ರಶ್ಮಿಕಾ ಮಂದಣ್ಣ ಹಾಟ್ ಫೋಟೋ ಲೀಕ್​; ನಟಿಗೆ ಅರಿವಿಲ್ಲದಂತೆ ಈ ಫೋಟೋ ತೆಗೆದಿದ್ದರಂತೆ..!

rush
Published on

Rashmika photo leak: ರಶ್ಮಿಕಾ ಮಂದಣ್ಣ ಅವರು ಈಗ ಬಾಲಿವುಡ್ ನಟಿ ಕೂಡ ಹೌದು. ಅಲ್ಲಿಯೂ ಹಲವು ಸಿನಿಮಾ ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಬೋಲ್ಡ್ ಪಾತ್ರಗಳನ್ನು ಮಾಡಲು ಈಗ ಹಿಂದೇಟು ಹಾಕುತ್ತಿಲ್ಲ. ಈಗ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ.


ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡುತ್ತಾ ರಶ್ಮಿಕಾ ತಮ್ಮ ಕೆರಿಯರ್‌ನಲ್ಲಿ ಒಂದು ರೇಂಜ್ ಗಿಟ್ಟಿಸಿಕೊಂಡು ಮುನ್ನಡೆಯುತ್ತಿದ್ದಾರೆ. ಸಧ್ಯ ನಟಿಗೆ ಸಂಬಂಧಿಸಿದ ಹಾಟ್‌ ಫೋಟೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.


ಬ್ಲಾಕ್​ ಡ್ರೆಸ್​​ನಲ್ಲಿ ರಶ್ಮಿಕಾ ಫೋಟೋ ಅವರಿಗೆ ಗೊತ್ತಿಲ್ಲದಂತೆ ತೆಗೆಯಲಾಗಿದೆಯಂತೆ. ಆ ಪೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕಪ್ಪು ಡ್ರೆಸ್ ಧರಿಸಿ, ನೆಲದ ಮೇಲೆ ಕುಳಿತು ಕಿಟಕಿಯಿಂದ ಹೊರಗೆ ನೋಡುತ್ತಿರುವ ರಶ್ಮಿಕಾ ಫೋಟೋದಲ್ಲಿ ಹಾಟ್​​ ಆಗಿ ಕಾಣಿಸುತ್ತಿದ್ದಾರೆ. ಈ ಫೋಟೋವನ್ನು ತೆಗೆಯುವಾಗ ರಶ್ಮಿಕಾಗೆ ಅದರ ಅರಿವು ಇರಲಿಲ್ಲ.

ಆದರೆ ಈಗ ನಾವು ಈ ಫೋಟೋವನ್ನು ನಿಮಗಾಗಿ ಹಂಚಿಕೊಳ್ಳುತ್ತಿದ್ದೇವೆ" ಎಂದು ರಶ್ಮಿಕಾ ತಂಡದ ಸದಸ್ಯರು ಅಧಿಕೃತವಾಗಿ ಈ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ಮಾಹಿತಿ ನೀಡಿದ್ದಾರೆ. ಸಧ್ಯ ಈ ಫೋಟೋ ಸಖತ್​​ ವೈರಲ್​ ಆಗಿದೆ.


ಪ್ರಸ್ತುತ ಅಲ್ಲು ಅರ್ಜುನ್ ಅವರ ಪುಷ್ಪ 2 ರ ಶೂಟಿಂಗ್‌ನಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ. ಸುಕುಮಾರ್ ನಿರ್ದೇಶನದ ಈ ಸಿನಿಮಾ ಮುಂದಿನ ವರ್ಷ ತೆರೆಗೆ ಬರಲು ಸಿದ್ಧವಾಗುತ್ತಿದ್ದು, ನಟ ರಣಬೀರ್ ಕಪೂರ್ ನಟನೆಯ ಸಂದೀಪ್ ವಂಗಾ ನಿರ್ದೇಶನದ "ಅನಿಮಲ್" ಚಿತ್ರದಲ್ಲಿಯೂ ಸಹ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net