ನಾನು ಎಂದಿಗೂ ಬಿಗ್​ ಬಾಸ್ ಶೋಗೆ ಹೋಗಲ್ಲ: ಮಲ್ಲಿಕಾ ಶೆರಾವತ್ | Mallika Sherawat

Mallika Sherawat1
Published on

Mallika Sherawat: ನಾನು ಎಂದಿಗೂ ಯಾವುದೇ ಬಿಗ್​ ಬಾಸ್ ಶೋದಲ್ಲಿ ಭಾಗವಹಿಸುವುದಿಲ್ಲ, ಎಲ್ಲವೂ ವದಂತಿ ಎಂದು ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಹಾಕಿ ಸ್ಪಷ್ಟೀಕರಣ ನೀಡಿದ್ದಾರೆ.

ಈ ಹಿಂದೆ ತಮ್ಮ ಚಲನಚಿತ್ರ ‘ವಿಕ್ಕಿ ವಿದ್ಯಾ ಕಾ ವೋ ವಾಲಾ’ ವಿಡಿಯೋ ಪ್ರಚಾರಕ್ಕಾಗಿ ಬಿಗ್ ಬಾಸ್-18 ರಲ್ಲಿ ಅತಿಥಿಯಾಗಿ ಮಲ್ಲಿಕಾ ಶೆರವಾತ್ ಭಾಗವಹಿಸಿದ್ದರು. ಇದೀಗ ಈ ಬಾರಿಯ ಬಿಗ್​ ಬಾಸ್​-19ರಲ್ಲಿ ಭಾಗವಹಿಸುತ್ತಿದ್ದಾರೆ ಎಂದು ವದಂತಿ ಹರಡಿತ್ತು.

"ಎಲ್ಲಾ ವದಂತಿಗಳಿಗೆ ಅಂತ್ಯ ಹಾಡುತ್ತಿದ್ದೇನೆ, ನಾನು ಬಿಗ್ ಬಾಸ್‌ನಲ್ಲಿ ಭಾಗವಹಿಸುತ್ತಿಲ್ಲ ಮತ್ತು ಎಂದಿಗೂ ಅಂತಹ ಶೋಗೆ ಹೋಗಲ್ಲ, ಧನ್ಯವಾದಗಳು" ಎಂದು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಹಾಕಿದ್ದಾರೆ.

ಕಳೆದ ವಾರ ಹಿಂದಿ ಬಿಗ್​ಬಾಸ್ ಆಯೋಜಕರು ಸೀಸನ್ 19 ಕಾರ್ಯಕ್ರಮವನ್ನು ಹೊಸ ಲೋಗೋದೊಂದಿಗೆ ಘೋಷಣೆ ಮಾಡಿದ್ದರು. ಗಮನಾರ್ಹ ಬಹುವರ್ಣದ ಚಿಹ್ನೆ ವೀಕ್ಷಕರು ನಿರೀಕ್ಷಿಸಬಹುದಾದ ನಾಟಕ, ಸಂಘರ್ಷ, ಮನರಂಜನೆಯ ಹಲವು ಛಾಯೆಗಳ ಸುಳಿವು ನೀಡಿದೆ.

ವರದಿಗಳ ಪ್ರಕಾರ ಬಿಗ್ ಬಾಸ್-19 ಐದು ತಿಂಗಳುಗಳ ಕಾಲ ನಡೆಯಲಿದೆ. ಮೊದಲ ಮೂರು ತಿಂಗಳು ಸಲ್ಮಾನ್ ಖಾನ್ ಕಾರ್ಯಕ್ರಮವನ್ನು ನಿರೂಪಣೆ ಮಾಡಲಿದ್ದಾರೆ. ನಂತರ ಅತಿಥಿ ನಿರೂಪಕರಾಗಿ ಅನಿಲ್ ಕಪೂರ್, ಕರಣ್ ಜೋಹರ್ ಮತ್ತು ಫರಾ ಖಾನ್ ವಹಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಯುತ್ತಿದೆ ಎನ್ನಲಾಗಿದೆ.

ಈ ಬಾರಿಯ ಶೋದಲ್ಲಿ ರಾಮ್ ಕಪೂರ್, ಮುನ್ಮನ್ ದತ್ತಾ, ಶ್ರೀಫೈಸು, ಗೌತಮಿ ಕಪೂರ್, ಧೀರಜ್ ಧೂಪರ್, ಅಲಿಶಾ ಪನ್ವಾರ್, ಖುಷಿ ದುಬೆ, ಗೌರವ್ ತನೇಜಾ, ಅಪೂರ್ವ ಮುಖಿಜಾ, ಪುರವ್ ಝಾ, ಗೌರವ್ ಖನ್ನಾ, ಧನಶ್ರೀ ವರ್ಮಾ, ಶ್ರೀರಾಮ್ ಚಂದ್ರ, ಅರ್ಶಿಫಾ ಖಾನ್ ಮತ್ತು ಮಿಕ್ಕಿ ಮೇಕ್ ಓವರ್ ಅವರಂತಹ ಸೆಲೆಬ್ರಿಟಿಳು ಭಾಗವಹಿಸುವ ಸಾಂಭವ್ಯ ಪಟ್ಟಿಯಲ್ಲಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.

ಕಾರ್ಯಕ್ರಮದ ಪ್ರೀಮಿಯರ್ ದಿನಾಂಕವನ್ನು ಇನ್ನೂ ಘೋಷಿಸಿಲ್ಲ, ಆದ್ಯಾಗ್ಯೂ ಆಗಸ್ಟ್ 30ರಂದು ಜಿಯೋ ಸಿನಿಮಾದಲ್ಲಿ ಬಿಗ್​ಬಾಸ್-19 ಪ್ರಥಮ ಶೋ ಪ್ರದರ್ಶನವಾಗಲಿದೆ ಎನ್ನಲಾಗಿದೆ. ಶೋ ಮೊದಲು ಓಟಿಟಿಯಲ್ಲಿ ಪ್ರದರ್ಶನಗೊಂಡು ಒಂದೂವರೆ ಗಂಟೆಗಳ ಬಳಿ ಕಲರ್ಸ್ ಟಿವಿಯಲ್ಲಿ ಪ್ರಸಾರವಾಗಲಿದೆ. (ಏಜೆನ್ಸೀಸ್) 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net