ಚಿತ್ರದುರ್ಗ: ನಿಧಿ ಆಸೆಗಾಗಿ ದುರುಳರಿಬ್ಬರು ವ್ಯಕ್ತಿಯನ್ನು ಬಲಿ ಕೊಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಪರಶುರಾಮಪುರದಲ್ಲಿ ನಡೆದಿದೆ. ಘಟನೆ ಸಂಬಂಧ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಸ್ಥಳ ಪರಿಶೀಲನೆ ನಡೆಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಮೃತರನ್ನು ಪ್ರಭಾಕರ್ ಎಂದು ಗುರುತಿಸಲಾಗಿದ್ದು, ಬಂಧಿತ ಆರೋಪಿಗಳ ಹೆಸರು ಆನಂದ್ ರೆಡ್ಡಿ ಹಾಗೂ ಜ್ಯೋತಿಷಿ ರಾಮಕೃಷ್ಣ ಎಂದು ತಿಳಿದು ಬಂದಿದೆ. ಎರಡು ದಿನಗಳ ಹಿಂದೆ ಅಂದರೆ ಫೆಬ್ರವರಿ 09ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪ್ರಕರಣದ ಹಿನ್ನೆಲೆ
ಢಾಬಾದಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ಆಂಧ್ರಪ್ರದೇಶದ ಕಲ್ಯಾಣದುರ್ಗ ತಾಲ್ಲೂಕಿನ ಕುಂದುರ್ಪಿ ಗ್ರಾಮದ ಆನಂದ ರೆಡ್ಡಿ ಎಂಬಾತನಿಗೆ ಪಾವಗಡ ಮೂಲದ ಜ್ಯೋತಿಷಿ ರಾಮಕೃಷ್ಣ ಎಂಬಾತ ಪರಶುರಾಮಪುರ ಪಶ್ಚಿಮದಲ್ಲಿ ನರಬಲಿ ಕೊಟ್ಟು, ಆ ರಕ್ತವನ್ನು ಮಾರಮ್ಮ ದೇವಿಗೆ ಅರ್ಪಿಸಿದ್ರೆ ನಿಧಿ ಸಿಗುತ್ತೆ ಎಂದು ಸುಳ್ಳು ಭವಿಷ್ಯ ಹೇಳಿದ್ದ.
ಜ್ಯೋತಿಷಿ ಮಾತನ್ನು ಬಲವಾಗಿ ನಂಬಿದ್ದ ಆನಂದ್ ರೆಡ್ಡಿ ಫೆಬ್ರವರಿ 09ರ ಸಂಜೆ ಪಶ್ಚಿಮ ದಿಕ್ಕಲ್ಲಿ ಬಂದ ಪ್ರಭಾಕರ್ನನ್ನು ಡ್ರಾಪ್ ಮಾಡುವ ನೆಪದಲ್ಲಿ ಕರೆದೊಯ್ದು ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ. ಘಟನೆ ನಡೆದ ಎರಡು ದಿನದ ಬಳಿಕ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.
ವರನ ಅತಿಯಾಸೆಗೆ ಮುರಿದುಬಿತ್ತು ಮದುವೆ; ಅಷ್ಟಕ್ಕೂ UPSC ಆಕಾಂಕ್ಷಿ ಡಿಮ್ಯಾಂಡ್ ಮಾಡಿದ್ದಾದರು ಏನು?
ಚಾಂಪಿಯನ್ಸ್ ಟ್ರೋಫಿ ತಂಡಕ್ಕೆ Mohammed Siraj ಸೇರ್ಪಡೆ ಫಿಕ್ಸ್! ಒಂದು ವೇಳೆ ಹಾಗಾದರೆ ಈತನಿಗೆ ಗೇಟ್ಪಾಸ್ ಪಕ್ಕಾ