More

  ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಗೆ ಶಾಲೆಯಲ್ಲೇ ಮುತ್ತಿಟ್ಟ ಶಿಕ್ಷಕ: ಗ್ರಾಮಸ್ಥರು ಕೆಂಡಾಮಂಡಲ

  ಬಹ್​ರೈಚ್​​: ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಗೆ ಶಿಕ್ಷಕನು ಮತ್ತಿಟ್ಟಿರುವ ಘಟನೆ ಉತ್ತರ ಪ್ರದೇಶದ ಬಹ್​ರೈಚ್​ ಬಳಿ ನಡೆದಿದೆ.

  ಇದನ್ನೂ ಓದಿ: ಐಎನ್‌ಎಸ್ ವಿಕ್ರಾಂತ್ ಹಡಗಿನಲ್ಲಿ ಯೋಧನ ಮೃತದೇಹ ಪತ್ತೆ: ಯುದ್ಧ ನೌಕೆಯಲ್ಲಿ ನಡೆದಿದ್ದೇನು..?

  ಘಟನೆಗೆ ಸಂಬಂಧಪಟ್ಟ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಬಹ್​ರೈಚ್​​ನ ಶಿವಪುರ ಬೈರಾಗಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿನಿಯೊಂದಿಗೆ ಅಸಭ್ಯ ವರ್ತನೆ ತೋರಿದ ಶಿಕ್ಷಕನನ್ನು ದುರ್ಗಾ ಪ್ರಸಾದ್ ಜೈಸ್ವಾಲ್ ಎಂದು ಗುರುತಿಸಲಾಗಿದ್ದು, ಸುಮಾರು ಐದು ವರ್ಷಗಳಿಂದ ಶಾಲೆಯಲ್ಲಿ ಮುಖ್ಯೋಪಾಧ್ಯಾಯನಾಗಿ ಸೇವೆ ಸಲ್ಲಿಸುತ್ತಿದ್ದಾನೆ.

  ತರಗತಿಯ ಅವಧಿಯೊಂದರ ವೇಳೆ ತಾನು ಕುಳಿತಿದ್ದ ಕುರ್ಚಿ ಬಳಿ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯೊಬ್ಬಳನ್ನು ಕರೆದ ಶಿಕ್ಷಕನು, ಆಕೆಯ ತುಟಿಗೆ ಮುತ್ತಿಕ್ಕಿದ್ದಾನೆ. ಈ ವೇಳೆ ಘಟನಾ ಸ್ಥಳದಲ್ಲಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಶಿಕ್ಷಕನ ಕೃತ್ಯವನ್ನು ರೆಕಾರ್ಡ್ ಮಾಡಿದ್ದು, ನಂತರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.

  ಇದನ್ನೂ ಓದಿ: ಲವ್​ ಮಾಡಿ ಸ್ಮಶಾನದಲ್ಲಿ ಅದ್ಧೂರಿಯಾಗಿ ವಿವಾಹವಾದ ಜೋಡಿ: ಮದುವೆಗೂ ಮಸಣದ ನಡುವಿದೆ ಸಂಬಂಧ..!

  ವಿಡಿಯೋ ಹೊರಬಿದ್ದ ಕೂಡಲೇ ಜಿಲ್ಲಾ ಶಿಕ್ಷಣಾಧಿಕಾರಿಗಳು ಶಿಕ್ಷಕನನ್ನು ಕರ್ತವ್ಯದಿಂದ ಅಮಾನತುಗೊಳಿಸಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಹೇಳಿದ್ದಾರೆ. ಅಲ್ಲದೇ, ಸದ್ಯ ಫೋಟೋ ಮತ್ತು ವಿಡಿಯೋಗಳ ಪರಿಶೀಲನೆ ನಡೆಯುತ್ತಿದ್ದು, ಇದಾದ ಬಳಿಕ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸುತ್ತೇವೆ ಎಂದಿದ್ದಾರೆ. ಈ ಕುರಿತು ಮಾತನಾಡಿರುವ ಪೊಲೀಸರು, ಇಲ್ಲಿಯವರೆಗೆ ಯಾವುದೇ ಲಿಖಿತ ದೂರು ಬಂದಿಲ್ಲ. ದೂರು ಬಂದ ನಂತರ ತಕ್ಷಣವೇ ಪ್ರಕರಣವನ್ನು ಮುಂದುವರಿಸಲು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

  ಶಿಕ್ಷಕಿಯ ವರ್ತನೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ತರಗತಿಯಲ್ಲಿ ಶಿಕ್ಷಕನು ಬಟ್ಟೆ ಬಿಚ್ಚಿ ಮಲಗುವುದರ ಜತೆಗೆ ಆತ ಹಲವಾರು ತಿಂಗಳುಗಳಿಂದ ಶಾಲೆಯಲ್ಲಿ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಆರು ತಿಂಗಳ ಹಿಂದೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲಿಲ್ಲ ಎಂದು ಆರೋಪಿಸಿದ್ದಾರೆ.(ಏಜೆನ್ಸೀಸ್)

  ರಾಜ್ಯೋತ್ಸವ ರಸಪ್ರಶ್ನೆ - 22

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts