20 ಬಾರಿ ಇರಿದು ಅಪ್ರಾಪ್ತೆಯ ಭೀಕರ ಹತ್ಯೆ: ಆಘಾತಕಾರಿ ದೃಶ್ಯ ಕ್ಯಾಮರಾದಲ್ಲಿ ಸೆರೆ

Crime
Published on

ದೆಹಲಿ: ಅಪ್ರಾಪ್ತೆಗೆ 20 ಬಾರಿ ಇರಿದು, ನಂತರ ಕಲ್ಲಿನಿಂದ ಜಜ್ಜಿ ಭೀಕರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ದೆಹಲಿಯ ಶಹಾಬಾದ್ ಡೈರಿ ಪ್ರದೇಶದಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಸಾಕ್ಷಿ(16) ಎಂದು ಗುರುತಿಸಲಾಗಿದ್ದು, ಸಾಹಿಲ್​ ಆಕೆಯನ್ನು ಹತ್ಯೆಗೈದ ಆರೋಪಿಯಾಗಿದ್ದು ಆತನ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

stabbed at delhi

ಆರೋಪಿ ಸಾಹಿಲ್​, ತನ್ನ ಮನೆಯ ಹೊರಗೆ ಅಪ್ರಾಪ್ತೆಗೆ ಇರಿದ ನಂತರ ಅಲ್ಲಿಯೇ ಇದ್ದ ಕಲ್ಲನ್ನು ಎತ್ತಿ ಆಕೆಯ ಮುಖವನ್ನು ಜಜ್ಜಿ ಹಾಕಿದ್ದಾನೆ. ದಾರಿಹೋಕರ ಮುಂದೆಯೇ ಈ ಭೀಕರ ಕೃತ್ಯ ನಡೆದಿದ್ದು, ಅಸಹಾಯಕತೆಯಿಂದ ದುಷ್ಕರ್ಮಿಯು ಹೇಯ ಕೃತ್ಯ ನಡೆಸುತ್ತಿರುವುದನ್ನು ನೋಡಿ ದಿಗ್ಭ್ರಮೆಗೊಂಡರು.

ಈ ಕುರಿತು ಮಾತನಾಡಿರುವ ಪೊಲೀಸರು, ಮೃತ ಸಾಕ್ಷಿ ಹಾಗೂ ಆಕೆಯ ಬಾಯ್​ಫ್ರೆಂಡ್​ ಸಾಹಿಲ್ ನಿನ್ನೆ ಸಾಯಂಕಾಲ ಜಗಳವಾಡಿದ್ದರು. ಈ ಹಿನ್ನೆಲೆ ಆಕೆಯನ್ನು ಆತ ಕೊಲೆಗೈದು ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.(ಏಜನ್ಸೀಸ್)​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net