More

    ಬದಲಾಯಿತು ಪಾಕ್​ ಮಹಿಳೆಯ ಜೀವನ ಶೈಲಿ: ಮಾಂಸಾಹಾರಿ ಸೀಮಾ ಈಗ ಸಸ್ಯಾಹಾರಿ, ನಿತ್ಯವೂ ದೇವರ ಸೇವೆ!

    ನವದೆಹಲಿ: ಉತ್ತರ ಪ್ರದೇಶದ ಗ್ರೇಟರ್​ ನೋಯ್ಡಾದಲ್ಲಿರುವ ಪ್ರಿಯಕರನ ಜತೆ ನೆಲೆಸಲು ತನ್ನ ನಾಲ್ವರು ಮಕ್ಕಳೊಂದಿಗೆ ಭಾರತಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ, ಬಂಧನವಾಗಿ, ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಪಾಕಿಸ್ತಾನದ ಮಹಿಳೆ ಸೀಮಾ ಹೈದರ್, ಇದೀಗ ಭಾರತದ ಸಂಸ್ಕೃತಿಯ ಅಳವಡಿಸಿಕೊಂಡಿದ್ದು, ತುಂಬಾ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

    ಇಂಡಿಯಾ ಟುಡೆ ಮಾಧ್ಯಮದೊಂದಿಗೆ ಮಾತನಾಡಿರುವ ಸೀಮಾ, ಭಾರತೀಯ ಸಂಸ್ಕೃತಿಯನ್ನು ಮನಃಪೂರ್ವಕವಾಗಿ ಸ್ವೀಕರಿಸಿರುವುದಾಗಿ ಮತ್ತು ಇನ್ಮುಂದೆ ಪಾಕಿಸ್ತಾನಕ್ಕೆ ಮರಳಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಅಂನವಾಡಿಗಳಿಗೆ ತಿಂಗಳಿಗೆ ಒಂದೇ ದಿನ ಮೊಟ್ಟೆ ಸರಬರಾಜು ಪೌಷ್ಟಿಕ ಆಹಾರವಾಗಿ ನೀಡುವ ಮೊಟ್ಟೆಗಳು ಬಳಕೆಗೆ ಯೋಗ್ಯವಲ್ಲ

    ಬದಲಾಯಿತು ಜೀವನಶೈಲಿ

    ಕೊರಳಿನ ಸುತ್ತ ರಾಧೆ-ರಾಧೆ ತೊಗಲಪಟ್ಟಿ, ಕೈಮುಗಿದು ಜನರನ್ನು ಸತ್ಕರಿಸುವುದು, ಕಾಲಿಗೆ ಬಿದ್ದು ಹಿರಿಯ ಆಶೀರ್ವಾದ ಪಡೆಯುವುದು ಮತ್ತು ನಿತ್ಯವೂ ದೇವರನ್ನು ಪೂಜಿಸುವುದು ಸೀಮಾರ ನಿತ್ಯದ ಕಾಯಕವಾಗಿದೆ. ಭಾರತೀಯ ಸಂಸ್ಕೃತಿಗೆ ಮಾರುಹೋಗಿರುವು ಸೀಮಾ, ಭಾರತ ಈಗ ನನ್ನ ಸ್ವಂತ ದೇಶ ಎಂಬದೇ ಒಂದು ಅದ್ಭುತ ಭಾವನೆ ಎಂದಿದ್ದಾರೆ.

    ಸಸ್ಯಹಾರಿ ಸೀಮಾ

    ನಾನು ಹಿಂದೂ ಧರ್ಮವನ್ನು ಸಂಪೂರ್ಣವಾಗಿ ಸ್ವೀಕರಿಸಿದ್ದೇನೆ ಮತ್ತು ಬೆಳ್ಳುಳ್ಳಿಯನ್ನೇ ಸೇವಿಸದ ಸಚಿನ್ ಕುಟುಂಬದಂತೆ ಸಸ್ಯಾಹಾರಿ ಜೀವನಶೈಲಿ ಅಳವಡಿಸಿಕೊಂಡಿದ್ದೇನೆ ಎಂದು ಸೀಮಾ ಹೇಳಿದರು. ಪಾಕಿಸ್ತಾನಕ್ಕೆ ಮರಳಲು ನನಗೆ ಇಷ್ಟವಿಲ್ಲ. ಒಂದು ವೇಳೆ ಪಾಕಿಸ್ತಾನಕ್ಕೆ ಮರಳಿದರೆ ನನ್ನನ್ನು ಕೊಲ್ಲುವ ಸಾಧ್ಯತೆ ಇದೆ ಎಂದು ಸೀಮಾ ತಿಳಿಸಿದರು.

    ಜೀವನದಲ್ಲಿ ಗೈರಾದರು

    ತನ್ನ ಮಕ್ಕಳಿಗೆ ಪಾಕಿಸ್ತಾನಕ್ಕೆ ಮರಳಲು ಅವಕಾಶ ಇದೆ. ಆದರೆ, ಅವರು ನನ್ನೊಂದಿಗೆ ಉಳಿಯಲು ನಿರ್ಧಾರ ಮಾಡಿದ್ದಾರೆ. ನನ್ನ ಮೊದಲ ಪತಿ ಗುಲಾಮ್​, 2020ರಿಂದಲೂ ನನ್ನ ಜೀವನದಲ್ಲಿ ಗೈರಾದರು. ನನ್ನ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿಲ್ಲ. ತೀರಾ ಅಪರೂಪಕ್ಕೆ ಸಿಗುತ್ತಿದ್ದರು. ಜೀವನದಲ್ಲಿ ಬೇಕಾದ ಪ್ರೀತಿ ಅವರಿಂದ ಸಿಗಲಿಲ್ಲ. ಗುಲಾಮ್​ ಹೆಚ್ಚಿನ ದಿನ ಸೌದಿ ಅರೇಬಿಯಾದಲ್ಲಿ ಕಳೆಯುತ್ತಿದ್ದರು. ಈ ಸಮಯದಲ್ಲಿ ನನ್ನ ಏಕಾಂಗಿತನವನ್ನು ಹೋಗಿಸಿದ್ದು, ಸಚಿನ್​ ಎಂದು ಸೀಮಾ ಹೇಳಿದ್ದಾರೆ.

    ಸಚಿನ್ ಈಗ ನನ್ನ ಗಂಡ

    ತನ್ನ ಮುಖದ ಮೇಲೆ ಮೆಣಸಿನ ಪುಡಿಯನ್ನು ಹಾಕಿದ ಭಯಾನಕ ಘಟನೆಯು ಸೇರಿದಂತೆ ಗುಲಾಮ್‌ನಿಂದ ಅನುಭವಿಸಿದ ಕರಾಳ ಇತಿಹಾಸವನ್ನು ಸೀಮಾ ಇದೇ ಸಂದರ್ಭದಲ್ಲಿ ವಿವರಿಸಿದರು. ಸಚಿನ್ ಈಗ ತನ್ನ ಗಂಡನಾಗಿದ್ದಾನೆ ಮತ್ತು ನಾನು ಅವನೊಂದಿಗೆ ತುಂಬಾ ಸಂತೋಷವಾಗಿದ್ದೇನೆ ಎಂದು ಸೀಮಾ ತನ್ನ ಅಗಾಧ ಪ್ರೀತಿಯನ್ನು ವ್ಯಕ್ತಪಡಿಸಿದರು.

    ಇದನ್ನೂ ಓದಿ: ಐಐಟಿಗಳ ಪ್ರವೇಶಕ್ಕೆ ಒಂದೇ ಪರೀಕ್ಷೆ: ಜೆಇಇ ಅಡ್ವಾನ್ಸ್ಡ್​ ಕೊಕ್? ಐಐಟಿ ನಿರ್ವಹಣಾ ಮಂಡಳಿ ಸಭೆಯಲ್ಲಿ ಚರ್ಚೆ

    ಹರಿದು ಬರುತ್ತಿದೆ ಹಣದ ನೆರವು

    ಮಕ್ಕಳು ಕೂಡ ಸಚಿನ್ ಅವರನ್ನು ತಮ್ಮ ತಂದೆಯಂತೆಯೇ ಸ್ವೀಕರಿಸಿದ್ದಾರೆ ಎಂದು ಸೀಮಾ ಹೇಳಿದರು. ಅನೇಕ ಜನರು ಅವಳನ್ನು ಭೇಟಿಯಾಗಲು ಮತ್ತು ಅವಳ ಹೊಸ ಜೀವನವನ್ನು ಬೆಂಬಲಿಸಲು ಹಣಕಾಸಿನ ನೆರವು ನೀಡಲು ಆಕೆಯ ಅತ್ತೆಯ ಮನೆಗೆ ಭೇಟಿ ನೀಡುತ್ತಿದ್ದಾರೆ.

    ಘಟನೆ ಹಿನ್ನೆಲೆ ಏನು?

    ವೀಸಾ ಇಲ್ಲದೆ ನೇಪಾಳದ ಮೂಲಕ ತನ್ನ ನಾಲ್ವರು ಮಕ್ಕಳೊಂದಿಗೆ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಪಾಕಿಸ್ತಾನ ಮೂಲದ ಸೀಮಾಳನ್ನು ಜುಲೈ 4ರಂದು ಬಂಧಿಸಲಾಯಿತು. ಆಕೆಗೆ ಆಶ್ರಯ ನೀಡಿದ ಹಿನ್ನೆಲೆಯಲ್ಲಿ ಸಚಿನ್​ನನ್ನು ಜೈಲಿಗೆ ಅಟ್ಟಲಾಗಿತ್ತು. ಇವರಿಬ್ಬರ ಪ್ರೇಮಕತೆ ಯಾವ ಬಾಲಿವುಡ್​ ಸಿನಿಮಾಗೂ ಕಮ್ಮಿ ಇಲ್ಲ. ಕೋವಿಡ್​ ಸಾಂಕ್ರಮಿಕ ಸಂದರ್ಭದಲ್ಲಿ ಆನ್​ಲೈನ್​ನಲ್ಲಿ ಪ್ಲೇಯರ್​ ಅನ್​ನೌನ್​ ಬ್ಯಾಟಲ್​ಗ್ರೌಂಡ್​ (ಪಬ್​ಜಿ) ಗೇಮ್​ ಆಡುವಾಗ ಇಬ್ಬರ ನಡುವೆ ಶುರುವಾದ ಪರಿಚಯ, ಪ್ರೀತಿಗೆ ತಿರುಗಿ, ಕೊನೆಗೆ ತನ್ನ ಪ್ರಿಯಕರನನ್ನು ಹುಡುಕಿಕೊಂಡು ಬರುವಂತೆ ಪ್ರೇರೇಪಿಸಿತು. 30 ವರ್ಷದ ಸೀಮಾ ಹಾಗೂ 25 ವರ್ಷದ ಸಚಿನ್​ ಕಳೆದ ಮಾರ್ಚ್​ ತಿಂಗಳಲ್ಲಿ ನೇಪಾಳದಲ್ಲಿ ಮದುವೆಯಾದರು. ಇದು ಇವರಿಬ್ಬರ ಮೊದಲ ಭೇಟಿಯಾಗಿತ್ತು. ಮೊದಲ ಭೇಟಿಯಲ್ಲೇ ಮದುವೆ ಮಾಡಿಕೊಂಡಿದ್ದರು. ಅಲ್ಲಿಂದ ಭಾರತಕ್ಕೆ ಬಂದು ಇಲ್ಲಿನ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದು, ಇಬ್ಬರು ಜೈಲುಪಾಲಾಗಿದ್ದರು. ಕಳೆದ ಶುಕ್ರವಾರ (ಜು.7) ಇಬ್ಬರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಹೊಸ ಜೀವನ ಆರಂಭಿಸುವ ತವಕದಲ್ಲಿದ್ದಾರೆ. (ಏಜೆನ್ಸೀಸ್​)

    ಮದ್ವೆಯಾದ ಕೆಲವೇ ದಿನಗಳಲ್ಲಿ ನವವಿವಾಹಿತೆ ದಾರುಣ ಸಾವು: ಮುಗಿಲು ಮುಟ್ಟಿದ ಗಂಡ ಆಕ್ರಂದನ

    ಜಗದಲ್ಲಿ ಸಿಂಹಪಾಲು, ಜನಸಂಖ್ಯೆಯ ಸವಾಲು: ಪ್ರಪಂಚದ ಪ್ರತಿ ನೂರು ಜನರಲ್ಲಿ 17 ಭಾರತೀಯರು

    15 ಲಕ್ಷ ಕುಟುಂಬಗಳಿಗಿಲ್ಲ ಅನ್ನಭಾಗ್ಯ ಗ್ಯಾರಂಟಿ ಹಣ!; ನಿಷ್ಕ್ರಿಯ ಬ್ಯಾಂಕ್ ಖಾತೆ, ಆಧಾರ್ ಲಿಂಕ್, ಇ-ಕೆವೈಸಿ ಇಲ್ಲದ್ದೇ ಸಮಸ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts