More

    ಮದುವೆ ಮುಗಿಸಿ ಮನೆಗೆ ಹೊರಟ ಅತಿಥಿಗಳು ಮಸಣ ಸೇರಿದ್ರು…

    ಅಮರಾವತಿ: ಏಳು ವರ್ಷದ ಮಗು ಸೇರಿದಂತೆ ಏಳು ಜನರು ಮೃತಪಟ್ಟು, 15ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ.

    ಇದನ್ನೂ ಓದಿ: ಜಲ ಪ್ರವಾಹದ ನಡುವೆ ಬಂಧಿಯಾಗಿರುವ ಪ್ರವಾಸಿಗರು

    ಮೃತರನ್ನು ಅಬ್ದುಲ್ ಅಜೀಜ್ (65), ಅಬ್ದುಲ್ ಹನಿ (60), ಶೇಕ್ ರಮೀಜ್ (48), ಮುಲ್ಲಾ ನೂರ್ಜಹಾನ್ (58), ಮುಲ್ಲಾ ಜಾನಿ ಬೇಗಂ (65), ಶೇಕ್ ಸಬೀನಾ (35), ಮತ್ತು ಶೇಕ್ ಹೀನಾ(6) ಎಂದು ಗುರುತಿಸಲಾಗಿದೆ.

    40ಕ್ಕೂ ಹೆಚ್ಚು ಪ್ರಯಾಣಿಕರನ್ನು ಸಾಗಿಸುತ್ತಿದ್ದ ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸಾಗರ ಕಾಲುವೆಗೆ ಬಿದ್ದಿದ್ದರಿಂದ ಮಧ್ಯರಾತ್ರಿ ಈ ಅಪಘಾತ ಸಂಭವಿಸಿದೆ. ಪ್ರಯಾಣಿಕರು ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಸ್​​ನ್ನು ಬಾಡಿಗೆಗೆ ಪಡೆದಿದ್ದು, ಬಸ್ ಕಾಕಿನಾಡ ಕಡೆಗೆ ಹೊರಟಿತ್ತು. ಈ ವೇಳೆ ಇನ್ನೊಂದು ಬಸ್ ಎದುರುಗಡೆಯಿಂದ ಬಂದಿದ್ದು, ಡಿಕ್ಕಿಯನ್ನು ತಪ್ಪಿಸುವ ಪ್ರಯತ್ನದಲ್ಲಿ ಬಸ್ ಚಾಲಕ ರಸ್ತೆಯ ಕಾಂಕ್ರೀಟ್ ಬ್ಲಾಕ್‌ಗೆ ಡಿಕ್ಕಿ ಹೊಡೆದು ಕಾಲುವೆಗೆ ಉರುಳಿದೆ.

    ಇದನ್ನೂ ಓದಿ: ಅಂನವಾಡಿಗಳಿಗೆ ತಿಂಗಳಿಗೆ ಒಂದೇ ದಿನ ಮೊಟ್ಟೆ ಸರಬರಾಜು ಪೌಷ್ಟಿಕ ಆಹಾರವಾಗಿ ನೀಡುವ ಮೊಟ್ಟೆಗಳು ಬಳಕೆಗೆ ಯೋಗ್ಯವಲ್ಲ

    ಅಪಘಾತದ ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕಾಗಮಿಸಿದ ಪೊಲೀಸರು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿ, ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ರವಾನಿಸಿದ್ದಾರೆ. ಬಸ್ ಅಪಘಾತದಲ್ಲಿ ಏಳು ಮಂದಿ ಮೃತಪಟ್ಟಿರುವುದನ್ನು ಸಬ್ ಇನ್ಸ್​​​ಪೆಕ್ಟರ್ ರಾಮಕೃಷ್ಣ ಖಚಿತಪಡಿಸಿದ್ದಾರೆ.(ಏಜೆನ್ಸೀಸ್​​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts