More

    ಬಿಹಾರದಲ್ಲಿ ರಣಕಹಳೆ: ಈ ಬಾರಿ ಮತ್ತೆ ಬಿಜೆಪಿಗೆ ಅಧಿಕಾರ, 400 ಸ್ಥಾನ ಖಚಿತ ಎಂದ ಮೋದಿ

    ಬಿಹಾರ: ದೇಶದಲ್ಲಿ ರಾಜಕೀಯ ಬಿಸಿ ಏರಿದೆ. 2024ರ ಲೋಕಸಭೆ ಚುನಾವಣೆಗೆ ಬಿಜೆಪಿ ತಮ್ಮ ಪ್ರಚಾರವನ್ನು ತೀವ್ರಗೊಳಿಸಿದೆ. ಇಂದು (ಗುರುವಾರ) ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದಲ್ಲಿ ಬೃಹತ್‌ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.

    ಇದನ್ನೂ ಓದಿ: ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ವಿದ್ಯುತ್ ಕಂಬ ಹತ್ತಿ ಆತ್ಮಹತ್ಯೆ ಬೆದರಿಕೆ ಹಾಕಿದ ಪತ್ನಿ!

    ಬಿಹಾರದ ಜಮುಯಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಮೋದಿ, ರಾಜ್ಯದಲ್ಲಿ ಎನ್‌ಡಿಎ ಮೈತ್ರಿಕೂಟವು ಎಲ್ಲ 40 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ನಿಶ್ಚಿತ. ಹಾಗೆಯೇ, ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ಚಿರಾಗ್‌ ಪಾಸ್ವಾನ್‌ ಅವರನ್ನು ನನ್ನ ಕಿರಿಯ ಸಹೋದರ ಎಂದು ಬಣ್ಣಿಸಿದ್ದಾರೆ.

    ನನ್ನ ಕಿರಿಯ ಸಹೋದರ ಚಿರಾಗ್‌ ಪಾಸ್ವಾನ್‌ ಅವರು ನನ್ನ ಗೆಳೆಯ ರಾಮ್‌ ವಿಲಾಸ್‌ ಪಾಸ್ವಾನ್‌ ಅವರ ಹಾದಿಯಲ್ಲಿಯೇ ಸಾಗುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು. ಹಾಗೆಯೇ, ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು 400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಬಿಹಾರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಲಾಲೂ ಪ್ರಸಾದ್ ಯಾದವ್ ಕಾಲದಲ್ಲಿ ಬಡವರಿಗೆ ಉದ್ಯೋಗ ಕೊಡಿಸುವ ಹೆಸರಿನಲ್ಲಿ ಭೂಮಿ ಕಸಿದುಕೊಳ್ಳಲಾಯಿತು. ಕಿಡ್ನಾಪ್ ಉದ್ಯಮಕ್ಕೆ ಹೆಸರಾದವರು ರಾಜ್ಯದಲ್ಲಿ ರಸ್ತೆಗಳನ್ನು ನಿರ್ಮಿಸಲು ಬಿಡಲಿಲ್ಲ. ಬಿಹಾರವನ್ನು ಲ್ಯಾಂಟರ್ನ್ ಯುಗದಲ್ಲಿ ಇರಿಸಲು ಅವರು ಬಯಸುತ್ತಾರೆ. ಬಿಹಾರಕ್ಕೆ ಅಪಖ್ಯಾತಿ ತಂದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆರ್‌ಜೆಡಿ ಪಕ್ಷದ ಹಿರಿಯ ನಾಯಕ ಲಾಲೂ ಪ್ರಸಾದ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದರು.

    ಒಬ್ಬರನ್ನೊಬ್ಬರು ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದ ಇವರೆಲ್ಲ ಈಗ ಮೋದಿ ವಿರುದ್ಧ ನಿಂದಿಸಲು ಒಗ್ಗೂಡಿದ್ದಾರೆ ಇಂದು ಮೋದಿ ಬಂದಿದ್ದಾರೆ ಎಂದು ಹೆದರಿಸುತ್ತಿದ್ದಾರೆ. ಭ್ರಷ್ಟರು ತೆರೆದ ಕಿವಿಯಿಂದ ಕೇಳಬೇಕು. ಮೋದಿ ಬಂದಿಲ್ಲ ಬದಲಿಗೆ 140 ಕೋಟಿ ದೇಶವಾಸಿಗಳ ಕೋಪ ಹೊರಬಂದಿದೆ. ನಾವು ನಿತೀಶ್ ಕುಮಾರ್ ಅವರೊಂದಿಗೆ ಇದ್ದು ಬಿಹಾರದಲ್ಲಿ ರಸ್ತೆಗಳು ಮತ್ತು ಹೆದ್ದಾರಿಗಳನ್ನು ನಿರ್ಮಿಸುತ್ತಿದ್ದೇವೆ. ಬಿಹಾರದ ಅಭಿವೃದ್ದಿಗೆ ಪಣ ತೊಟ್ಟಿದ್ದೇವೆ ಎಂದರು.

    ಪ್ರಧಾನಿ ಮೋದಿಗೆ ಧನ್ಯವಾದ ಎಂದ ಚಿರಾಗ್‌: ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಜಮುಯಿ ಕ್ಷೇತ್ರವನ್ನು ಆಯ್ಕೆ ಮಾಡಿದ್ದಲ್ಲದೆ, ನನ್ನ ಪರವಾಗಿ ಪ್ರಚಾರ ಮಾಡುತ್ತಿರುವುದಕ್ಕೆ ಧನ್ಯವಾದಗಳು.

     

    ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ಬಕ್ರಾ ಮಾಡೋದು ಪ್ರಧಾನಿ ಮೋದಿ ಸಾಧನೆ: ಸಿದ್ದರಾಮಯ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts