More

    ಟೈಗರ್-3 ಸಿನಿಮಾದ ಹೊಸ ಪೋಸ್ಟರ್: ಗನ್ ಹಿಡಿದ ಸಲ್ಮಾನ್-ಕತ್ರಿನಾ, ರಗಡ್​​ ಲುಕ್​ನಲ್ಲಿ ಇಮ್ರಾನ್ ಹಶ್ಮಿ

    Tiger-3 new poster: ಟೈಗರ್​​-3 ಸಿನಿಮಾದಲ್ಲಿ ವಿಎಫ್​​​ಎಕ್ಸ್​​ ಗುಣಮಟ್ಟ ಹೆಚ್ಚಿಸಲಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಸಲ್ಮಾನ್​ ಖಾನ್​ ನಟಿಸಿರುವ ಚಿತ್ರದ ಮತ್ತೊಂದು ಪೋಸ್ಟರ್​​ ಇಂದು ಬಿಡುಗಡೆಯಾಗಿದೆ. ಪೋಸ್ಟರ್​​​ನಲ್ಲಿ ಸಲ್ಮಾನ್​ ಖಾನ್​ ಮತ್ತು ಕತ್ರಿನಾ ಕೈಫ್​ ಗನ್​​ ಹಿಡಿದು ಪೋಸ್​​ ಕೊಟ್ರೆ ಮತ್ತೊಂದೆಡೆ ಇಮ್ರಾನ್ ಹಶ್ಮಿ ರಗಡ್​​​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.


    ಈ ಚಿತ್ರ ಬಾಕ್ಸ್ ಆಫೀಸ್​​ನಲ್ಲಿ ಸಿಕ್ಕಾಪಟ್ಟೆ ಕಲೆಕ್ಷನ್​ ಮಾಡುವ ನಿರೀಕ್ಷೆಯಿದ್ದು, ಈ ಸಿನಿಮಾ ಸೂಪರ್ ಹಿಟ್ ಆಗಲಿದೆ ಎಂಬುದಕ್ಕೆ ಇಲ್ಲಿದೆ ಕಾರಣ. ಬಹು ನಿರೀಕ್ಷಿತ ಟೈಗರ್​​​ ಚಿತ್ರದ ಪಾರ್ಟ್​-3 ಇದಾಗಿದ್ದು, ಇದರಲ್ಲಿ ಹೊಸದಾದ ಅನುಭವವನ್ನ ಪ್ರೇಕ್ಷಕರು ಪಡೆಯಬಹುದು ಎಂದು ಚಿತ್ರದ ನಿರ್ದೇಶಕ ಮನೀಶ್​ ಶರ್ಮಾ ಹೇಳಿದ್ದಾರೆ.

    ಟೈಗರ್-3 ಸಿನಿಮಾದ ಹೊಸ ಪೋಸ್ಟರ್: ಗನ್ ಹಿಡಿದ ಸಲ್ಮಾನ್-ಕತ್ರಿನಾ, ರಗಡ್​​ ಲುಕ್​ನಲ್ಲಿ ಇಮ್ರಾನ್ ಹಶ್ಮಿ


    ನವೆಂಬರ್ 12 ದೀಪಾವಳಿಗೆ ಟೈಗರ್​-3 ಚಿತ್ರವು ತೆರೆಗೆ ಅಪ್ಪಳಿಸಲಿದ್ದು, ‘ಟೈಗರ್ 3’ ನ ಹೊಸ ಪೋಸ್ಟರ್ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.


    3 ನೇ ಪೋಸ್ಟರ್​​ ರಿವೀಲ್​ಬ ಬಳಿಕ ಇದೀಗ ಇಮ್ರಾನ್​​ ಹಶ್ಮಿ ಅವರ ಫಸ್ಟ್​​ ಲುಕ್​ ಕಾಣ ಸಿಕ್ಕಿದ್ದು, ಇದು ಅಭಿಮಾನಿಗಳ ನಿರೀಕ್ಷೆಯನ್ನ ಮತ್ತಷ್ಟು ಹೆಚ್ಚಿಸಿದೆ. ಇದರಲ್ಲಿ ಕತ್ರಿನಾ ಕೈಫ್ ಮತ್ತು ಸಲ್ಮಾನ್ ಖಾನ್ ಹಿನ್ನೆಲೆಯಲ್ಲಿ ಬಂದೂಕು ಹಿಡಿದಿದ್ದಾರೆ. ಇಮ್ರಾನ್ ಮಧ್ಯದಲ್ಲಿ ಕುರ್ಚಿಯ ಮೇಲೆ ಕುಳಿತಿರುವುದನ್ನು ಕಾಣಬಹುದು.


    ಸಲ್ಮಾನ್ ಖಾನ್ ‘ಟೈಗರ್ ಜಿಂದಾ ಹೈ’ ಭರ್ಜರಿ ಹಿಟ್​​​​ ಸಿನಿಮಾ. 2017ರಲ್ಲಿ ಈ ಸಿನಿಮಾ ರಿಲೀಸ್​​​ ಆಗಿತ್ತು. ನಂತರ ರಿಲೀಸ್ ಆದ ‘ರೇಸ್ 3’ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿದರೂ ವಿಮರ್ಶಕರು ಚಿತ್ರವನ್ನು ಟೀಕಿಸಿದರು. ಇದಾದ ಬಳಿಕ ಬಿಡುಗಡೆ ಆದ ‘ದಬಾಂಗ್ 3’, ‘ರಾಧೆ’ ಚಿತ್ರಗಳು ಬಾಕ್ಸ್​​ ಆಫೀಸ್​​ನಲ್ಲಿ ಸದ್ದು ಮಾಡಲೇ ಇಲ್ಲ. ಹೀಗಾಗಿ ಅವರಿಗೆ ‘ಟೈಗರ್ 3’ ಸಿನಿಮಾ ತುಂಬಾನೇ ಮುಖ್ಯ ಎನಿಸಿಕೊಂಡಿದೆ.


    ಈ ಬಾರಿ ಸಿನಿಮಾದ ಕಥೆ ಪಾಕಿಸ್ತಾನದಲ್ಲಿ ನಡೆಯಲಿದೆ ಎನ್ನಲಾಗಿದ್ದು, ಸದ್ಯ Tiger 3 ಸಿನಿಮಾ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆಯನ್ನ ಹುಟ್ಟು ಹಾಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts