ ನಡೆಗೆ ಕಿಡಿಕಾರಿ ಕಮೆಂಟ್​ ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net