More

    VIDEO | ಬೋಳು ತಲೆ ಮೇಲೆ ವಿಚಿತ್ರ ಟ್ಯಾಟೂ ಹಾಕಿಸಿಕೊಂಡ ಅನುಪಮ್ ಖೇರ್!​​

    ಮುಂಬೈ: ನಟ ಅನುಪಮ್ ಖೇರ್ ಬಾಲಿವುಡ್​​ ಚಿತ್ರರಂಗದಲ್ಲಿ ಚಿರಪರಿಚಿತ ಹೆಸರು. ಅವರು ತಮ್ಮ ಮುಂಬರುವ ಚಿತ್ರ ರವೀಂದ್ರನಾಥ ಟ್ಯಾಗೋರ್ ಬಗ್ಗೆ ಚರ್ಚೆಯಲ್ಲಿದ್ದಾರೆ. ಇದು ಅವರ 538 ನೇ ಚಿತ್ರವಾಗಿದ್ದು, ಇದನ್ನು ಅವರು ಸ್ವಲ್ಪ ಸಮಯದ ಹಿಂದೆ ಘೋಷಿಸಿದ್ದರು. ಆದರೆ ಈಗ ನಟ ಟ್ಯಾಟೂ ವಿಡಿಯೋವನ್ನು ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡು ಸುದ್ದಿಯಾಗಿದ್ದಾರೆ.

    ಇದನ್ನೂ ಓದಿ: Alternative To Tomatoes; ಟೊಮ್ಯಾಟೋ ಬದಲಿಗೆ ಅಡುಗೆಗೆ ಈ 5 ಪದಾರ್ಥ ಬಳಸಿ…
    ಅನುಪಮ್ ಖೇರ್ ತಲೆಯ ಮೇಲೆ ಹಚ್ಚೆ : ಅನುಪಮ್ ಖೇರ್ ಶೇರ್ ಮಾಡಿರುವ ಹೊಸ ಸ್ಟೈಲ್‌ನ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಿರಿಯ ನಟ ತನ್ನ ಬೋಳು ತಲೆಯ ಮೇಲೆ ವಿಚಿತ್ರವಾದ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅನುಪಮ್ ಖೇರ್ ಟ್ಯಾಟೂ ವಿಡಿಯೋ ವೈರಲ್ ಆಗಿದೆ. ಹಚ್ಚೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡ ಅನುಪಮ್ ಖೇರ್ ಶೀರ್ಷಿಕೆಯಲ್ಲಿ ತುಂಬಾ ತಮಾಷೆಯ ವಿಷಯಗಳನ್ನು ಸಹ ಬರೆದಿದ್ದಾರೆ.

    ಇದನ್ನೂ ಓದಿ: ಶ್ರಾವಣ ಮಾಸದಲ್ಲಿ ಮಾಂಸಾಹಾರ ಏಕೆ ಸೇವಿಸಬಾರದು?

    ಟ್ಯಾಟೂ ಹಾಕಿಸಿಕೊಂಡು ಕ್ಯಾಮರಾ ಮುಂದೆ ಪೋಸ್ ನೀಡಿದ್ದಾರೆ. ವಿಡಿಯೋ ಶೇರ್ ಮಾಡಿ, ಈ ಪೋಸ್ಟ್ ಅನ್ನು ವಿಶ್ವದ ಬೋಳುತಲೆಯ ವ್ಯಕ್ತಿಗಳಿಗೆ ಸಮರ್ಪಿಸಲಾಗಿದೆ. ಕೂದಲು ಇದ್ದ ವ್ಯಕ್ತಿಗಳು ತಮ್ಮ ಕೂದಲಿನಿಂದ ಏನೆಲ್ಲ ಮಾಡಬಹುದು ಎಂದು ಹೆಮ್ಮೆ ಪಡುತ್ತಾರೆ. ಆದರೆ ಇದನ್ನು ಮಾಡಲೇ ಸಾಧ್ಯವೇ. ಖಂಡಿತ ಇಲ್ಲ’ ಎಂದು ಹೇಳಿದ್ದಾರೆ. ಈಗ ಅವರ ಈ ಟ್ಯಾಟೂ ನೋಡಿ ಅಭಿಮಾನಿಗಳು ಈ ಹಚ್ಚೆ ಶಾಶ್ವತವೆಂದು ತೋರುತ್ತಿಲ್ಲ. ಆದರೂ ಚೆನ್ನಾಗಿದೆ. ಮುಂದಿನ ಸಿನಿಮಾದಲ್ಲಿ ನೀವು ವಿಲನ್ ಆಗಿ ನಟಿಸಲಿದ್ದೀರಾ? ಎಂದು ಹೀಗೆ ವಿಭಿನ್ನವಾಗಿ ಕಮೆಂಟ್ ಮಾಡುತ್ತಾ ಮೆಚ್ಚುಗೆ ಸೂಚಿಸಿದ್ದಾರೆ.

    View this post on Instagram

    A post shared by Anupam Kher (@anupampkher)

    ಇದನ್ನೂ ಓದಿ: ಇಲಿಯಾನ ಮಗುವಿನ ತಂದೆ ಯಾರಂತ ಗೊತ್ತಾಗೇ ಹೋಯ್ತು!; ರೊಮ್ಯಾಂಟಿಕ್ ಫೋಟೋ ಶೇರ್​​ ಮಾಡಿದ ನಟಿ…

    ಕಾಶ್ಮೀರ್ ಫೈಲ್ಸ್ ಬಳಿಕ ಅನುಪಮ್ ಖೇರ್ ಮತ್ತೆ ವಿವೇಕ್ ಅಗ್ನಿಹೋತ್ರಿ ಜೊತೆ ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾ ಮಾಡುತ್ತಿದ್ದಾರೆ. ಅನುಪಮ್ ಖೇರ್ ಅವರು ತಮ್ಮ 538 ನೇ ಚಿತ್ರವನ್ನು ಘೋಷಿಸಿದರು, ಇದರಲ್ಲಿ ಅವರು ರವೀಂದ್ರನಾಥ್ ಟ್ಯಾಗೋರ್ ಪಾತ್ರವನ್ನು ನಿರ್ವಹಿಸಲಿದ್ದಾರೆ.

    ಮದುವೆಯಾಗಿ 7 ವರ್ಷಗಳಾದರೂ ನಾವು ಅಪ್ಪ-ಅಮ್ಮ ಆಗಲಿಲ್ಲ; ಮಕ್ಕಳಿಲ್ಲ ಎಂಬ ಕಾರಣಕ್ಕೆ ಪ್ರಾಣ ಬಿಟ್ಟ ದಂಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts