More

    ಸಿಎಂ-ಡಿಸಿಎಂ ರಾಜ್ಯವನ್ನು ಅಶಾಂತಿಯ ಬೀಡಾಗಿ ಪರಿವರ್ತಿಸುತ್ತಿದ್ದಾರೆ: ಕಿಡಿಕಾರಿದ ರಾಜ್ಯ ಬಿಜೆಪಿ

    ಬೆಂಗಳೂರು: ಅಧಿಕಾರ ಪಡೆಯಲು‌ ಕಾರ್ಯಸಾಧುವಲ್ಲದ ಸುಳ್ಳು ಗ್ಯಾರಂಟಿಗಳ ಪುಂಗಿ ಊದಿರುವ ಕಾಂಗ್ರೆಸ್, ಈಗ ಯೋಜನಗೆಳನ್ನು ಈಡೇರಿಸಲು ಮೀನಮೇಷ ಎಣಿಸುತ್ತಿದೆ ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ. ಇದನ್ನೂ ಓದಿ: ಗ್ಯಾರಂಟಿ ಯೋಜನೆ ಜಾರಿಯಾಗದಿದ್ದರೆ ಅರಾಜಕತೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ: ಬಿ.ವೈ.ವಿಜಯೇಂದ್ರ

    ಈ ಬಗ್ಗೆ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯ ಬಿಜೆಪಿ, ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಮೀನಮೇಷ ಎಣಿಸುತ್ತಿರುವುದರ ಪರಿಣಾಮವಾಗಿ ರಾಜ್ಯದ ಸ್ವಾಸ್ಥ್ಯ ಸಂಪೂರ್ಣವಾಗಿ ಹದಗೆಡುತ್ತಿದೆ. ಗ್ಯಾರಂಟಿಗಳಿಗಾಗಿ ಜನಸಾಮಾನ್ಯರು ಮತ್ತು ಅಧಿಕಾರಿ ವರ್ಗದ ನಡುವೆ ರಾಜ್ಯದಲ್ಲಿ ಗಲಾಟೆಗಳು-ಸಂಘರ್ಷಗಳು ದಿನನಿತ್ಯ ವರದಿಯಾಗುತ್ತಲೇ ಇವೆ ಎಂದು ಹೇಳಿದೆ.

    ಶಾಂತಿ-ಸಮೃದ್ಧಿಯ ನಾಡಾಗಿದ್ದ ಕರ್ನಾಟಕ ರಾಜ್ಯವನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಅಶಾಂತಿಯ ಬೀಡಾಗಿ, ಗೊಂದಲದ ಗೂಡಾಗಿ ಪರಿವರ್ತಿಸುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

    ವಿಜಯವಾಣಿ ವರದಿ ಪ್ರಸ್ತಾಪ

    ಕನ್ನಡದ ನಂಬರ್ 1 ದಿನಪತ್ರಿಕೆ ವಿಜಯವಾಣಿ ಇಂದು(28-05-23) ‘ರಾಜ್ಯದಲ್ಲಿ ಹೆಚ್ಚಾಯ್ತು ಗ್ಯಾರಂಟಿ ಗಲಾಟೆ’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಇದೀಗ ಈ ವರದಿಯನ್ನು ಉಲ್ಲೇಖಿಸಿ ಬಿಜೆಪಿ ಟ್ವೀಟ್ ಮಾಡಿದೆ.

    ವರದಿಯಲ್ಲೇನಿದೆ?

    ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ. ಹೀಗಾಗಿ ನಾವು ಕರೆಂಟ್ ಬಿಲ್ ಕಟ್ಟುವುದಿಲ್ಲ. ಬಸ್ ಟಿಕೆಟ್ ಖರೀದಿಸುವುದಿಲ್ಲ ಎಂದು ಸರ್ಕಾರಿ ಬಸ್‌ ಹಾಗೂ ಬೆಸ್ಕಾಂ ಸಿಬ್ಬಂದಿಯೊಂದಿಗೆ ಸಾರ್ವಜನಿಕರು ವಾಗ್ವಾದ ನಡೆಸುತ್ತಿರುವ ಪ್ರಕರಣಗಳು ರಾಜ್ಯಾದ್ಯಂತ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.

    ಇದನ್ನೂ ಓದಿ: VIDEO | ನೂತನ ಸಂಸತ್ ಭವನದಲ್ಲಿ ಮೂಡಿದ ಕನ್ನಡದ ಕಂಪು; ಗೋಡೆ ಮೇಲೆ ಅಚ್ಚೊತ್ತಲಾಗಿದೆ ಬಸವಣ್ಣನವರ ವಚನ!

    ಕಾಂಗ್ರೆಸ್‌ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ 5 ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಭರವಸೆ ನೀಡಿತ್ತು. ಇದರಲ್ಲಿ ಪ್ರಮುಖವಾಗಿ 200 ಯೂನಿಟ್ ಉಚಿತ ವಿದ್ಯುತ್ ಮತ್ತು ಸರ್ಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಗ್ಯಾರಂಟಿ ಯೋಜನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಾತ್ವಿಕ ಅನುಮೋದನೆ ನೀಡಿದ್ದಾರೆ. ಆದರೆ ಇನ್ನೂ ಅಧಿಕೃತವಾಗಿ ಆದೇಶ ಮಾಡಿಲ್ಲ. ಈ ಮಧ್ಯೆ ರಾಜ್ಯದಲ್ಲಿ ಉಚಿತ ಕರೆಂಟ್‌ ಹಾಗೂ ಬಸ್‌ ಪ್ರಯಾಣಕ್ಕಾಗಿ ಗ್ಯಾರಂಟಿ ಗಲಾಟೆ ಆರಂಭವಾಗಿದ್ದು, ಗ್ರಾಹಕರ ಹಾಗೂ ಪ್ರಯಾಣಿಕರ ಮನವೊಲಿಸಲು ಬೆಸ್ಕಾಂ ಮತ್ತು ಕೆಎಸ್‌ಆರ್‌ಟಿಸಿ ಸಿಬ್ಬಂದಿ ಹೈರಾಣಾಗಿ ಹೋಗಿದ್ದಾರೆ.

    ಚುನಾವಣೆಗೆ ಮುನ್ನ ತನ್ನ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿಗಳನ್ನು ಕಾಂಗ್ರೆಸ್ ಘೋಷಿಸಿತ್ತು, ಈಗ ಕಾಂಗ್ರೆಸ್ ಬಹುಮತ ಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಚುನಾವಣೆಗೂ ಮುನ್ನ ನೀಡಿರುವ ಭರವಸೆಗಳನ್ನು ಈಡೇರಿಸಲೇಬೇಕಾದ ಅನಿವಾರ್ಯತೆಯಿದೆ. ಈ ಐದು ಗ್ಯಾರಂಟಿಗಳನ್ನು ಪೂರೈಸಲು ಅಂದಾಜು 50 ಸಾವಿರ ಕೋಟಿ ರೂ. ಬೇಕಾಗಬಹುದು ಎಂದು ಸಿದ್ದರಾಮಯ್ಯ ಅಂದಾಜಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts