More

    ಕಾಂಗ್ರೆಸ್​ ಅಡಳಿತದಲ್ಲಿ ಗೂಂಡಾ ರಾಜಕಾರಣ ರಾರಾಜಿಸುತ್ತಿದೆ: ನಳಿನ್​ ಕುಮಾರ್​ ಕಟೀಲ್

    ಬೆಳಗಾವಿ: ಜೈನಮುನಿಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪಾರದರ್ಶಕವಾಗಿ ನಡೆಯಬೇಕು. ಇದರ ಹಿಂದೆ ಯಾರ ಕೈವಾಡ ಇದೆ ಎಂಬುದು ಬಯಲಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ಆಗ್ರಹಿಸಿದ್ದಾರೆ.

    ಬೆಳಗಾವಿಯಲ್ಲಿ ಈ ಕುರಿತು ಮಾತನಾಡಿದ ಕಟೀಲ್​ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂಬ ನಿಟ್ಟಿನಲ್ಲಿ ಸತ್ಯಶೋಧನಾ ಸಮಿತಿ ಮಾಡಿಕೊಂಡು ಸ್ಥಳಕ್ಕೆ ಭೇಟಿ ಕೊಡುತ್ತಿದ್ದೇವೆ. ಕ್ಷೇತ್ರಕ್ಕೆ ಹೋಗಿ ಪರಿಶೀಲನೆ ಮಾಡುತ್ತೇವೆ. ಜನರ ಅಭಿಪ್ರಾಯ ಹಾಗೂ ತನಿಖಾ ವರದಿ ಪಡೆಯುತ್ತೇವೆ ಎಂದು ತಿಳಿಸಿದ್ದಾರೆ.

    ಭಾವನೆಗೆ ಧಕ್ಕೆ ಆಗಬಾರದು

    ನಾವು ಸರ್ಕಾರ, ಪೊಲೀಸರು ಏನು ಹೇಳುತ್ತಾರೆ ಮತ್ತು ಅಲ್ಲಿಯ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸುತ್ತೇವೆ. ಪೊಲೀಸ್​ನವರು ಹೇಳಿದ ಹಾಗೆ ಕೊಲೆ ನಡೆದಿದ್ದರೆ ಏನು ತೊಂದರೆಯಿಲ್ಲ. ಒಂದು ವೇಳೆ ಬೇರೆ ಏನಾದರೂ ಇದ್ದು ಜನರ ಭಾವನೆಗೆ ಧಕ್ಕೆ ಆಗಬಾರದು ಎಂಬ ಕಾರಣಕ್ಕೆ ಅಧ್ಯಯನ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

    BJP Team

    ಗೃಹ ಸಚಿವ ಪರಮೇಶ್ವರ್​​​​​ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ಕಳೆದ ಒಂದು ತಿಂಗಳಲ್ಲಿ ಎರಡು ಹತ್ಯೆಗಳಾಗಿವೆ ಆ ಕುರಿತು ವಿಚಾರ ಮಾಡಬೇಕಿದೆ. ಹನ್ನೂಂದು ಹತ್ಯೆಗಳು, ಹದಿನೈದು ಆತ್ಮಹತ್ಯೆ ಆಗಿವೆ.

    ಇದನ್ನೂ ಓದಿ: ಸರಣಿ ಅಪಘಾತ; ಕೆಕೆಆರ್​ಟಿಸಿ ಬಸ್​ ಚಾಲಕ ಮೃತ್ಯು

    ಆಗ ಇದ್ದ ನಂಬಿಕೆ ಈಗ ಇಲ್ಲ

    ಕಾಂಗ್ರೆಸ್​ನವರು ಒಂದು ಪ್ರಶ್ನೆ ಎತ್ತಿದ್ದಾರೆ. ಎರಡು ತಿಂಗಳ ಹಿಂದೆ ಪೊಲೀಸರ ಮೇಲೆ ಇದ್ದ ನಂಬಿಕೆ ಈಗ ಇಲ್ಲ. ಅದಕ್ಕೆ ತಾನೆ ಪ್ರವೀಣ್​ ನೆಟ್ಟಾರು ಹಾಗೂ ಹರ್ಷ ಕೊಲೆ ಪ್ರಕರಣಗಳನ್ನು ಎನ್​ಎಐಗೆ ಒಪ್ಪಿಸಿದ್ದು. ತನಿಖೆ ಸಮಗ್ರವಾಗಿರಲಿ ಮತ್ತು ಅದರ ಹಿಂದಿನ ಉದ್ದೇಶ ಹೊರಬರಲಿ ಎಂಬ ಕಾರಣಕ್ಕೆ ಎನ್​ಎಐ ತನಿಖೆಗೆ ಕೊಡಲಾಗಿದೆ.

    ಕಾಂಗ್ರೆಸ್​ ಸರ್ಕಾರ ರಚನೆಯಾದ ಕೆಲವೇ ದಿನಗಳಲ್ಲಿ ಹತ್ಯೆಯಾಗುತ್ತಿವೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ ಸಿದ್ದರಾಮಯ್ಯನವರ ಆಡಳಿತದಲ್ಲಿ ಕೊಲೆ, ಗೂಂಡಾಗಿರಿ, ದರೋಡೆ ಇವೆಲ್ಲವೂ ಸಹ ನಡೆಯುತ್ತವೆ. ಹಿಂದೆ ಅವರ ಸರ್ಕಾರ ಇದ್ದಾಗ 24ಹಿಂದೂ ಕಾರ್ಯಕರ್ತರ ಹತ್ಯೆ ಆಗಿತ್ತು. ಯಾವಾಗ ಯಾವಾಗ ಕಾಂಗ್ರೆಸ್ ಸರ್ಕಾರ ಬರುತ್ತೊ ಆಗಾಗ್ಗೆ ಇಂತಹ ಪ್ರಕರಣ ರಾರಾಜಿಸುತ್ತವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ಕಿಡಿಕಾರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts