More

    ಕಾಂಗ್ರೆಸ್ ಇಲ್ಲಿ ಸಾಯ್ತಿದ್ರೆ, ಪಾಕಿಸ್ತಾನ ಅಳುತ್ತಿದೆ: ಪ್ರಧಾನಿ ಮೋದಿ ವ್ಯಂಗ್ಯ

    ಗಾಂಧಿನಗರ: ಭಾರತದಲ್ಲಿ ಕಾಂಗ್ರೆಸ್ ಪಕ್ಷ ದಿನದಿಂದ ದಿನಕ್ಕೆ ದುರ್ಬಲಗೊಳ್ಳುತ್ತಿದೆ, ಕಾಂಗ್ರೆಸ್​ ಇಲ್ಲಿ ಸಾಯುತ್ತಿದ್ದರೆ ಪಾಕಿಸ್ತಾನ ಕಣ್ಣೀರು ಹಾಕುತ್ತಿದೆ ಅಳುತ್ತಿದೆ ಎಂದು ಪ್ರಧಾನಿ ಮೋದಿ ಅವರು ಆಕ್ರೋಶ ವ್ಯಕ್ತಪಡಿಸಿದರು.

    ಇದನ್ನೂ ಓದಿ: ಲೋಕ ಸಮರ: ಕೈಸರ್‌ಗಂಜ್‌ ಕ್ಷೇತ್ರದಿಂದ ಬ್ರಿಜ್ ಭೂಷಣ್‌ರನ್ನು ಕೈಬಿಟ್ಟು, ಮಗನನ್ನು ಕಣಕ್ಕಿಳಿಸಿದ ಬಿಜೆಪಿ!

    ಗುಜರಾತ್​ನ ಆನಂದ್ ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ ಅವರು, ರಾಹುಲ್ ಗಾಂಧಿ ಪ್ರಧಾನಿಯಾಗಲಿ ಎಂದು ಪಾಕಿಸ್ತಾನದವರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಂಪುಟದಲ್ಲಿ ಸಚಿವರಾಗಿದ್ದ ಫವಾದ್ ಚೌಧುರಿ ತಮ್ಮ ಎಕ್ಸ್ ನಲ್ಲಿ ಹಾಕಿದ್ದ ಪೋಸ್ಟ್ ಅನ್ನು ಉಲ್ಲೇಖಿಸಿ ವ್ಯಂಗ್ಯವಾಡಿದರು.

    ಕಾಂಗ್ರೆಸ್​ನ ಪಾಕ್​ ಅನುಯಾಯಿ, ದುರ್ಬಲ ಸರ್ಕಾರ ಭಾರತದಲ್ಲಿ ಚುಕ್ಕಾಣಿ ಹಿಡಿಯಬೇಕು ಎಂದು ವಿಶ್ವದ ಕೆಲವು ಶಕ್ತಿಗಳು ಬಯಸುತ್ತವೆ. ನಾವು `ಲವ್ ಜಿಹಾದ್’ ಮತ್ತು `ಲ್ಯಾಂಡ್ ಜಿಹಾದ್’ ಬಗ್ಗೆ ಕೇಳಿದ್ದೇವೆ. ಆದರೆ ಇಂಡಿಯಾ ಮೈತ್ರಿಕೂಟ ನಾಯಕರೊಬ್ಬರು ಈಗ `ವೋಟ್ ಜಿಹಾದ್’ಗೆ ಕರೆ ನೀಡಿದ್ದಾರೆ ಇದು ತುಷ್ಟೀಕರಣ ರಾಜಕೀಯದ ಒಂದು ಭಾಗ ಎಂದು ಪ್ರಧಾನಿ ಮೋದಿ ಅವರು ವಾಗ್ದಾಳಿ ನಡೆಸಿದರು.

    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಒಬಿಸಿ ಮೀಸಲಾತಿಯನ್ನು ಮುಸ್ಲಿಂ ಸಮುದಾಯಕ್ಕೆ ನೀಡಲು ದೇಶದ ಸಂವಿಧಾನವನ್ನು ಬದಲಿಸಲು ಕಾಂಗ್ರೆಸ್​ ಬಯಸಿದೆ. ಧಾರ್ಮಿಕತೆ ಅಧಾರದ ಮೇಲೆ ಮೀಸಲಾತಿ ನೀಡಲು ಸಂವಿಧಾನವನ್ನು ಬದಲಾಯಿಸುವುದಿಲ್ಲ. ಅದರ ಮಿತ್ರ ಪಕ್ಷಗಳು ಸರ್ಕಾರಗಳ ಮೂಲಕ ಹಿಂಬಾಗಿಲಿನ ಮೂಲಕ ಮೀಸಲಾತಿ ನೀಡುವುದಿಲ್ಲ ಎಂದು ಲಿಖಿತವಾಗಿ ನೀಡಲಿ ಎಂದು ಕಾಂಗ್ರೆಸ್ ಮತ್ತು ಅದರ ಮಿತ್ರಕೂಟಕ್ಕೆ ಸವಾಲು ಹಾಕಿದರು.

    2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಅವಿರತವಾಗಿ ಶ್ರಮಿಸುವುದಾಗಿ ಪ್ರಧಾನಿ ಮೋದಿ ಅವರು ಭರವಸೆ ನೀಡಿದರು.

    7 ವರ್ಷದ ಬಾಲಕನನ್ನು ಕಚ್ಚಿದ್ದಕ್ಕೆ ಸಾಕು ನಾಯಿಯನ್ನೇ ಕೊಂದು ತಿಂದ ಭೂಪ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts