

ಪುಣೆ: ಸಾಲ ವಾಪಸ್ಸು ನೀಡಲಿಲ್ಲ ಎಂದು ಪತಿಯ ಸಮ್ಮುಖದಲ್ಲಿ ಪತ್ನಿಯ ಮೇಲೆ ಅತ್ಯಚಾರ ಎಸಗಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಇದನ್ನೂ ಓದಿ: 10 ಸೈನಿಕರು ಸೇರಿದಂತೆ 34 ಜನರ ಪ್ರಾಣ ತೆಗೆದ ಭೀಕರ ಕಾಡ್ಗಿಚ್ಚು: ಸಾವಿರಾರು ಜನರ ಸ್ಥಳಾಂತರ
ಘಟನೆಗೆ ಸಂಬಂಧಿಸಿದಂತೆ 47 ವರ್ಷದ ಲೇವಾದೇವಿಗಾರ ಇಮ್ತಿಯಾಜ್ ಹಸೀನ್ ಶೇಖ್ ಎಂಬ ಆರೋಪಿಯನ್ನು ಬಂಧಿಸಲಾಗಿದ್ದು, 34 ವರ್ಷದ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರವೆಸಗಿ ವಿಡಿಯೋ ಮಾಡಿಕೊಂಡಿದ್ದ. ಮಹಿಳೆಯ ಗಂಡ ಆತನಿಂದ 40 ಸಾವಿರ ಸಾಲವನ್ನು ಮರುಪಾವತಿಸಲು ವಿಫಲವಾದ ಹಿನ್ನಲೆಯಲ್ಲಿ ಈ ಘಟನೆ ನಡೆದಿದೆ.
ಸಾಲದ ಮೊತ್ತವನ್ನು ಹಿಂತಿರುಗಿಸದೇ ಇದ್ದಾಗ ಲೇವಾದೇವಿಗಾರನು ದಂಪತಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಅವರನ್ನು ಹಡಪ್ಸರ್ನಲ್ಲಿರುವ ಮ್ಹಾದಾ ಕಾಲೋನಿ ಫ್ಲಾಟ್ಗೆ ಕರೆದು ನಂತರ ಚಾಕು ತೋರಿಸಿ ದಂಪತಿಗೆ ಬೆದರಿಕೆ ಹಾಕಿ ಪತಿಯ ಎದುರೇ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಈ ಘಟನೆಯನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಗೆ ಶಾಲೆಯಲ್ಲೇ ಮುತ್ತಿಟ್ಟ ಶಿಕ್ಷಕ: ಗ್ರಾಮಸ್ಥರು ಕೆಂಡಾಮಂಡಲ
ಇದಾದ ಬಳಿಕ ಆರೋಪಿಯು ಸಂತ್ರಸ್ತೆಗೆ ತನ್ನೊಂದಿಗೆ ದೈಹಿಕ ಸಂಬಂಧ ಹೊಂದುವಂತೆ ಒತ್ತಡ ಹೇರಲು ಆರಂಭಿಸಿದ್ದು, ಆಕೆಗೆ ಕರೆ ಮಾಡಿ ಲೈಂಗಿಕ ಸಹಾಯ ಕೇಳುತ್ತಿದ್ದ. ಒಂದು ವೇಳೆ ತನ್ನ ಬೇಡಿಕೆಗೆ ಮಣಿಯದಿದ್ದರೆ ಅತ್ಯಾಚಾರದ ವಿಡಿಯೋವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ. ಕೊನೆಗೆ ಮಹಿಳೆ ಈತನ ಬೇಡಿಕೆ ತಿರಸ್ಕರಿಸಿದ್ದನ್ನು ಕಂಡ ನಂತರ ಆರೋಪಿಯು ಮೊನ್ನೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾನೆ.
ಕೂಡಲೇ 34 ವರ್ಷದ ಸಂತ್ರಸ್ತೆ ವಿಡಿಯೋ ವೈರಲ್ ಆಗಿರುವ ಬಗ್ಗೆ ತಿಳಿದು, ಘಟನೆಗೆ ಸಂಬಂಧಿಸಿದಂತೆ ಜುಲೈ 25ರಂದು ಹಡಪ್ಸರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿದ್ದಾಳೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಅದೇ ದಿನ ಆರೋಪಿಯನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿಗೆ ಜುಲೈ 27ರವರೆಗೆ ಎರಡು ದಿನಗಳ ಕಸ್ಟಡಿ ವಿಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.(ಏಜೆನ್ಸೀಸ್)