More

    ಇಸ್ರೋದಿಂದ ಸುಧಾರಿತ ನ್ಯಾವಿಗೇಷನ್ ಉಪಗ್ರಹ ಯಶಸ್ವಿ ಉಡಾವಣೆ

    ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಶ್ರೀಹರಿಕೋಟಾದಿಂದ ತನ್ನ ಸುಧಾರಿತ ನ್ಯಾವಿಗೇಷನ್ ಉಪಗ್ರಹ GSLV-F12 ಮತ್ತು NVS-01ನ್ನು ಉಡಾವಣೆ ಮಾಡಿದೆ. ಆಂಧ್ರದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಎರಡನೇ ಉಡಾವಣಾ ಕೇಂದ್ರದಿಂದ ಇವುಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.

    ಇದನ್ನೂ ಓದಿ: ಮಾಜಿ ಪ್ರಧಾನಿಯ ನೆಚ್ಚಿನ ದೇವಸ್ಥಾನದಲ್ಲಿ ಭಕ್ತರ ತಲೆ ಮೇಲೆ ಕಾಲಿಟ್ಟ ಪುಡಿ ರೌಡಿ!

    ಭಾರತದ ಪ್ರಾದೇಶಿಕ ನ್ಯಾವಿಗೇಷನ್ ವ್ಯವಸ್ಥೆಯನ್ನು ಬಲಪಡಿಸಲು ಈ ಉಪಗ್ರಹವನ್ನು ಉಪಯೋಗಿಸಲಾಗುತ್ತಿದ್ದು, ಇದು ಭೂಮಿ, ನೀರು ಮತ್ತು ವಾಯು ಮಾರ್ಗಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. 2,232 ಕೆಜಿ ತೂಕದ ಉಪಗ್ರಹ ಇದಾಗಿದ್ದು, 12 ವರ್ಷಗಳವರೆಗೆ ಇದು ಕಾರ್ಯನಿರ್ವಹಿಸಲಿದೆ.

    ನ್ಯಾವಿಗೇಷನ್ ಉಪಗ್ರಹವನ್ನು ಇಂದು ಬೆಳಿಗ್ಗೆ 10.42ಕ್ಕೆ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿದ್ದು, ರಾಕೆಟ್ ಉಡಾವಣೆಯಾದ 20 ನಿಮಿಷಗಳ ನಂತರ ಸುಮಾರು 251 ಕಿ.ಮೀ. ಎತ್ತರದಲ್ಲಿ ಜಿಯೋಸಿಂಕ್ರೋನಸ್ ವರ್ಗಾವಣೆ ಕಕ್ಷೆಯಲ್ಲಿ ಸೇರಿದೆ ಎಂದು ಇಸ್ರೋ ಹೇಳಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts