ಮಳೆಗಾಗಿ ಬಾಲಕಿಯರ ಬೆತ್ತಲೆ ಮೆರವಣಿಗೆ; ಮಹಿಳೆಯರ ಸಮ್ಮುಖದಲ್ಲೇ ವಿಚಿತ್ರ ಸಂಪ್ರದಾಯ

Rain
Published on

ನವದೆಹಲಿ: ಮಳೆ ಬರಲಿ ಎಂದು ಏನೇನೋ ವಿಚಿತ್ರ ಆಚರಣೆಗಳನ್ನು ಮಾಡುವುದು ಹಲವೆಡೆ ಇನ್ನೂ ಪ್ರಚಲಿತದಲ್ಲಿವೆ. ಆದರೆ ಇಲ್ಲೊಂದು ಕಡೆ ಮಳೆ ಬರಲಿ ಎಂಬ ಕಾರಣಕ್ಕೆ ಬಾಲಕಿಯರನ್ನು ಬೆತ್ತಲೆ ಮಾಡಿ ಮೆರವಣಿಗೆ ನಡೆಸಲಾಗಿದೆ. ವಿಪರ್ಯಾಸವೆಂದರೆ, ಮಹಿಳೆಯರ ಸಮ್ಮುಖದಲ್ಲೇ ಇಂಥದ್ದೊಂದು ಆಚರಣೆ ನಡೆದಿದೆ.

ಮಧ್ಯಪ್ರದೇಶದ ದಾಮೊಹ್ ಜಿಲ್ಲೆಯ ಒಂದು ಪ್ರದೇಶದಲ್ಲಿ ಇಂಥದ್ದೊಂದು ವಿಚಿತ್ರ ಆಚರಣೆ ನಡೆದಿದೆ. ವಿವಸ್ತ್ರಗೊಳಿಸಿದ ಬಾಲಕಿಯರಿಗೆ ಕಪ್ಪೆಗಳನ್ನು ಕಟ್ಟಿದ ಕೋಲುಗಳನ್ನು ಹೊರಿಸಿ ಓಡಾಡಿಸಲಾಗಿದೆ. ವಿಚಿತ್ರವೆಂದರೆ ಇಂಥ ಬಾಲಕಿಯರ ಜೊತೆ ಮಹಿಳೆಯರು ಹಾಡು ಹೇಳುತ್ತ, ಚಪ್ಪಾಳೆ ತಟ್ಟುತ್ತ ನಗುನಗುತ್ತ ಪಾಲ್ಗೊಂಡಿದ್ದಾರೆ.

ಮಳೆ ಬರದೆ ಬೆಳೆಗಳು ಒಣಗಿ ಹೋಗಿವೆ. ನಾವೆಲ್ಲರೂ ಮಳೆಯ ತೀವ್ರ ನಿರೀಕ್ಷೆಯಲ್ಲಿದ್ದೇವೆ. ಸದ್ಯಕ್ಕೆ ಮಳೆ ತುಂಬಾ ಅಗತ್ಯವಾಗಿದೆ. ಬಾಲಕಿಯರನ್ನು ಹೀಗೆ ಬೆತ್ತಲೆ ಓಡಾಡಿಸುವುದರಿಂದ ಮಳೆ ದೇವತೆ ಸಂಪೀತಗೊಂಡು ಮಳೆ ಸುರಿಯಲ್ಪಡುತ್ತದೆ ಎಂಬ ನಂಬಿಕೆ ಇದೆ ಎಂಬುದಾಗಿ ಮಹಿಳೆಯೊಬ್ಬರು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net