More

  ಹಾಡಿನ ಸೌಂಡ್​ ಕಡಿಮೆ ಮಾಡು ಎಂದಿದ್ದಕ್ಕೆ ವ್ಯಕ್ತಿಯ ಪ್ರಾಣ ತೆಗೆದು ಪರಾರಿಯಾದ..

  ಗೋರಖ್‌ಪುರ: ಮನೆಯ ಬಳಿ ಜೋರಾಗಿ ಸಂಗೀತ ಹಾಕಿದ ಬಗ್ಗೆ ತಕರಾರು ನೀಡಿದ ನಂತರ ವ್ಯಕ್ತಿಯನ್ನು ಗುಂಡಿಕ್ಕಿ ಕೊಲೆಗೈದಿರುವ ಘಟನೆ ಉತ್ತರ ಪ್ರದೇಶದ ಗೋರಖ್​​ಪುರ ಜಿಲ್ಲೆಯಲ್ಲಿ ನಡೆದಿದೆ.

  ಇದನ್ನೂ ಓದಿ: ಮನೆಯ ಬಾತ್​ರೂಮ್​​ನಲ್ಲಿ 15ಕ್ಕೂ ಹೆಚ್ಚು ನಾಗರಹಾವಿನ ಮರಿ ಪ್ರತ್ಯಕ್ಷ: ವೃದ್ಧ ದಂಪತಿ ಕಂಗಾಲು

  ಮೃತನನ್ನು ರುದೌಲಿ ಗ್ರಾಮದ ನಿವಾಸಿ ರಾಜ್ ಕಿಶೋರ್ (45) ಎಂದು ಗುರುತಿಸಲಾಗಿದ್ದು, ಸುನೀಲ್ ಯಾದವ್ ಎಂಬಾತನೇ ಈ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ. ಗಣಿಗಾರಿಕೆಯ ಕಾರ್ಮಿಕನಾದ ಸುನೀಲ್​, ಮೃತನ ಮನೆ ಬಳಿ ಟ್ರ್ಯಾಕ್ಟರ್​​ನಲ್ಲಿ ಅಶ್ಲೀಲ ಸಂಗೀತವನ್ನು ಹಾಕಿ ಜೋರಾಗಿ ಸೌಂಡ್​ನ್ನು ಇಟ್ಟಿದ್ದ. ಇದಕ್ಕೆ ಕಿಶೋರ್ ಆಕ್ಷೇಪ ವ್ಯಕ್ತಪಡಿಸಿದಾಗ ಇಬ್ಬರ ನಡುವ ನಡುವೆ ವಾಗ್ವಾದ ನಡೆದಿದೆ.

  ಒಂದು ಗಂಟೆ ನಂತರ ಆರೋಪಿಯು ಐದಾರು ಗಣಿಗಾರಿಕೆ ಕಾರ್ಮಿಕರೊಡನೆ ಸೇರಿ ಕಿಶೋರ್​ ಹಾಗೂ ಆತನ ಮನೆಯವರ ಮೇಲೆ ಹಲ್ಲೆ ನಡೆಸಿದ್ದು, ಮಾತಿನ ಚಕಮಕಿಯ ನಡುವೆ ಗುಂಡು ಹಾರಿಸಿದ್ದಾನೆ. ಗುಂಡಿನ ಸದ್ದು ಕೇಳಿದ ಗ್ರಾಮದ ನಿವಾಸಿಗಳು ಹೊರಗೆ ಬಂದು ಆರೋಪಿಗಳನ್ನು ಬೆನ್ನಟ್ಟಿದ್ದು ಸ್ಥಳದಿಂದ ಅವರು ಪರಾರಿಯಾಗಲು ಯಶಸ್ವಿಯಾಗಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.(ಏಜೆನ್ಸೀಸ್​)

  ರಾಜ್ಯೋತ್ಸವ ರಸಪ್ರಶ್ನೆ - 24

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts