More

    ಲೋಕ ಸಮರ: ಕೈಸರ್‌ಗಂಜ್‌ ಕ್ಷೇತ್ರದಿಂದ ಬ್ರಿಜ್ ಭೂಷಣ್‌ರನ್ನು ಕೈಬಿಟ್ಟು, ಮಗನನ್ನು ಕಣಕ್ಕಿಳಿಸಿದ ಬಿಜೆಪಿ!

    ನವದೆಹಲಿ: ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್​ ಮಾಜಿ ಅಧ್ಯಕ್ಷ ಬ್ರಿಜೆಭೂಷನ್​ ಶರಣ್​ ಸಿಂಗ್​ ಪ್ರತಿನಿಧಿಸುತ್ತಿದ್ದ ಉತ್ತರಪ್ರದೇಶದ ಕೈಸರ್‌ಗಂಜ್‌ ಲೋಕಸಭಾ ಕ್ಷೇತ್ರದಿಂದ ಅವರ ಮಗ ಕರಣ್ ಭೂಷಣ್ ಸಿಂಗ್ ಅವರಿಗೆ ಟಿಕೆಟ್​​​ ನೀಡಲಾಗಿದೆ.

    ಇದನ್ನೂ ಓದಿ: 7 ವರ್ಷದ ಬಾಲಕನನ್ನು ಕಚ್ಚಿದ್ದಕ್ಕೆ ಸಾಕು ನಾಯಿಯನ್ನೇ ಕೊಂದು ತಿಂದ ಭೂಪ!

    ಮಹಿಳಾ ಕುಸ್ತಿಪಟುಗಳಿಗೆ ಕಿರುಕುಳ ನೀಡಿರುವ ಆರೋಪ ಹೊತ್ತಿರುವ ಬ್ರಿಜ್​ ಭೂಷಣ್​ ಶರಣ್​ಸಿಂಗ್​​​ಗೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್​ ಇಲ್ಲ ಎಂದು ಹೇಳಲಾಗಿತ್ತು. ಇದೀಗ ಅವರ ಮಗನಿಗೆ ಟಿಕೆಟ್​​​ ನೀಡಲಾಗಿದೆ. ಇನ್ನು ಉತ್ತರಪ್ರದೇಶದ ರಾಯ್ ಬರೇಲಿಯಿಂದ ಯೋಗಿ ದಿನೇಶ್ ಪ್ರತಾಪ್ ಸಿಂಗ್​ಗೆ ಟಿಕೆಟ್​ ನೀಡಲಾಗಿದೆ.

    ಕರಣ್ ಭೂಷಣ್ ಸಿಂಗ್ ಪ್ರಸ್ತುತ ಉತ್ತರ ಪ್ರದೇಶದ ಕುಸ್ತಿ ಸಂಘದ ಅಧ್ಯಕ್ಷರಾಗಿದ್ದಾರೆ. ಜತೆಗೆ ಗೊಂಡಾದ ನವಾಬ್‌ಗಂಜ್‌ನಲ್ಲಿರುವ ಸಹಕಾರಿ ಗ್ರಾಮಾಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷರೂ ಆಗಿದ್ದಾರೆ. ತಂದೆಯ ಮೇಲೆ ಆರೋಪ ಇದ್ದರ ಕಾರಣ ಈ ಬಾರಿ ಪಕ್ಷ ಅವರಿಗೆ ಟಿಕೆಟ್​​​ ನೀಡಿಲ್ಲ, ಅವರ ಮಗನಿಗೆ ಲೋಕಸಭೆಯಲ್ಲಿ ಟಿಕೆಟ್​​​ ನೀಡಿದೆ. ಬಿಬಿಎ ಓದಿರುವ ಕರಣ್ ಸಿಂಗ್​ ಆಸ್ಟ್ರೇಲಿಯಾದ ಬಿಸಿನೆಸ್​ ಮಾನೇಜ್ಮೆಂಟ್ ಡಿಪ್ಲೊಮಾ ಸಹ ಪಡೆದಿದ್ದಾರೆ.

    2009ರಿಂದ ಇದೇ ಮೊದಲ ಬಾರಿಗೆ ಈ ಕ್ಷೇತ್ರದ ಹಾಲಿ ಸಂಸದ ಹಾಗೂ ಪ್ರಭಾವಿ ನಾಯಕರಾಗಿದ್ದ ಬ್ರಿಜ್​ಭೂಷಣ್ ಅವರನ್ನು ಬಿಜೆಪಿ ಚುನಾವಣಾ ಕಣದಿಂದ ಹೊರಗಿಟ್ಟಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ, ಬ್ರಿಜ್ ಭೂಷಣ್ ಅವರು ಕೈಸರ್‌ಗಂಜ್‌ನಿಂದ ಚುನಾವಣೆಯಲ್ಲಿ ಎರಡು ಲಕ್ಷ ಮತಗಳಿಂದ ಗೆಲುವು ಸಾಧಿಸಿದ್ದರು.

    ಬ್ರಿಜ್ ಭೂಷಣ್ ಸಿಂಗ್ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ಸೇರಿದಂತೆ ಹಲವರು ಅವರ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಕಳೆದ ವರ್ಷ ಜೂನ್‌ನಲ್ಲಿ ಮಾಜಿ ಡಬ್ಲ್ಯುಎಫ್‌ಐ ಮುಖ್ಯಸ್ಥರ ವಿರುದ್ಧ ದೆಹಲಿ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದರು.

    ಕೈಸರ್​ಗಂಜ್​ನಲ್ಲಿ 5 ಹಂತದಲ್ಲಿ ಮೇ 20 ರಂದು ಮತದಾನ ನಡೆಯಲಿದೆ.

    ಪ್ರಜ್ವಲ್​ರಿಂದ 400 ಮಹಿಳೆಯರ ಅತ್ಯಾಚಾರ: ಪ್ರಧಾನಿ ಮೋದಿ ಕ್ಷಮೆಯಾಚಿಸಲು ರಾಹುಲ್ ಒತ್ತಾಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts