

ಮುಂಬೈ: ಆಸ್ಪತ್ರೆಯ ವೈದ್ಯರೊಬ್ಬರು ಆನ್‌ಲೈನ್‌ನಲ್ಲಿ ಸಮೋಸಾ ಆರ್ಡರ್ ಮಾಡಲು ಹೋಗಿ 1.40 ಲಕ್ಷ ರೂ. ಕಳೆದು ಕೊಂಡಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.
ಇದನ್ನೂ ಓದಿ: ಹಸುಗೂಸಿನ ಮೃದುವಾದ ತೋಳು, ಕುತ್ತಿಗೆಯನ್ನು ಬ್ಲೇಡ್ನಿಂದ ಕೊಯ್ದ ತಂದೆ..!
ಕೆಇಎಂ ಆಸ್ಪತ್ರೆಯ 27 ವರ್ಷದ ವೈದ್ಯರೊಬ್ಬರು ಸಿಯಾನ್‌ನ ಜನಪ್ರಿಯ ಉಪಾಹಾರ ಗೃಹದಿಂದ 25 ಪ್ಲೇಟ್ ಸಮೋಸಾಗಳನ್ನು ಆರ್ಡರ್ ಮಾಡಿದ ನಂತರ 1.40 ಲಕ್ಷ ರೂಪಾಯಿಗಳನ್ನು ವಂಚಿಸಲಾಗಿದ್ದು, ಶನಿವಾರ ಬೆಳಗ್ಗೆ 8.30ರಿಂದ 10.30ರ ನಡುವೆ ಈ ಘಟನೆ ನಡೆದಿದೆ.
ವೈದ್ಯ ಹಾಗೂ ಆತನ ಸ್ನೇಹಿತರು ಕರ್ಜಾತ್ ಎಂಬಲ್ಲಿ ಪಿಕ್ನಿಕ್ನ್ನು ಆಯೋಜಿಸಿದ್ದು, ಅದಕ್ಕಾಗಿ ಸಮೋಸಾಗಳನ್ನು ಆರ್ಡರ್ ಮಾಡಲು ಆನ್‌ಲೈನ್‌ನಲ್ಲಿ ಹೋಟೆಲ್ನ ನಂಬರ್ನ್ನು ಪತ್ತೆಹಚ್ಚಿದ್ದಾನೆ. ಆಗ ವೈದ್ಯ ಆನ್‌ಲೈನ್‌ನಲ್ಲಿ ದೊರೆತ ಸಂಖ್ಯೆಗೆ ಕರೆ ಮಾಡಿದಾಗ, ಆ ಕಡೆಯಿಂದ ಸೈಬರ್ ಖದೀಮರು ಮುಂಗಡವಾಗಿ ಪಾವತಿಸುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಅಡಳಿತದಲ್ಲಿ ಗೂಂಡಾ ರಾಜಕಾರಣ ರಾರಾಜಿಸುತ್ತಿದೆ: ನಳಿನ್ ಕುಮಾರ್ ಕಟೀಲ್
ವೈದ್ಯರು ತಮ್ಮ ಆರ್ಡರ್ಗಾಗಿ ವಾಟ್ಸ್ಆ್ಯಪ್ ಮೂಲಕ ಸಂದೇಶವನ್ನು ಸ್ವೀಕರಿಸಿದ್ದು, ಅದರಲ್ಲಿ ಆರ್ಡರ್ನ ದೃಢೀಕರಣ ಮತ್ತು ಆನ್‌ಲೈನ್‌ನಲ್ಲಿ ಹಣ ಕಳುಹಿಸಲು ಬ್ಯಾಂಕ್ ಖಾತೆ ಸಂಖ್ಯೆಯನ್ನು ನೀಡಲಾಗಿತ್ತು. ಆಗ ವೈದ್ಯರು 1,500 ರೂ. ಕಳುಹಿಸಿ ಆತನಿಗೆ ಮತ್ತೆ ಕರೆ ಮಾಡಿದ್ದು, ಆ ಕಡೆಯಿಂದ ವ್ಯಕ್ತಿಯೊಬ್ಬ ಅದು ತನಗೆ ಬಂದಿಲ್ಲ. ಈ ಪಾವತಿಗಾಗಿ ವಹಿವಾಟು ಐಡಿಯನ್ನು ರಚಿಸಬೇಕು ಎಂದು ಹೇಳಿ ವಾಟ್ಸ್ಆ್ಯಪ್ನಲ್ಲಿ ಲಿಂಕ್ ಕಳುಹಿಸಿ ಹಲವು ಸೂಚನೆಗಳನ್ನು ನೀಡಿದ್ದಾನೆ. ವೈದ್ಯರು ಆತನ ಸೂಚನೆಗಳನ್ನು ಅನುಸರಿಸಿದ್ದು, ತಮ್ಮ ಅಕೌಂಟ್ನಿಂದ 1.40 ಲಕ್ಷ ರೂ. ಕಡಿತವಾಗಿರುವ ಸಂದೇಶ ಬಂದಿದೆ.
ಕೊನೆಗೆ ತಮಗೆ ಮೋಸವಾಗಿರುವುದನ್ನು ಅರಿತ ವೈದ್ಯರು, ಭೋಯಿವಾಡ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.(ಏಜೆನ್ಸೀಸ್)