

ಉದಯಪುರ: ನದಿ ಉಕ್ಕಿ ಹರಿಯುತ್ತಿದ್ದ ಸೇತುವೆಯೊಂದರಲ್ಲಿ ಸಿಲುಕಿದ್ದ ಇಬ್ಬರು ಯುವಕರನ್ನು ರಕ್ಷಿಸಿದ ಘಟನೆ ರಾಜಸ್ತಾನದ ಉದಯಪುರದ ಮೊರ್ವಾನಿಯಾದಲ್ಲಿ ಎಂಬಲ್ಲಿ ನಡೆದಿದೆ.
ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನದಿ ಉಕ್ಕಿ ಹರಿಯುತ್ತಿದ್ದಾಗಲೂ ಇಬ್ಬರು ಯುವಕರು ಬೈಕ್ನಿಂದ ದಾಟುವ ಹುಚ್ಚು ಸಾಹಸಕ್ಕೆ ಕೈಹಾಕಿದ್ದಾರೆ. ಪರಿಣಾಮವಾಗಿ ನೀರಿನ ರಭಸಕ್ಕೆ ಬೈಕ್ ಕೊಚ್ಚಿಕೊಂಡು ಹೋಗಿದ್ದು, ಕೂಡಲೇ ಯುವಕರು ಪ್ರಾಣ ಭಯದಿಂದ ಸೇತುವೆಯ ಅಂಚಿನಲ್ಲಿದ್ದ ಕಲ್ಲನ್ನು ಹಿಡಿದುಕೊಂಡಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿ ರಕ್ಷಣಾತಂಡ, 25 ನಿಮಿಷಗಳ ಪ್ರಯತ್ನದ ನಂತರ ಹೈಡ್ರಾಲಿಕ್ ಕ್ರೇನ್ ಸಹಾಯದಿಂದ ಇಬ್ಬರು ಯುವಕರನ್ನು ರಕ್ಷಿಸಿದ್ದು, ಬೈಕ್ನ್ನು ಸಹ ಪತ್ತೆ ಹಚ್ಚಿ ಹೊರತೆಗೆದಿದ್ದಾರೆ. ರಾಜಸ್ಥಾನದ ಹಲವು ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಇದರಿಂದಾಗಿ ಹಲವು ಭಾಗಗಳು ಜಲಾವೃತಗೊಂಡಿವೆ. ರಸ್ತೆಗಳೆಲ್ಲ ಜಲಾವೃತವಾದ ಪರಿಣಾಮ ಸಂಚಾರ ಸ್ಥಗಿತಗೊಂಡಿದೆ.(ಏಜೆನ್ಸೀಸ್)