

| ಹರ್ಷವರ್ಧನ್ ಬ್ಯಾಡನೂರು
ಕರೊನಾ ಬಳಿಕ ಸಿನಿಮಾ ಪ್ರೇಕ್ಷಕರು ಒಟಿಟಿಗಳತ್ತ ಗಮನ ಹರಿಸಿದ್ದು, ಮಲ್ಟಿಪ್ಲೆಕ್ಸ್‌ಗಳಿಗೆ ಬರುವುದು ಕಡಿಮೆಯಾಗಿದೆ. ಅದಕ್ಕೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಹೆಚ್ಚಿರುವ ಸಿನಿಮಾ ಟಿಕೆಟ್ ದರ ಹಾಗೂ ಕೂಲ್ ಡ್ರಿಂಕ್ಸ್, ಪಾಪ್‌ಕಾರ್ನ್ ಖರ್ಚು ಪ್ರಮುಖ ಕಾರಣ ಎಂಬುದು ಗೊತ್ತಿರುವ ವಿಷಯ. ಹೀಗಾಗಿ ಒಟಿಟಿಗೆ ಅಂಟಿಕೊಂಡಿರುವ ಪ್ರೇಕ್ಷಕರನ್ನು ಮತ್ತೆ ಮಲ್ಟಿಪ್ಲೆಕ್ಸ್‌ಗಳಿಗೆ ಕರೆತರಲು ಪಿವಿಆರ್ ಐನಾಕ್ಸ್ ಸಂಸ್ಥೆ ಮುಂದಾಗಿದೆ. ಅದರ ಮೊದಲ ಹೆಜ್ಜೆಯಾಗಿ ಸೋಮವಾರದಿಂದ ತಿಂಗಳ ಪಾಸ್ ಪರಿಚಯಿಸಿದೆ.
699 ರೂ. ಗೆ 10 ಸಿನಿಮಾ!
ಪಿವಿಆರ್ ಅಥವಾ ಐನಾಕ್ಸ್ ಆ್ಯಪ್ ಅಥವಾ ವೆಬ್‌ಸೈಟ್‌ಗಳಲ್ಲಿ 699 ರೂ. ನೀಡಿ ಆನ್‌ಲೈನ್‌ನಲ್ಲಿಯೇ ಪಾಸ್ ಖರೀದಿಸಬಹುದು. ಖರೀದಿಸಿದ ದಿನದ 30 ದಿನಗಳವರೆಗೆ ಅವರು ಪಿವಿಆರ್ ಅಥವಾ ಐನಾಕ್ಸ್‌ಗಳಲ್ಲಿ ದಿನಕ್ಕೆ ಗರಿಷ್ಠ ಒಂದು ಸಿನಿಮಾ ವೀಕ್ಷಿಸಬಹುದು. ಹೀಗೆ ಒಂದು ತಿಂಗಳಲ್ಲಿ 10 ಸಿನಿಮಾಗಳನ್ನು ನೋಡುವ ಅವಕಾಶವಿದೆ. ವಾರಾಂತ್ಯ ಹೊರತುಪಡಿಸಿ ಸೋಮವಾರದಿಂದ ಗುರುವಾರದವರೆಗೆ ಮಾತ್ರ ಈ ಪಾಸ್ ಬಳಸಬಹುದಾಗಿದೆ. ಪಾಸ್ ಖರೀದಿಸಿದ ವ್ಯಕ್ತಿಯು ಆಧಾರ್, ಪ್ಯಾನ್, ವೋಟರ್ ಐಡಿ, ಡಿಎಲ್‌ನಂತಹ ಗುರುತು ಪತ್ರವನ್ನು ತೋರಿಸಿ ಸಿನಿಮಾ ಮಂದಿರಕ್ಕೆ ಹೋಗಬಹುದು. ಹಾಗೂ ಒಬ್ಬರ ಪಾಸ್ ಅನ್ನು ಮತ್ತೊಬ್ಬರು ಬಳಸಲು ಅವಕಾಶವಿರುವುದಿಲ್ಲ. ಹಾಗೇ ಸಾಮಾನ್ಯ ಆಡಿಟೋರಿಯಂಗಳಲ್ಲಿ ಮಾತ್ರ ಸಿನಿಮಾ ನೋಡಬಹುದೇ ವಿನಃ ಐಮ್ಯಾಕ್ಸ್, ಐಸಿಇ, 4ಡಿಎಕ್ಸ್, ಗೋಲ್ಡ್, ಲೂಕ್ಸ್, ಪಿ(ಎಕ್ಸ್‌ಎಲ್) ರೀತಿಯ ವಿಶೇಷ ಆಡಿಟೋರಿಯಂಗಳಲ್ಲಿ ಅವಕಾಶವಿಲ್ಲ. ಮೊದಲ ಹಂತದಲ್ಲಿ ಕೇವಲ 20 ಸಾವಿರ ಜನರಿಗೆಷ್ಟೇ ಪಾಸ್ ಖರೀದಿಸುವ ಅವಕಾಶ ನೀಡಲಾಗಿದ್ದು, ಈ ಆರ್‌ಗೆ ಸಿಗುವ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ದಿನಗಳಲ್ಲಿ ಮತ್ತಷ್ಟು ವಿಸ್ತರಿಸುವ ಆಲೋಚನೆ ಸಂಸ್ಥೆಯದು ಎನ್ನಲಾಗಿದೆ.
ಕನ್ನಡದ ಪ್ರೇಕ್ಷಕಕರಿಗಿಲ್ಲ ಪಾಸ್
ಪಿವಿಆರ್ ಐನಾಕ್ಸ್ ಸಂಸ್ಥೆ ಪ್ರೇಕ್ಷಕರನ್ನು ಸೆಳೆಯಲು ತಿಂಗಳ ಪಾಸ್ ಆರ್ ನೀಡಿದ್ದರೂ, ಇದು ಉತ್ತರ ಭಾರತಕ್ಕಷ್ಟೇ ಸೀಮಿತವಾಗಿದೆ. ಕರ್ನಾಟ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳು ನಾಡು ಹಾಗೂ ಕೇರಳ ರಾಜ್ಯಗಳಿಗೆ ಈ ಆರ್ ಅನ್ವಯಿಸುವುದಿಲ್ಲ. ಈ ಬಗ್ಗೆ ವಿಜಯವಾಣಿಗೆ ‘ಈ ರಾಜ್ಯಗಳಲ್ಲಿ ಸಿನಿಮಾ ಟಿಕೆಟ್ ದರವನ್ನು ಆಯಾ ರಾಜ್ಯ ಸರ್ಕಾರಗಳು ನಿಯಂತ್ರಿಸಿರುವ ಕಾರಣ, ಸದ್ಯಕ್ಕೆ ದಕ್ಷಿಣ ಭಾರತಕ್ಕೆ ಆರ್ ವಿಸ್ತಿರಿಸಲು ಸಾಧ್ಯವಾಗಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಈ ಬಗ್ಗೆ ಯೋಚಿಸಲಿದ್ದೇವೆ’ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ. ಜತೆಗೆ ಚಂಡೀಘಡ, ಪುದುಚೆರಿ, ಪಠಾಣ್‌ಕೋಟ್, ಶ್ರೀನಗರ, ಭಾರೂಚ್, ಭಿವಾಡಿ, ಸಿಲಿಗುರಿ ಸೇರಿ ಕೆಲವೆಡೆಗಳಲ್ಲಿ ಆರ್ ಅನ್ವಯಿಸುವುದಿಲ್ಲ.
ಈ ಆರ್ ದಕ್ಷಿಣ ಭಾರತಕ್ಕೂ ವಿಸ್ತರಿಸಿದರೆ ಒಳ್ಳೆಯದು. ತಿಂಗಳ ಪಾಸ್ ಖರೀದಿಸಿದರೆ 10ರಲ್ಲಿ 10 ಸಿನಿಮಾಗಳನ್ನು ನೋಡಲು ಸಾಧ್ಯವಾಗದಿದ್ದರೂ, ಏಳು ಚಿತ್ರಗಳನ್ನಂತೂ ನೋಡಬಹುದು. ಕನ್ನಡದಲ್ಲಿಯೇ ಕಳೆದ ಒಂದು ತಿಂಗಳಿನಿಂದ ‘ಬಾನದಾರಿಯಲ್ಲಿ’ ಬಿಟ್ಟರೆ ದೊಡ್ಡ ಸಿನಿಮಾ ಬಂದಿಲ್ಲ. ‘ಮಾರಕಾಸ’, ‘ಅಭಿರಾಮಚಂದ್ರ’ ಸೇರಿ ಹಲವಾರು ಚಿತ್ರಗಳು ಬಿಡುಗಡೆಯಾಗಿವೆ. ಪಾಸ್ ಇದ್ದರೆ ಪ್ರೇಕ್ಷಕರು ಎಲ್ಲ ಚಿತ್ರಗಳನ್ನೂ ನೋಡುತ್ತಾರೆ. ಜತೆಗೆ ಪೈರಸಿ ಕೂಡ ಕಡಿಮೆಯಾಗುತ್ತದೆ. -ಸಿಂಪಲ್ ಸುನಿ, ನಿರ್ದೇಶಕ.
ಈ ಆರ್‌ನಿಂದ ವೀಕ್‌ಡೇಗಳಲ್ಲೂ ಸಿನಿಮಾ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತದೆ. ಉದ್ಯಮದ ದೃಷ್ಟಿಯಲ್ಲಿ ಉತ್ತಮ ನಡೆ. ನಿರ್ಮಾಪಕರಿಗೂ ಸಹಾಯವಾಗುತ್ತದೆ. ಹೀಗಾಗಿ ಕರ್ನಾಟಕದಲ್ಲೂ ಈ ಆರ್ ಪರಿಚಯಿಸಿದರೆ ಒಳ್ಳೆಯದು. - ಸುಧೀರ್, ನಿರ್ಮಾಪಕ.