ಸಿನಿಮಾ

11,000 ಸಾವಿರ ಉದ್ಯೋಗಿಗಳನ್ನು ವಜಾ ಮಾಡಲು ಮುಂದಾದ ವೊಡಾಫೋನ್​!

ನವದೆಹಲಿ: ಟೆಲಿಕಾಂ ದೈತ್ಯ ವೊಡಾಫೋನ್​ ಮುಂದಿನ ಮೂರು ವರ್ಷಗಳಲ್ಲಿ 11,000ಸಾವಿರ ಉದ್ಯೋಗಗಳನ್ನು ಕಡಿತ ಮಾಡಲಿದೆ ಎಂದು ವರದಿಯಾಗಿದೆ.

ನೂತನ ಸಿಇಒ ಮಾರ್ಗರಿಟಾ ಡೆಲ್ಲಾ ವ್ಯಾಲೆ ಈ ಕುರಿತು ಮಾತನಾಡಿ ನಮ್ಮ ಸ್ಪರ್ಧಾತ್ಮಕತೆಯನ್ನು ಮರಳಿ ಪಡೆಯಲು ನಾವು ನಮ್ಮ ಸಂಸ್ಥೆಯನ್ನು ಸರಳೀಕರಿಸುತ್ತೇವೆ, ಸಂಕೀರ್ಣತೆಯನ್ನು ಕಡಿತಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ.

ಉದ್ಯೋಗ ಕಡಿತ

ಕಳೆದ ಕೆಲವು ವರ್ಷಗಳಿಂದ ಕಂಪನಿಯ ಪ್ರದರ್ಶನ ಉತ್ತಮ್ಮವಾಗಿಲ್ಲ. ಜನತೆಯ ಬಳಿ ಸ್ಥಿರವಾಗಿ ನಮ್ಮ ಯೋಜನೆಗಳನ್ನು ತಲುಪಿಸಲು ನಾವು ಬದಲಾಗುತ್ತಿದ್ದೇವೆ ಎಂದು ತಮ್ಮ ಪ್ರಕಟಣೆಯಲ್ಲಿ ಹೇಳಿದ್ದಾರೆ.

vodafone (1)

ಸಂಸ್ಥೆಯಲ್ಲಿ ಬದಲಾವಣೆ ತರುವ ಕಾರಣಕ್ಕೆ ಮುಂದಿನ ಮೂರು ವರ್ಷಗಳಲ್ಲಿ 11,000 ಸಾವಿರಕ್ಕೂ ಹೆಚ್ಚು ಉದ್ಯೋಗಗಳನ್ನು ಕಡಿತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ರಾಜ್ಯ ಪೊಲೀಸ್​ ಇಲಾಖೆಯಲ್ಲಿ ಸದ್ಯದಲ್ಲೇ ನಡೆಯಲಿದೆ ಮೇಜರ್​ ಸರ್ಜರಿ!

ಯೂರೋಪಿಯನ್​ ಮಾರುಕಟ್ಟಗೆ ಸೀಮಿತ?

ಇನ್ನು ವೊಡಾಫೋನ್​ 11,000 ಸಾವಿರ ಉದ್ಯೋಗ ಕಡಿತಕ್ಕೆ ಮುಂದಾಗಿರುವುದು ಇದರ ಎಫೆಕ್ಟ್​ ಭಾರತಕ್ಕೆ ತಟ್ಟಬಹುದ ಎಂದು ಅಂದಾಜಿಸಲಾಗಿದೆ.

ಇನ್ನು ಭಾರತದಲ್ಲಿ ವೊಡಾಫೋನ್ ಐಡಿಯಾ ಸಂಸ್ಥೆಗೂ ಈ ಲೇಆಫ್​ಗೂ ಸಂಬಂಧ ಇಲ್ಲ ಎಂದು ಹೇಳಲಾಗಿದ್ದು ಉದ್ಯೋಗಕಡಿತ ಪ್ರಕ್ರಿಯೆ ಯೂರೋಪಿಯನ್ ಮಾರುಕಟ್ಟೆಗೆ ಸೀಮಿತವಾಗಬಹುದು.

Latest Posts

ಲೈಫ್‌ಸ್ಟೈಲ್