ಮುಂಬೈ: ಫೆಬ್ರವರಿ 19ರಿಂದ ಮಾರ್ಚ್ 09ರವರೆಗೆ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಸಂಬಂಧಿಸಿದಂತೆ ಈಗಾಗಲೇ ಎಲ್ಲಾ ತಂಡಗಳು ಭರ್ಜರಿ ತಯಾರಿ ನಡೆಸಿದ್ದು, ಪೂರ್ವಭಾವಿ ಸಿದ್ಧತೆಯಾಗಿ ಏಕದಿನ ಸರಣಿಗಳನ್ನು ಆಡುತ್ತಿದೆ. ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಗೆಲ್ಲುವ ಮೂಲಕ ಭರ್ಜರಿ ಹುಮ್ಮಸ್ಸಿನಲ್ಲಿರುವ ಟೀಮ್ ಇಂಡಿಯಾಗೆ ಚಾಂಪಿಯನ್ಸ್ ಟ್ರೋಫಿಗೂ ಅಗತ್ಯ ತಯಾರಿ ನಡೆಸಿದೆ. ಇದೀಗ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ತಂಡದಲ್ಲಿ ಬದಲಾವಣೆ ಆಗುತ್ತದೆ ಎಂದು ಹೇಳಲಾಗಿದ್ದು, ಮೊಹಮ್ಮದ್ ಸಿರಾಜ್ (Mohammed Siraj) ತಂಡದಲ್ಲಿ ಸ್ಥಾನ ಪಡೆಯುವುದು ಪಕ್ಕಾ ಎಂದು ಹೇಳಲಾಗಿದೆ.
ಈ ಬಗ್ಗೆ ಮಾತನಾಡಿರುವ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, ನನ್ನ ಪ್ರಕಾರ ಬ್ಯಾಟಿಂಗ್ ಕ್ರಮಾಂಕ ಸೆಟ್ ಆಗಿದೆ. ರೋಹಿತ್ ಶರ್ಮ, ಶುಭಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ಲಯದಲ್ಲಿದ್ಯ, ವಿರಾಟ್ ಕೊಹ್ಲಿ ಫಾರ್ಮ್ಗೆ ಮರಳುತ್ತಾರೆ ಎಂಬ ವಿಶ್ವಾಸ ನನಗಿದೆ. ಹಾಗೆ ನೋಡಿದರೆ ಯಶಸ್ವಿ ಜೈಸ್ವಾಲ್ ಅವಶ್ಯಕತೆ ತಂಡಕ್ಕಿಲ್ಲ ಎಂದು ನಾನು ಭಾವಿಸುತ್ತೇನೆ.
ಏಕೆಂದರೆ ಕೋಚ್ ಎಡ-ಬಲ ಕಾಂಬಿನೇಷನ್ ಆಡಿಸಲು ಮುಂದಾಗಿದ್ದರು. ಆದರೆ, ಅದು ಅಷ್ಟು ಪರಿಣಾಮಕಾರಿಯಾಗಿಲ್ಲ. ಹೀಗಾಗಿ ಯಶಸ್ವಿ ಜೈಸ್ವಾಲ್ ಅವಶ್ಯಕತೆ ತಂಡಕ್ಕಿಲ್ಲ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಯಶಸ್ವಿ ಜೈಸ್ವಾಲ್ ಸಿಕ್ಕ ಅವಕಾಶವನ್ನು ಸರಿಯಾಗಿ ಸದುಪಯೋಗಪಡಿಸಿಕೊಂಡಿಲ್ಲ. ಹೀಗಾಗಿ ಆತನ ಬದಲು ಮೊಹಮ್ಮದ್ ಸಿರಾಜ್ಗೆ (Mohammed Siraj) ಅವಕಾಶ ನೀಡುವುದು ಉತ್ತಮ ಎಂದು ನಾನು ಭಾವಿಸುತ್ತೇನೆ.
ತಂಡಕ್ಕೆ ಅನುಭವಿ ಬೌಲರ್ನ ಅವಶ್ಯಕತೆಯಿದ್ದು, ಸಿರಾಜ್ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂಬ ನಂಬಿಕೆ ನನಗಿದೆ. ವಿಶೇಷವಾಗಿ ಪಾಕಿಸ್ತಾನದ ವಿರುದ್ಧದ ಬೌಲಿಂಗ್ ದಾಳಿಯಲ್ಲಿ ಅನುಭವದ ಅಗತ್ಯವನ್ನು ನೀವು ಭಾವಿಸಿದರೆ. ನೀವು ಮೂರು ವೇಗದ ಬೌಲರ್‌ಗಳೊಂದಿಗೆ ಹೋಗಲು ಬಯಸಬಹುದು. ಹೀಗಾಗಿ ಯಶಸ್ವಿ ಜೈಸ್ವಾಲ್ ಬದಲಿಗೆ ಸಿರಾಜ್ ತಂಡದಲ್ಲಿ ಸ್ಥಾನ ಪಡೆಯಬಹುದು ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅಭಪ್ರಾಯಪಟ್ಟಿದ್ದಾರೆ.
ಸೇನೆಯನ್ನು ಗುರಿಯಾಗಿಸಿ ಉಗ್ರರಿಂದ IED ಸ್ಫೋಟ; ಇಬ್ಬರು ಯೋಧರು ಹುತಾತ್ಮ
ಸಹೋದರಿಯ ಅರಿಶಿಣ ಶಾಸ್ತ್ರದಲ್ಲಿ ಡ್ಯಾನ್ಸ್ ಮಾಡುವಾಗ Heart Attack; ಯುವತಿ ಸಾವು, ವಿಡಿಯೋ ವೈರಲ್