Mumbai Indians: ಐಪಿಎಲ್ 2025ರ ಆವೃತ್ತಿ ಇದೇ ಮೇ.17ರಿಂದ ಪುನಾರಂಭಗೊಳ್ಳಲಿದೆ. ಈ ಮಹತ್ವದ ನಿರ್ಧಾರ ಭಾರತ-ಪಾಕ್ ನಡುವೆ ಯುದ್ಧ ವಿರಾಮ ಘೋಷಣೆಯಾದ ನಂತರ ಮುನ್ನಲೆಗೆ ಬಂದಿತು. ಪ್ರಸಕ್ತ ಐಪಿಎಲ್‌ನಲ್ಲಿ ಸರಣಿ ಗೆಲುವುಗಳಿಂದ ಅಂಕಪಟ್ಟಿಯಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿರುವ ಎಂಐ, ಕೆಲ ವಿದೇಶಿ ಆಟಗಾರರು ತಂಡದಿಂದ ಹೊರಗುಳಿದ ಕಾರಣ ಪ್ಲೇಆಫ್ ಕನಸು ಭಗ್ನಗೊಳ್ಳಲಿದೆ ಎಂದು ಭಾವಿಸಿತ್ತು. ಆದರೆ, ಈಗ ಪ್ಲೇಆಫ್‌ಗೆ ಲಗ್ಗೆಯಿಡಲು ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ.

ಇದನ್ನೂ ಓದಿ: ಒಂದು ವಾರಕ್ಕೂ ಮೊದಲೇ… ಕೊಹ್ಲಿ ಟೆಸ್ಟ್ ನಿವೃತ್ತಿಯ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ರವಿಶಾಸ್ತ್ರಿ! Virat Kohli
ಟೂರ್ನಿಯ ಆರಂಭದಲ್ಲಿ ಸರಣಿ ಸೋಲುಗಳನ್ನು ಅನುಭವಿಸಿದ್ದ ಮುಂಬೈ ಇಂಡಿಯನ್ಸ್, ನಂತರದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಸರಣಿ ಗೆಲುವನ್ನು ದಾಖಲಿಸಿತು. ಈ ಮೂಲಕ ತನ್ನ ಪ್ಲೇಆಫ್ ಕನಸನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ. ಇಲ್ಲಿಯವರೆಗೆ 12 ಪಂದ್ಯಗಳನ್ನು ಆಡಿರುವ ಎಂಐ, 7ರಲ್ಲಿ ಗೆದ್ದು ಐದು ಪಂದ್ಯಗಳನ್ನು ಸೋತಿದೆ. ತಂಡವು ಒಟ್ಟು 14 ಅಂಕಗಳನ್ನು ಮತ್ತು +1.156 ನಿವ್ವಳ ರನ್ ರೇಟ್ ಅನ್ನು ಹೊಂದಿದೆ. ಪ್ರಸ್ತುತ ಪಾಯಿಂಟ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಮುಂಬೈ, ಲೀಗ್ ಹಂತದಲ್ಲಿ ಇನ್ನೂ ಎರಡು ಪಂದ್ಯಗಳನ್ನು ಆಡಲಿದೆ.
ಈ ಎರಡು ಪಂದ್ಯಗಳನ್ನು ಎಂಐ ಗೆದ್ದರೆ, ನೇರವಾಗಿ ಪ್ಲೇಆಫ್‌ಗೆ ಎಂಟ್ರಿ ಪಡೆಯಲಿದೆ. ಕೇವಲ ಒಂದು ಪಂದ್ಯವನ್ನು ಗೆದ್ದರೂ, ಪ್ಲೇಆಫ್ ತಲುಪುವ ಅವಕಾಶವಿದೆ. ಆದಾಗ್ಯೂ, ಇತರ ತಂಡಗಳ ಫಲಿತಾಂಶಗಳ ಮೇಲೂ ಅವಲಂಬಿಸುವ ಅನಿವಾರ್ಯವಿದೆ. ಇದೆಲ್ಲದರ ನಡುವೆ ಕೆಲವು ಕಾರಣಗಳಿಂದಾಗಿ ವಿದೇಶಿ ಆಟಗಾರರು ಮತ್ತೆ ಐಪಿಎಲ್‌ನಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಆರಂಭಿಕ ಒಪ್ಪಂದದ ಪ್ರಕಾರ, ಕೆಲವರು ಮೇ.27 ರವರೆಗೆ ಮಾತ್ರ ಆಯಾ ತಂಡಗಳಿಗೆ ಲಭ್ಯವಿರುತ್ತಾರೆ ಎಂದು ತಿಳಿಸಲಾಗಿತ್ತು. ಹೀಗಿರುವಾಗ ಆಯಾ ಫ್ರಾಂಚೈಸಿಗಳಿಗೆ ಬಿಸಿಸಿಐ ಹೊಸ ಅನುಮತಿ ನೀಡಿದೆ.
ಇದನ್ನೂ ಓದಿ: ಆಪರೇಷನ್ ಸಿಂದೂರ: ದೇಶಸೇವೆಗೆ ಮರಳಿದ ಕಲ್ಯಾಣಿ, ತುರ್ತು ಕರೆ ಮೇರೆಗೆ ಅಸ್ಸಾಂಗೆ ವಾಪಸ್
ಇಂತಹ ಸಂದರ್ಭದಲ್ಲಿ ಹರಾಜಿನಲ್ಲಿ ಮಾರಾಟವಾಗದ ಆಟಗಾರರೊಂದಿಗೆ ಅಲ್ಪಾವಧಿಯ ಒಪ್ಪಂದಗಳನ್ನು ಮಾಡಿಕೊಳ್ಳಲು ಫ್ರಾಂಚೈಸಿಗಳಿಗೆ ಬಿಸಿಸಿಐ ಅನುಮತಿ ನೀಡಿದೆ. ಇದರ ಅನ್ವಯ ತಮ್ಮ ತಂಡಕ್ಕೆ ಅಗತ್ಯವಿರುವ ಆಟಗಾರರನ್ನು ಫ್ರಾಂಚೈಸಿ ಕರೆದುಕೊಳ್ಳಬಹುದಾಗಿದೆ. ಪ್ರಸ್ತುತ ರಿಯಾನ್ ರಿಕಲ್ಟನ್ ಮತ್ತು ವಿಲ್ ಜ್ಯಾಕ್ಸ್ ಡಬ್ಲ್ಯೂಟಿಸಿ ಫೈನಲ್‌ನಲ್ಲಿ ಆಡುತ್ತಿರುವುದರಿಂದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ತೆರಳಿದ್ದಾರೆ. ಈ ಕಾರಣ ಇಬ್ಬರೂ ದೈತ್ಯ ಆಟಗಾರರು ಪ್ಲೇಆಫ್‌ಗೆ ಲಭ್ಯವಿರುವುದಿಲ್ಲ.
ಈ ನಿಟ್ಟಿನಲ್ಲಿ, ಮುಂಬೈ ಇಂಡಿಯನ್ಸ್ ಅವರ ಬದಲಿಗೆ ಜಾನಿ ಬೈರ್‌ಸ್ಟೋವ್ ಮತ್ತು ರಿಚರ್ಡ್ ಗೀಸನ್ ಅವರನ್ನು ಆಯ್ಕೆ ಮಾಡಿಕೊಂಡಿದೆ ಎಂದು ಒಂದಷ್ಟು ವರದಿಗಳು ಉಲ್ಲೇಖಿಸಿವೆ. ಜಾನಿ ಬೈರ್‌ಸ್ಟೋವ್ ಈ ಹಿಂದೆ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಪರ ಅಮೋಘ ಓಪನಿಂಗ್ ಆಟಗಾರರಾಗಿ ಆಡಿದ್ದಾರೆ. ರಿಚರ್ಡ್ ಗ್ಲೀಸನ್ 2024ರ ಐಪಿಎಲ್ ಸೀಸನ್‌ನಲ್ಲಿ ಸಿಎಸ್ಕೆ ಪರ ಆಡಿದ್ದಾರೆ. ಬೈರ್‌ಸ್ಟೋವ್ ಬ್ಯಾಟಿಂಗ್ ಮೇಲೆ ಭಾರೀ ನಿರೀಕ್ಷೆ ಹೊಂದಿರುವ ಫ್ರಾಂಚೈಸಿ, ಅವರ ಸ್ಫೋಟಕ ಇನ್ನಿಂಗ್ಸ್ನಿಂದ ಪ್ಲೇಆಫ್‌ಗೆ ಹೋಗಿ, ಟ್ರೋಫಿ ಎತ್ತುವ ಅಪಾರ ನಿರೀಕ್ಷೆಗಳನ್ನು ಹೊಂದಿದೆ ಎಂದೇ ಹೇಳಬಹುದು,(ಏಜೆನ್ಸೀಸ್).
ಎದೆಗೆ ಚೂರಿ… ಹೆಂಡತಿ ಬಿಡ್ತೀನಿ ಮಕ್ಕಳನ್ನಲ್ಲ! ಆರತಿ ಸರಣಿ ಆರೋಪಗಳ ಬೆನ್ನಲ್ಲೇ ಜಯಂ ರವಿ ಖಡಕ್ ಉತ್ತರ | Jayam Ravi