More

    ಕನಿಷ್ಠ ವೇತನಕ್ಕಾಗಿ ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ : ಸರ್ಕಾರಿ ನೌಕರರು ಎಂದು ಪರಿಗಣಿಸಿ ಒಕ್ಕೋರಲ ಬೇಡಿಕೆ

    ವಿಜಯವಾಣಿ ಸುದ್ದಿಜಾಲ ಕಲಬುರಗಿ
    ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಕನಿಷ್ಠ ವೇತನ ನೀಡಬೇಕು ಎಂಬುದು ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕ ಕಾರ್ಯಕರ್ತೆಯರು ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಜಿಲ್ಲೆಯ ತಾಲೂಕಿನಲ್ಲಿ ಸಹ ಹೋರಾಟ ನಡೆಯಿತು.

    ಸಾಮಾಜಿಕ ಭದ್ರತೆಗಳಾದ ಇಎಸ್‌ಐ, ಪಿಎಫ್, ಪಿಂಚಣಿ, ಎಕ್ ಗ್ರೇಷಿಯಾ ಜಾರಿ ಮಾಡಬೇಕು, ಸುಪ್ರೀಂಕೋರ್ಟ್ ಆದೇಶದಂತೆ ಗ್ರಾಚುಟಿ ಕೊಡಬೇಕು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಮೂಲ ವೇತನ, ಇನ್‌ಮೆಂಟ್ ನಿಗದಿ, ಇತರೆ ಭತ್ಯೆ ಪರಿಶೀಲನೆಗೆ ಕೇಂದ್ರ ಸರ್ಕಾರ ಸಮಿತಿ ರಚಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

    ಆಧಾರ್ ಲಿಂಕ್ ಕಡ್ಡಾಯ ಆದೇಶ ಹಿಂಪಡೆಯಬೇಕು. ಏಕರೂಪ ಸೇವಾ ನಿಯಮ ರೂಪಿಸಬೇಕು. ಪ್ರತಿಭಟಿಸುವ ಹಕ್ಕು ಖಾತ್ರಿ ಪಡಿಸಬೇಕು. ಹಳೇ ಮೊಬೈಲ್ ವಾಪಸ್‌ ಪಡೆದುಕೊಂಡು ಗುಣಮಟ್ಟದ ಮೊಬೈಲ್‌ ನೀಡಬೇಕು. ಇದಕ್ಕೆ ಪ್ರಾದೇಶಿಕ ಭಾಷೆ ಪ್ರೋಗ್ರಾಂ ಅಳವಡಿಸಬೇಕು. ಈ ಮೂಲಕ ಸರ್ಕಾರಿ ನೌಕರರು ಕೆಲಸದ ಒತ್ತಡ ಕಡಿಮೆಯಾಗಲಿದೆ ಎಂದರು.

    ಪೋಷಣ ಅಭಿಯಾನಕ್ಕೆ ಆಧಾ‌ ಅಥವಾ ಪೋನ್ ನಂಬರ್ ಲಿಂಕ್ ಮಾಡುವುದು ಕಡ್ಡಾಯ ಎಂಬ ಆದೇಶ ಆರಪಾಲ್ಗೊಂಡಿದ್ದರು ಎಲ್ಲ ಮಕ್ಕಳಿಗೂ ಹಿಂಪಡೆಯಬೇಕು. ಪೂರ್ವ ಪ್ರಾಥಮಿಕ ಶಿಕ್ಷಣ ಕಡ್ಡಾಯ ಎನ್ನುವ ಕಾಯ್ದೆ ರೂಪಿಸಿ, ಜಾರಿಗೊಳಿಸಬೇಕು. ಇದಕ್ಕೆ ಅಂಗನವಾಡಿ ನೋಡಲ್ ಏಜೆನ್ಸಿಗಳಾಗಿ ಕಾರ್ಯನಿರ್ವಹಿಸಬೇಕು ಮತ್ತು ಅಗತ್ಯ ತರಬೇತಿ ನೀಡಬೇಕು, ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು ಎಂದು ಒತ್ತಾಯಿಸಿದರು.

    1975 ರಿಂದ 3-5 ವರ್ಷಗಳಿಗೊಮ್ಮೆ ಗೌರವಧನ ಹೆಚ್ಚಳ ಮಾಡಲಾಗುತ್ತಿತ್ತು. ಆದರೆ 2018ರ ನಂತರ ಒಂದು ಪೈಸೆಯೂ ಹೆಚ್ಚಿಸಿಲ್ಲ. ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಕಾರ್ಯಕರ್ತೆಯರಿಗೆ ಐಸಿಡಿಎಸ್‌ ಕೆಲಸ ಹೇರಲಾಗುತ್ತಿದೆ. ಇತರೆ ಇಲಾಖೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾದ ಅನಿವಾರ್ಯತೆ ನಿರ್ಮಾಣ ಮಾಡಲಾಗುತ್ತಿದೆ. ಸಚಿವರು, ಆಡಳಿತ ಪಕ್ಷಗಳ ನೇತಾರರ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಒತ್ತಡ ಹೇರಲಾಗುತ್ತಿದೆ. ಪ್ರಶ್ನೆ ಮಾಡಿದರೆ ಅವರನ್ನು ಟಾರ್ಗೆಟ್ ಮಾಡಿ ಬಲಿಪಶು ಮಾಡಲಾಗುತ್ತಿದೆ. ತಕ್ಷಣ ಇದಕ್ಕೆ ನಿಯಂತ್ರಣ ಹೇರಬೇಕು ಎಂದು ಪತ್ರಿಭಟನಾಕಾರರು ಆಗ್ರಹಿಸಿದರು.

    ಪ್ರಧಾನಮಂತ್ರಿಗಳಿಗೆ ಬರೆದ ಮನವಿಪತ್ರವನ್ನು ಇಲಾಖೆ ಅಧಿಕಾರಿಗೆ ನೀಡಿದರು. ಸಂಘದ ಅಧ್ಯಕ್ಷೆ ಗೌರಮ್ಮ ಪಾಟೀಲ್‌, ಕಾರ್ಯದರ್ಶಿ ರಾಜಮತಿ ಪಾಟೀಲ್‌, ಮಹಾದೇವಿ ಪೋಲಕಪಳ್ಳಿ, ಶಾಂತಾ ಘಂಟೆ ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts