

ಮುಂಬೈ: ಬಾಲಿವುಡ್ ನಟಿಯೊಬ್ಬರು ಮೂರು ನಿಮಿಷಗಳ ಅಭಿನಯಕ್ಕಾಗಿ ಮೂರು ಕೋಟಿ ರೂ.ಗಳನ್ನು ತೆಗೆದುಕೊಂಡಿದ್ದಾರೆ ಎನ್ನುವ ಬಿಸಿ ಬಿಸಿ ಚರ್ಚೆ ಬಿಟೌನ್ನಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಶಾಲಾ ಶಿಕ್ಷಕರಿಗೂ ಜಾರಿಯಾಗುತ್ತಾ ಸಮವಸ್ತ್ರ?
ಹೌದು, ಸ್ಯಾಂಡಲ್ವುಡ್ನಲ್ಲಿ ನಟ ದರ್ಶ್ನ್ ಜತೆಗೆ ಅಭಿನಯಿಸಿದ್ದ ನಟಿ ಊರ್ವಶಿ ರೌಟೇಲಾ ಪ್ಯಾರಿಸ್ ಫ್ಯಾಶನ್ ವೀಕ್‌ನಲ್ಲಿ ಭಾಗವಹಿಸಿದ ನಂತರ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಲು ಹೊರಟಿದ್ದಾರೆ ಎನ್ನುವ ಮಾತುಗಳು ಚಿತ್ರರಂಗದಲ್ಲಿ ಕೇಳಿ ಬರುತ್ತಿವೆ.
ಬೋಯಪತಿ ಶ್ರೀನು ಮತ್ತು ರಾಮ್ ಪೋತಿನೇನಿಯ ಮುಂಬರುವ ಚಿತ್ರದಲ್ಲಿ ಊರ್ವಶಿ ಐಟಂ ಸಾಂಗ್ ಮಾಡಲಿದ್ದಾರೆ ಎಂಬ ಊಹಾಪೋಹಗಳ ನಡುವೆ, ನಟಿ ತನ್ನ ಮೂರು ನಿಮಿಷಗಳ ಅಭಿನಯಕ್ಕಾಗಿ 3 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. 2022ರ ಅಕ್ಟೋಬರ್ನಲ್ಲಿ ನಟಿಯು ಇನ್ಸ್ಟಾಗ್ರಾಮ್ನಲ್ಲಿ, ರಾಮ್ ಪೋತಿನೇನಿ ಅವರೊಂದಿಗಿನ ಚಿತ್ರವನ್ನು ಹಂಚಿಕೊಂಡು, ಅವರೊಂದಿಗೆ ಕೆಲಸ ಮಾಡುವ ಸುಳಿವನ್ನು ನೀಡಿದ್ದರು.
ಇದನ್ನೂ ಓದಿ: ಜಿಮ್‌ನಲ್ಲಿ ವರ್ಕೌಟ್: ಎದೆಯಲ್ಲಿ ನೋವು, ಹಠಾತ್ ಹೃದಯಾಘಾತದಿಂದ ಯುವಕ ಮೃತ
ಆಕರ್ಷಕ ಐಟಂ ಸಾಂಗ್ಗಳ ಮೂಲಕ ಖ್ಯಾತಿ ಗಳಿಸಿರುವ ಊರ್ವಶಿ, ಈ ಹಿಂದೆ ಚಿರಂಜೀವಿ ಮತ್ತು ಶ್ರುತಿ ಹಾಸನ್ ಅಭಿನಯದ ವಾಲ್ಟೇರ್ ವೀರಯ್ಯ ಚಿತ್ರಕ್ಕಾಗಿ 2 ಕೋಟಿ ಚಾರ್ಜ್ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಅಲ್ಲದೆ, ಬಹುನಿರೀಕ್ಷಿತ ಅಲ್ಲು ಅರ್ಜುನ್ ಅಭಿನಯದ ಪುಷ್ಪ- 2ನಲ್ಲಿ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರನ್ನು ಸೆಳೆಯಲು ನಟಿ ಸಜ್ಜಾಗಿದ್ದಾರೆ ಎಂಬ ಮಾತುಗಳು ಸಾಕಷ್ಟು ಚಿತ್ರರಂಗದಲ್ಲಿ ಹರಿದಾಡುತ್ತಿವೆ.(ಏಜೆನ್ಸೀಸ್)