ಲವ್​ ಮಾಡಿ ಸ್ಮಶಾನದಲ್ಲಿ ಅದ್ಧೂರಿಯಾಗಿ ವಿವಾಹವಾದ ಜೋಡಿ: ಮದುವೆಗೂ ಮಸಣದ ನಡುವಿದೆ ಸಂಬಂಧ..!

marriage
Published on

ಅಹಮದ್‌ನಗರ: ಇತ್ತೀಚಿಗೆ ಮದುವೆ ಸಂಬಂಧಿಸಿದಂತೆ ಚಿತ್ರ ವಿಚಿತ್ರ ಘಟನೆಗಳು ಜರುಗುತ್ತಲೇ ಇವೆ. ಆಕಾಶದಲ್ಲಿ, ನೀರಿನಾಳದಲ್ಲಿ ಹೀಗೆ ಸಿಕ್ಕ ಸಿಕ್ಕ ಸ್ಥಳಗಳಲ್ಲಿ ಮದುವೆಗಳಾಗುತ್ತಿವೆ, ಆದರೆ ಇಲ್ಲೊಂದು ಜೋಡಿಯು ಸಂಪ್ರದಾಯ ಬದ್ಧವಾಗಿ ಸ್ಮಶಾನಲ್ಲಿ ಮದುವೆಯಾಗುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

ಮಯೂರಿ ಮತ್ತು ಮನೋಜ್ ನವ ಜೋಡಿಗಳೇ ಸ್ಮಶಾನದಲ್ಲಿ ವಿವಾಹ ಮಾಡಿಕೊಂಡಿರುವ ದಂಪತಿಗಳಾಗಿದ್ದು, ವಧು ಹಾಗೂ ವರ ಇಬ್ಬರೂ 12ನೇ ತರಗತಿಯವರೆಗೆ ಓದಿದ್ದಾರೆ. ನೆರೆಯ ರಾಜ್ಯವಾದ ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ರಹತಾ ಪಟ್ಟಣದಲ್ಲಿ ವಾಸಿಸುವ ಗಂಗಾಧರ ಗಾಯಕವಾಡ ದಂಪತಿಗಳು ಹಲವು ವರ್ಷಗಳಿಂದ ಸ್ಮಶಾನದಲ್ಲೇ ವಾಸವಾಗಿದ್ದು ಇಲ್ಲಿಯೇ ಕೆಲಸ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ​VIDEO| ಮೆಲ್ಛಾವಣಿ ಕಿತ್ತರೂ ರಸ್ತೆಗಿಳಿದ ಬಸ್​​ನ ಸ್ಥಿತಿ ಕಂಡು ದಂಗಾದ ನೆಟ್ಟಿಗರು

ಇತರರಿಗೆ ಅಶುಭವಾಗಿರುವ ಸ್ಮಶಾನವೇ ಇವರಿಗೆ ಜೀವನಾಧಾರವಾಗಿದ್ದು, ತಮ್ಮ ಮಗಳಾದ ಮಯೂರಿಯ ಸ್ಮಶಾನದಲ್ಲೇ ಆಡಿ ಬೆಳೆದಿದ್ದಾಳೆ. ಏತನ್ಮಧ್ಯೆ, ಮಯೂರಿಯು ಮತ್ತು ಮನೋಜ್ ಜೈಸ್ವಾಲ್ ಇಬ್ಬರೂ ಶಿರಸಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಇವರಿಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು. ಇವರ ಈ ಪ್ರೀತಿಗೆ ಇಬ್ಬರ ಮನೆಯವರೂ ಮದುವೆಗೆ ಅನುಮತಿ ನೀಡಿದ್ದು, ಗಾಯಕ್ವಾಡ್ ದಂಪತಿಗಳು ಸ್ಮಶಾನದಲ್ಲಿ ಮದುವೆ ಮಾಡಲು ನಿರ್ಧರಿಸಿದ್ದರು.

ಕೊನೆಗೆ ಇವರಿಬ್ಬರ ನಡುವಿನ ಮದುವೆ ಅದ್ಧೂರಿಯಾಗಿ ನಡೆದಿದ್ದು, ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡು ಮೂಢನಂಬಿಕೆಯನ್ನು ಮುರಿಯುವ ಈ ಉಪಕ್ರಮವನ್ನು ಸ್ವಾಗತಿಸುವುದರ ಜತೆಗೆ ನವದಂಪತಿಗಳಿಗೆ ಶುಭ ಹಾರೈಸಿದ್ದಾರೆ. ಸ್ಮಶಾನವೇ ಜೀವನದ ಕೊನೆಯ ಪಯಣವಾಗಿದ್ದು, ಗಾಯಕವಾಡ ದಂಪತಿಗಳು ತಮ್ಮ ಮಗಳ ಹೊಸ ಪಯಣವನ್ನು ಇಲ್ಲಿಂದಲೇ ಆರಂಭಿಸಿ ಸಮಾಜಕ್ಕೆ ಮೂಢನಂಬಿಕೆ ತೊಲಗಿಸುವ ಸಂದೇಶ ನೀಡಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net