ಮರ್ಮಾಂಗ ಕತ್ತರಿಸಿಕೊಂಡು MBBS ವಿದ್ಯಾರ್ಥಿ ಸಾವಿಗೆ ಶರಣು: ನಿಗಾ ವಹಿಸಿದ್ರೂ ಉಳೀಲಿಲ್ಲ ಪುತ್ರ; ಪಾಲಕರ ಆಕ್ರಂದನ

MBBS Student
Published on

ಹೈದರಾಬಾದ್​: ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದ ಎಂಬಿಬಿಎಸ್​ ವಿದ್ಯಾರ್ಥಿಯೊಬ್ಬ ತನ್ನ ಮರ್ಮಾಂಗ ಕತ್ತರಿಸಿಕೊಂಡು ಸಾವಿಗೆ ಶರಣಾಗಿರುವ ಆಘಾತಕಾರಿ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಪಾಲಕರು ಮನೆಯಿಂದ ಹೊರಗಡೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ದೀಕ್ಷಿತ್​ ರೆಡ್ಡಿ (21) ಮೃತ ವಿದ್ಯಾರ್ಥಿ. ಈತ ಸಿಕಂದರಬಾದ್​​ನಲ್ಲಿರುವ ಗಾಂಧಿ ಮೆಡಿಕಲ್​ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್​ ಓದುತ್ತಿದ್ದ. ಭಾನುವಾರ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾನಸಿಕವಾಗಿ ತೀವ್ರವಾಗಿ ಕುಗ್ಗಿದ್ದರಿಂದ ಈ ದುಡುಕಿನ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆಯೂ ಯತ್ನಿಸಿದ್ದ

ಮೃತ ದೀಕ್ಷಿತ್, ವಾರಗಂಲ್​ ಜಿಲ್ಲೆಯ ದೇವರಪ್ಪುಳ ಗ್ರಾಮದವನು. ಸೊಮಿರೆಡ್ಡಿ ಮತ್ತು ಕರುಣಾ ದಂಪತಿಯ ಪುತ್ರ. ಸುಮಾರು 20 ವರ್ಷಗಳ ಹಿಂದೆಯೇ ವಾರಂಗಲ್​ನಿಂದ ಹೈದರಾಬಾದ್​ ಉಪನಗರ ಪಾಪಿರೆಡ್ಡಿಗೆ ಬಂದು ನೆಲೆಸಿದ್ದರು. ದೀಕ್ಷಿತ್​ಗೆ ಓರ್ವ ಸಹೋದರಿ ಸಹ ಇದ್ದಾಳೆ. ಕೆಲವು ದಿನಗಳಿಂದ ದೀಕ್ಷಿತ ಮಾನಸಿಕ ರೋಗದಿಂದ ಬಳಲುತ್ತಿದ್ದ. ಯಾವಾಗಲೂ ಸಪ್ಪೆಯಾಗಿರುತ್ತಿದ್ದ. ಹೀಗಾಗಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದ. ಈ ಹಿಂದೆಯೂ ಒಮ್ಮೆ ನಿದ್ರೆ ಮಾತ್ರೆಗಳನ್ನು ನುಂಗಿ ಸಾವಿಗೆ ಶರಣಾಗಲು ಯತ್ನಿಸಿದ್ದ. ಆದರೆ, ಅಪಾಯದಿಂದ ಪಾರಾಗಿದ್ದ.

ಈ ಬಾರಿ ನಡೆಯಿತು ದುರಂತ

ಆತ್ಮಹತ್ಯೆಗೆ ಯತ್ನಿಸಿದ ದಿನದಿಂದ ದೀಕ್ಷಿತ್​ ಮೇಲೆ ಪಾಲಕರು ವಿಶೇಷ ಗಮನ ಹರಿಸಿದ್ದರು. ವೈದ್ಯರ ಮೇಲ್ವಿಚಾರಣೆಯೊಂದಿಗೆ ದೀಕ್ಷಿತ್​ಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಕಿರಿಯ ವಯಸ್ಸಿನಲ್ಲೇ ಮಾತ್ರೆಗಳನ್ನು ಸೇವಿಸಬೇಕಲ್ಲ ಎಂಬ ನೋವಿನಲ್ಲೂ ದೀಕ್ಷಿತ್​, ಖಿನ್ನತೆಗೆ ಜಾರಿದ್ದರು. ಆದರೆ, ಈ ಬಾರಿ ಪಾಲಕರು ಭಾನುವಾರ ಹೊರಗಡೆ ಹೋಗಿ, ಸಂಜೆ 5 ಗಂಟೆಗೆ ಮನೆಗೆ ಮರಳಿದರು. ಈ ವೇಳೆ ಎಷ್ಟೇ ಬಾಗಿಲು ಬಡಿದರು ದೀಕ್ಷಿತ್​ ಬಾಗಿಲ್​ ತೆರೆಯಲೇ ಇಲ್ಲ. ಬಳಿಕ ಕಿಟಕಿಯಿಂದ ನೋಡಿದಾಗ ದೀಕ್ಷಿತ್, ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಪಾಲಕರು ಆಘಾತದಿಂದ ಕುಸಿದುಬಿದ್ದರು.

ತೀವ್ರ ಮಾನಸಿಕವಾಗಿ ಕುಂದಿದ್ದ ದೀಕ್ಷಿತ್​ ತನ್ನ ಮರ್ಮಾಂಗವನ್ನು ಕತ್ತರಿಸಿಕೊಂಡು ಸಾವಿಗೆ ಶರಣಾಗಿದ್ದು, ಎಂಬಿಬಿಎಸ್​ ಓದುತ್ತಿದ್ದ ಮಗನನ್ನು ಕಳೆದುಕೊಂಡ ಪಾಲಕರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net