ಮದುವೆಯಾಗಿ 7 ವರ್ಷಗಳಾದರೂ ನಾವು ಅಪ್ಪ-ಅಮ್ಮ ಆಗಲಿಲ್ಲ; ಮಕ್ಕಳಿಲ್ಲ ಎಂಬ ಕಾರಣಕ್ಕೆ ಪ್ರಾಣ ಬಿಟ್ಟ ದಂಪತಿ

couple ends life
Published on

ತೆಲಂಗಾಣ: ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ದಂಪತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕಳೆದ ಆರು ದಿನಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಇಬ್ಬರು ಇಂದು ಸಾವನ್ನಪ್ಪಿದ್ದಾರೆ. ಮೇದಕ್ ಜಿಲ್ಲೆಯ ನರಸಾಪುರ ಮಂಡಲದ ಅಹಮದ್‌ನಗರದಲ್ಲಿ ಈ ದಾರುಣ ಘಟನೆ ಬೆಳಕಿಗೆ ಬಂದಿದೆ.

ನೀರುಡಿ ಲಕ್ಷ್ಮಣ್(31) ಹಾಗೂ ರಾಣಿ(24) ಮದುವೆಯಾಗಿ 7 ವರ್ಷವಾದರೂ ಇನ್ನೂ ಮಕ್ಕಳಾಗಲಿಲ್ಲ ಎಂಬ ನೋವು ದಂಪತಿಗೆ ತೀವ್ರವಾಗಿ ಕಾಡಿದ್ದು, ಆರು ದಿನಗಳ ಹಿಂದೆ ಮನೆಯಲ್ಲಿ  ಔಷಧಿ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಅಹಮದ್‌ನಗರದ ನೀರುಡಿ ಲಕ್ಷ್ಮಣ್ ಮತ್ತು ರಾಣಿ ಏಳು ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದರು. ಆದರೆ ಅವರಿಗೆ ಮಕ್ಕಳಿರಲಿಲ್ಲ. ಮಕ್ಕಳಿಲ್ಲದ ಕಾರಣ ಅವರು ತೀವ್ರ ಮನನೊಂದಿದ್ದರು. ಸಾಲವೂ ಹೆಚ್ಚಾಯಿತು. ಮಕ್ಕಳಿಲ್ಲದ ಕಾರಣ ಹಾಗೂ ಮುಂದೆ ಮಕ್ಕಳಾಗುವುದಿಲ್ಲ ಎಂಬ ಮನಸ್ತಾಪದಿಂದ ದಂಪತಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಜುಲೈ 8ರಂದು ದಂಪತಿ ವೀಳ್ಯದೆಲೆಗೆ ಸಿಂಡಿಸುವ ಔಷಧಿ ಕುಡಿದು ದಂಪತಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಕುಟುಂಬಸ್ಥರು ಮತ್ತು ಸಂಬಂಧಿಕರು ಅವರನ್ನು ಚಿಕಿತ್ಸೆಗಾಗಿ ಹೈದರಾಬಾದ್‌ನ ಎಐಜಿ ಆಸ್ಪತ್ರೆಗೆ ಸಾಗಿಸಿದರು.

ರಾಣಿ ಭಾನುವಾರ ರಾತ್ರಿ 8 ಗಂಟೆಗೆ ಮೃತಪಟ್ಟರೆ, ಲಕ್ಷ್ಮಣ್ ಸೋಮವಾರ ಬೆಳಗ್ಗೆ 5.30ಕ್ಕೆ ಚಿಕಿತ್ಸೆ ಪಡೆಯುತ್ತಲೇ ಮೃತಪಟ್ಟರು. ಇದರಿಂದ ಅವರ ಕುಟುಂಬಸ್ಥರು, ಸಂಬಂಧಿಕರು ಕಣ್ಣೀರಿಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net