More

  ಮನೆಯ ಬಾತ್​ರೂಮ್​​ನಲ್ಲಿ 15ಕ್ಕೂ ಹೆಚ್ಚು ನಾಗರಹಾವಿನ ಮರಿ ಪ್ರತ್ಯಕ್ಷ: ವೃದ್ಧ ದಂಪತಿ ಕಂಗಾಲು

  ಸೀತಾಮರ್ಹಿ: ಮನೆಯ ಬಾತ್​ರೂಮ್​​ನಿಂದ 15ಕ್ಕೂ ಹೆಚ್ಚು ಹಾವಿನಮರಿಗಳು ಪ್ರತ್ಯಕ್ಷವಾಗುತ್ತಿರುವ ಘಟನೆ ಬಿಹಾರದ ಸೀತಾಮರ್ಹಿ ಜಿಲ್ಲೆಯ ಮುರಾದ್‌ಪುರ ಗ್ರಾಮದಲ್ಲಿ ನಡೆದಿದೆ.

  ಇದನ್ನೂ ಓದಿ: ಅಣ್ಣನ ಮಗಳನ್ನು ಮದುವೆಯಾದ; ಈ ವಿವಾಹಕ್ಕೆ ಗ್ರಾಮಸ್ಥರಿಂದ ವಿರೋಧ

  ​ಸ್ಥಳೀಯ ನಿವಾಸಿಯಾಗಿರುವ ಮಿಥ್ಲೇಶ್​ ಶರ್ಮಾ ಎಂಬುವರ ಮನೆಯಲ್ಲಿ ಕಳೆದ 5 ದಿನಗಳಿಂದ ನಾಗರ ಹಾವಿನ ಮರಿಗಳು ಬಾತ್​​​ರೂಮ್​​ನ ರಂಧ್ರದಿಂದ ಒಂದೊಂದಾಗಿ ಹೊರಬರುತ್ತಿವೆ. ಮಿಥ್ಲೇಶ್ ತನ್ನ ಪತ್ನಿಯೊಂದಿಗೆ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದು, ಘಟನೆಯಿಂದಾಗಿ ದಂಪತಿಗಳು ಭಯಭೀತರಾಗಿದ್ದಾರೆ.

  ಕೆಲವು ಹಾವುಗಳು ಕೋಣೆಯ ಒಂದು ಮೂಲೆಯಲ್ಲಿ ಆಶ್ರಯನ್ನು ಪಡೆದಿದ್ದರೆ, ಇನ್ನು ಕೆಲವು ಅಲ್ಲಿ ಇಲ್ಲಿ ಹರಿದಾಡುತ್ತಿವೆ. ಅಲ್ಲದೇ ಎರಡು ನಾಗರ ಹಾವುಗಳನ್ನು ಹಿಡಿದು ಬಕೆಟ್‌ನಲ್ಲಿ ಇರಿಸಲಾಗಿದೆ. ಐದಾರು ದಿನಗಳಿಂದ ಈ ಪ್ರಕ್ರಿಯೆ ನಡೆಯುತ್ತಿದ್ದು, ಹಾವುಗಳು ಹೊರಬರುತ್ತಿದ್ದ ರಂಧ್ರವನ್ನು ಈಗ ಮನೆಯ ಮಾಲೀಕರು ಮುಚ್ಚಿದ್ದಾರೆ.

  ಮಗ ಮತ್ತು ಸೊಸೆ ಒಡಿಶಾದಲ್ಲಿ ವಾಸಿಸುತ್ತಿದ್ದು, ಈ ಕುರಿತು ಅರಣ್ಯ ಇಲಾಖೆ ಸೇರಿದಂತೆ ಜಿಲ್ಲಾಡಳಿತಕ್ಕೆ ಮಗ ಆನ್‌ಲೈನ್ ಮಾಧ್ಯಮದ ಮೂಲಕ ಮಾಹಿತಿ ನೀಡಿದ್ದರೂ ಈವರೆಗೆ ಆಡಳಿತ ಅಥವಾ ಅರಣ್ಯ ಇಲಾಖೆ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ, ವಿಷಕಾರಿ ಹಾವುಗಳ ಭೀತಿಯಿಂದ ಸುತ್ತಮುತ್ತಲಿನ ಜನರೂ ಮನೆಗೆ ಬರುತ್ತಿಲ್ಲ ಎಂದು ತಿಳಿಸಿದರು. ಹಲವು ದಿನಗಳಿಂದ ರಾತ್ರಿಯಿಡೀ ಜಾಗರಣೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ದಂಪತಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts