More

    VIDEO | ಎಂಎಸ್​​ ಧೋನಿ ಬೈಕ್, ಕಾರ್​ ಕಲೆಕ್ಷನ್; ಇಲ್ಲಿದೆ ನೋಡಿ ವೆಂಕಟೇಶ್ ಪ್ರಸಾದ್ ಶೇರ್ ಮಾಡಿದ ವಿಡಿಯೋ..

    ಮುಂಬೈ: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಜತೆಗೆ ರೇಸಿಂಗ್ ಬೈಕ್, ಕಾರುಗಳ ಮೇಲೆಯೂ ಸಾಕಷ್ಟು ಒಲವಿದೆ.

    ಟೀಂ ಇಂಡಿಯಾದ ಮಾಜಿ ವೇಗದ ಬೌಲರ್‌ಗಳಾದ ವೆಂಕಟೇಶ್ ಅವರು ಧೋನಿಯ ಈ ಬೈಕ್ ಕಲೆಕ್ಷನ್ ವಿಡಿಯೋವನ್ನು ಟ್ವೀಟ್ ನಲ್ಲಿ ಹಂಚಿಕೊಂಡಿದ್ದು, ರಾಂಚಿಯ ಅವರ ಮನೆಯಲ್ಲಿ ಅವರ ಬೈಕುಗಳು ಮತ್ತು ಕಾರುಗಳ ಸಂಗ್ರಹದ ಒಂದು ನೋಟ ಇಲ್ಲಿದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ:  ಧೂಮಪಾನ, ಮದ್ಯಪಾನ, ಮಾಂಸ ಸೇವನೆಯಿಂದ ದೂರವಿದ್ದರೆ ಉದ್ಯೋಗ!: ಖಾಸಗಿ ಕಂಪನಿಯ ಜಾಹೀರಾತು ವೈರಲ್​…

    ಗ್ಯಾರೇಜ್‌ನಲ್ಲಿ ಹಲವು ಬೈಕ್‌ಗಳಿದ್ದು, ಈ ಕುರಿತ ವಿಚಾರ ಈಗಾಗಲೇ ಎಲ್ಲರಿಗೂ ತಿಳಿದಿದೆ. ಆದರೆ ಇದೀಗ ಟೀಂ ಇಂಡಿಯಾದ ಮಾಜಿ ವೇಗದ ಬೌಲರ್‌ಗಳಾದ ವೆಂಕಟೇಶ್ ಪ್ರಸಾದ್ ಮತ್ತು ಸುನಿಲ್ ಜೋಶಿ ಅವರು ಇತ್ತೀಚೆಗೆ ರಾಂಚಿಯಲ್ಲಿ ಧೋನಿ ಅವರ ಬೈಕ್-ಕಾರುಗಳ ಸಂಗ್ರಹವನ್ನು ನೋಡಿದ್ದಾರೆ. ಟೀಂ ಇಂಡಿಯಾದ ಕೋಚ್ ಆಗಿದ್ದ ಪ್ರಸಾದ್ ಇದು ಬೈಕ್ ಶೋರೂಂ ಆಗಿರಬಹುದು ಎಂದು ತಮಾಷೆಯಾಗಿ ಹೇಳಿದ್ದಾರೆ.

    ಇದನ್ನೂ ಓದಿ: VIDEO | ಬೋಳು ತಲೆ ಮೇಲೆ ವಿಚಿತ್ರ ಟ್ಯಾಟೂ ಹಾಕಿಸಿಕೊಂಡ ಅನುಪಮ್ ಖೇರ್!​​

    ವೆಂಕಟೇಶ್ ಅವರು ರಾಂಚಿಗೆ ಬಂದ ನಂತರ ನಿಮಗೆ ಏನನಿಸುತ್ತದೆ ಮತ್ತು ಅವರು ಇಲ್ಲಿಗೆ ಮೊದಲ ಬಾರಿಗೆ ಬಂದಿದ್ದೀರಾ ಎಂದು ಕೇಳಿದಾಗ ಅವರು, ಅದ್ಭುತವಾಗಿದೆ, ಮೊದಲ ಬಾರಿಗೆ ಅಲ್ಲ ನಾಲ್ಕನೇ ಬಾರಿಗೆ ರಾಂಚಿಗೆ ಬಂದಿದ್ದೇನೆ ಎಂದಿದ್ದಾರೆ. ಇದು ನಿಜಕ್ಕೂ ಕ್ರೇಜಿಯಾಗಿದೆ. ಹುಚ್ಚುತನ ಇಲ್ಲದಿದ್ದರೆ ಇಂಥಾದ್ದನ್ನು ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ ವೆಂಕಟೇಶ್ ಪ್ರಸಾದ್. ಇನ್ನು ಇದನ್ನು ವಿವರಿಸಲು ಪದಗಳಿಲ್ಲ ಎಂದು ಸುನಿಲ್ ಜೋಷಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.



    https://www.vijayavani.net/taapsee-pannu-recently-fans-interacted-with-her-about-getting-marrie


     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts