ಮುಂಗಾರು ಅಧಿವೇಶನ; ಸರ್ಕಾರ ಮತ್ತು ವಿಪಕ್ಷ ನಾಯಕರುಗಳಿಂದ ಆಪರೇಷನ್ ಸಿಂಧೂರ್ ಕುರಿತು ಚರ್ಚೆ! | Monsoon Session

New Parliment
Published on

Monsoon Session:ಮಂಗಳವಾರ (ಜುಲೈ 29) ಸಂಸತ್ತಿನ ಉಭಯ ಸದನಗಳಲ್ಲಿ ಆಪರೇಷನ್ ಸಿಂಧೂರ್ ಕುರಿತು ಆಡಳಿತ ಪಕ್ಷ ಮತ್ತು ವಿಪಕ್ಷಗಳಿಂದ ಭಾರೀ ಚರ್ಚೆ ನಡೆಯುವ ಸಾಧ್ಯೆತೆ ಇದೆ ಎಂದು ವರದಿಯಾಗಿದೆ.

ಸರ್ಕಾರದ ಕಡೆಯಿಂದ ರಾಜನಾಥ್ ಸಿಂಗ್ ಮತ್ತು ಅಮಿತ್ ಶಾ ಮತ್ತು ವಿಪಕ್ಷಗಳಿಂದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಮಲ್ಲಿಕಾರ್ಜುನ ಖರ್ಗೆ, ಪಿ. ಚಿದಂಬರಂ ಮತ್ತು ಅಖಿಲೇಶ್ ಯಾದವ್ ಚರ್ಚೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳಿದ್ದು. ಪ್ರತಿಪಕ್ಷಗಳು ಗುಪ್ತಚರ ವೈಫಲ್ಯ, ಕಾರ್ಯಾಚರಣೆಯ ವೈಫಲ್ಯಗಳು ಮತ್ತು ವಿದೇಶಾಂಗ ನೀತಿ ಕುರಿತು ತಮ್ಮ ಗಮನವನ್ನು ಕೇಂದ್ರಿಕರಿಸಿವೆ ಎಂದು ಮೂಲಗಳು ತಿಳಿಸಿವೆ.

ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಚರ್ಚೆಯ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ವಿಪಕ್ಷದ ಪ್ರಮುಖ ನಾಯಕರುಗಳಾದ ಶಶಿ ತರೂರ್ ಮತ್ತು ಮನೀಶ್ ತಿವಾರಿಯವರ ಅನುಪಸ್ಥಿತಿ ಬಿಜೆಪಿಗೆ ವರದಾನವಾಗುವ ಸಾಧ್ಯತೆ ಇದೆ.

ಸಂಸದ ಮನೀಶ್ ತಿವಾರಿ ಆಪರೇಷನ್ ಸಿಂಧೂರ್ ಬಗ್ಗೆ ಮಾತನಾಡುವ ಇಚ್ಛೆಯನ್ನು ವಿರೋಧ ಪಕ್ಷದ ನಾಯಕರಿಗೆ ಇಮೇಲ್ ಮೂಲಕ ವ್ಯಕ್ತಪಡಿಸಿದ್ದರು, ಆದರೆ ಅವರ ಹೆಸರನ್ನು ಭಾಷಣಕಾರರ ಅಂತಿಮ ಪಟ್ಟಿಯಲ್ಲಿ ಸೇರಿಸಿಲ್ಲ.

ಚರ್ಚೆಯಲ್ಲಿ ಭಾಗವಹಿಸುವವರ ಆಯ್ಕೆ ಪಕ್ಷದ ಆಂತರಿಕ ನಿರ್ಧಾರವಾಗಿದ್ದು, ಎಲ್ಲ ಸಂಸದರಿಗೂ ಅವಕಾಶ ನೀಡಲಾಗುವುದಿಲ್ಲ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಸತ್ಯವನ್ನು ಮಾತನಾಡಿದ್ದಕ್ಕಾಗಿ ಮತ್ತು ರಾಷ್ಟ್ರದ ಪರವಾಗಿ ನಿಲುವು ತೆಗೆದುಕೊಂಡಿದ್ದಕ್ಕಾಗಿ ವಿಪಕ್ಷದ ಇಬ್ಬರೂ ನಾಯಕರಿಗೆ ಶಿಕ್ಷೆಯಾಗುತ್ತಿದೆ ಎಂದು ಹೇಳಿಕೊಂಡಿದೆ.

ಗೃಹ ಸಚಿವ ಅಮಿತ್ ಶಾ ಮಧ್ಯಾಹ್ನ 12 ಗಂಟೆಗೆ ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ್ ಕುರಿತು ಮಾತನಾಡಲಿದ್ದು, ಇದೇ ವೇಳೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ ಸರ್ಕಾರ ನಿರ್ವಹಿಸುತ್ತಿರುವ ಇಂಟಿಗ್ರೇಟೆಡ್ ಸೆಕ್ಯುರಿಟಿ ಗ್ರಿಡ್ ಬಗ್ಗೆಯೂ ಸದನಕ್ಕೆ ಮಾಹಿತಿ ನೀಡುವ ಸಾಧ್ಯತೆ ಇದೆ.

ಮಧ್ಯಾಹ್ನ 2 ಗಂಟೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಾಜ್ಯಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net