More

    VIDEO| ಶಾಲಾ ಕಟ್ಟಡದಲ್ಲಿ ಸಿಲುಕಿದ್ದ 730 ವಿದ್ಯಾರ್ಥಿನಿಯರ ರಕ್ಷಣೆ

    ಅಂಬಾಲಾ: ಪ್ರವಾಹದಿಂದಾಗಿ ಶಾಲಾ ಕಟ್ಟಡದಲ್ಲಿ ಸಿಲುಕಿದ್ದ ಸುಮಾರು 730 ವಿದ್ಯಾರ್ಥಿಗಳನ್ನು ರಕ್ಷಿಸಿದ ಘಟನೆ , ಹರಿಯಾಣದ ಅಂಬಾಲಾದಲ್ಲಿ ನಡೆದಿದೆ.

    ಇದನ್ನೂ ಓದಿ: ಮರ್ಮಾಂಗ ಕತ್ತರಿಸಿಕೊಂಡು MBBS ವಿದ್ಯಾರ್ಥಿ ಸಾವಿಗೆ ಶರಣು: ನಿಗಾ ವಹಿಸಿದ್ರೂ ಉಳೀಲಿಲ್ಲ ಪುತ್ರ; ಪಾಲಕರ ಆಕ್ರಂದನ

    ಚಮನ್ ವಾಟಿಕಾ ಕನ್ಯಾ ಗುರುಕುಲದ 730 ವಿದ್ಯಾರ್ಥಿನಿಯರನ್ನು ಎನ್‌ಡಿಆರ್‌ಎಫ್, ಪೊಲೀಸರು ಮತ್ತು ಸೇನೆಯು ಜಂಟಿಯಾಗಿ ರಕ್ಷಿಸಿದ್ದು, ಈ ಕಾರ್ಯಕ್ಕೆ ಸ್ಥಳೀಯರು ಕೂಡ ಸಾಥ್​ ನೀಡಿದ್ದಾರೆ. ಪಂಜಾಬ್ ಮತ್ತು ಹರಿಯಾಣದಾದ್ಯಂತ ಭಾರೀ ಮಳೆಯು ಜನಜೀವನದ ಮೇಲೆ ಪರಿಣಾಮ ಬೀರಿದೆ. ಅಲ್ಲದೇ, ತೀವ್ರ ಜಲಾವೃತದಿಂದಾಗಿ ರೈಲ್ವೇ ಹಳಿಗಳು ನೀರಿನ ಅಡಿಯಲ್ಲಿ ಸಿಲುಕಿದ್ದು, ಹಲವಾರು ರೈಲು ರದ್ದಾಗಿವೆ.

    ಕಳೆದ 78 ಗಂಟೆಗಳಿಂದ ಸುರಿಯುತ್ತಿರುವ ಭಾರಿ ಮಳೆ ಹಾಗೂ ಪ್ರವಾಹದಿಂದಾಗಿ ಉತ್ತರ ಭಾಗದ ಬಹುತೇಕ ರಾಜ್ಯಗಳು ತತ್ತರಿಸಿವೆ. ಪರಿಣಾಮವಾಗಿ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದು, ಕೆಲವು ಕಡೆ ಪ್ರವಾಹವು ಹಾಹಾಕಾರ ಎಬ್ಬಿಸಿದೆ. ಹಿಮಾಚಲ, ಉತ್ತರಾಖಂಡ, ದೆಹಲಿ, ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ದೇಶಾದ್ಯಂತ ಮಳೆಯಿಂದಾಗಿ ಈವರೆಗೆ 70ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.(ಏಜೆನ್ಸೀಸ್​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts