More

    ಜಲ ಪ್ರವಾಹದ ನಡುವೆ ಬಂಧಿಯಾಗಿರುವ ಪ್ರವಾಸಿಗರು

    ಚಿಕ್ಕಬಳ್ಳಾಪುರ: ಉತ್ತರ ಭಾರತದ ಪ್ರವಾಸ ಕೈಗೊಂಡಿರುವ ಚಿಂತಾಮಣಿ ನಗರದ ಪ್ರವಾಸಿಗರು ಅತಿವೃಷ್ಟಿಯ ಪ್ರವಾಹದ ನಡುವೆ ಕುಲು ಮನಾಲಿಯಲ್ಲಿ ಸಿಲುಕಿಕೊಂಡಿದ್ದಾರೆ.
    ನಗರದಿಂದ ಗ್ರೇಟ್ ಇಂಡಿಯಾ ಎಲೆಕ್ಟ್ರಾನಿಕ್ಸ್ ಅಂಗಡಿಯ ಮಾಲೀಕ ಸುಜಯಕುಮಾರ್, ಪತ್ನಿ ಮತ್ತು ಮಗಳು, ಮತ್ತು ಚೌಡೇಶ್ವರಿ ಎಲೆಕ್ಟ್ರಾನಿಕ್ಸ್ ಅಂಗಡಿಯ ಮಾಲೀಕ ರಘುನಾಥರೆಡ್ಡಿ ಸೇರಿದಂತೆ ಹಲವರು ಪ್ರವಾಸಕ್ಕೆ ಹೋಗಿ, ಪ್ರವಾಹದ ಪ್ರದೇಶದಲ್ಲಿ ಸಿಲುಕಿಕೊಂಡಿದ್ದಾರೆ.
    ಪ್ರತಿಷ್ಠಿತ ಖಾಸಗೀ ಕಂಪನಿಯು ರಾಜ್ಯದಿಂದ ೧೦೫ ಮಂದಿ ಅಂಗಡಿ ಮಾಲೀಕರನ್ನು ಕುಲು ಮನಾಲಿ ಪ್ರವಾಸಕ್ಕೆ ಕರೆದುಕೊಂಡು ಹೋಗಿದೆ. ಇದರಲ್ಲಿ ಚಿಂತಾಮಣಿಯವರೂ ಸಹ ಇದ್ದಾರೆ. ಈ ತಂಡವು ಪ್ರವಾಹ ಪೀಡಿತ ಪ್ರದೇಶದಲ್ಲಿನ ಫೈವ್ ಸ್ಟಾರ್ ಹೋಟೆಲ್ ಟಿಯಾರ್‌ನಲ್ಲಿ ವಾಸ್ತವ್ಯ ಹೂಡಿದ್ದು ಇದರ ಸಮೀಪದಲ್ಲಿಯೇ ಹಾದು ಹೋಗಿರುವ ನದಿಯು ಧಾರಾಕಾರ ಮಳೆಗೆ ಉಕ್ಕಿ ಹರಿಯುತ್ತಿದೆ. ನೀರಿನ ಮಟ್ಟ ಹೆಚ್ಚಾಗಿದೆ. ಇದರ ರಭಸಕ್ಕೆ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಇತರೆ ರಸ್ತೆಗಳು ಹಾಳಾಗಿದ್ದು ನದಿಯ ಪಕ್ಕದ ಹಲವು ಕಟ್ಟಡಗಳು ಕುಸಿದು ಬಿದ್ದಿವೆ. ಇದರಿಂದ ಊರಿಗೆ ವಾಪಸ್ಸಾಗಲು ಪ್ರವಾಸಿಗರಿಗೆ ತೊಂದರೆಯಾಗಿದೆ. ಪ್ರಸ್ತುತ ಹೋಟೆಲ್ ನಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಭಾನುವಾರ ರಾತ್ರಿ ಕುಟುಂಬಸ್ಥರೊಂದಿಗೆ ಮಾತನಾಡಿದ್ದು ಮತ್ತೆ ಸೋಮವಾರ ಸಂಪರ್ಕ ಕಡಿತಗೊಂಡಿದೆ. ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಮತ್ತು ನಾಟರೀಚಬಲ್ ಬರುತ್ತಿದೆ.,

    * ಆಂತಕದಲ್ಲಿ ಪ್ರವಾಸಿಗರು
    ಉತ್ತರ ಭಾರತದ ಹಲವೆಡೆ ಭಾರಿ ಮಳೆಯಾಗುತ್ತಿದೆ. ದೆಹಲಿ, ಹಿಮಾಚಲ ಪ್ರದೇಶಗಳಲ್ಲಿ ಭಾರಿ ಪ್ರವಾಹ ಉಂಟಾಗಿದೆ. ಕುಲು ಮನಾಲಿ ರಸ್ತೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಸಾಲು ಸಾಲು ವಾಹನಗಳು ನೀರಿನಲ್ಲಿ ತೇಲಿಕೊಂಡು ಹೋಗುತ್ತಿವೆ. ಇಲ್ಲಿನ ಎಟಿಎಂ ಕೇಂದ್ರವು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದೆ. ಈ ದೃಶ್ಯಗಳು ಭೀಕರವಾಗಿದ್ದು ಬಂಹಗ್ ನಗರ ಪ್ರವಾಸಕ್ಕೆ ತತ್ತರಿಸಿದೆ. ರಸ್ತೆ ಬದಿಯಲ್ಲಿರುವ ಎಸ್‌ಬಿಐ ಎಟಿಎಂ, ಇತರ ವಾಣಿಜ್ಯ ವಹಿವಾಟು ಹೊಂದಿದ್ದ ಕಟ್ಟಡವೇ ಭೂಕುಸಿತದಿಂದ ಜಲಸಮಾಧಿಯಾಗಿದೆ ಎಂದು ಗ್ರೇಟ್ ಇಂಡಿಯಾ ಎಲೆಕ್ಟ್ರಾನಿಕ್ಸ್ ಅಂಗಡಿಯ ಸುಜಯಕುಮಾರ್ ಆತಂಕ ಪರಿಸ್ಥಿತಿಯನ್ನು ವಿಜಯವಾಣಿಗೆ ವಿವರಿಸಿದ್ದಾರೆ.
    ಇಲ್ಲಿ ವಿದ್ಯುತ್ ಸಂಪರ್ಕ, ಮೊಬೈಲ್ ನೆಟ್ ವರ್ಕ್ ಸ್ಥಗಿತಗೊಂಡಿದೆ. ವಿದ್ಯುತ್ ವ್ಯತ್ಯಯದಿಂದ ಹೋಟೆಲ್ ಮಾಲೀಕರು ಡೀಸೆಲ್‌ಗೆ ಮೊರೆ ಹೋಗಿದ್ದು ಇದರ ಕೊರತೆ ಉಂಟಾಗಿದೆ. ಇದರಿಂದ ಸ್ಟಾರ್ ಹೋಟೆಲ್ ಗಳು ಕತ್ತಲಿನಲ್ಲಿ ಕಾಲ ತಳ್ಳುವಂತಾ ಗಿದೆ ಎಂತಲೂ ಹೇಳಿದ್ದಾರೆ.
    ನಮ್ಮ ತಂಡವು ಸೋಮವಾರ ಬೆಳಿಗ್ಗೆ ದೆಹೆಲಿಗೆ ತೆರಳ ಬೇಕಾಗಿತ್ತು. ಆದರೆಮ ಮಳೆ ಕಾರಣದಿಂದ ಹೊರಡುವ ಬಗ್ಗೆ ಇನ್ನು ಖಚಿತತೆ ಇಲ್ಲ. ಇಲ್ಲಿ ಇನ್ನೂ ಎಷ್ಟು ದಿನಗಳು ಇಲ್ಲಿಯೇ ಉಳಿದುಕೊಳ್ಳಬೇಕಾಗಿದೆ ಎಂಬ ಆತಂಕ ಸಹ ಉಂಟಾಗಿದ್ದಾರೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts