ನವದೆಹಲಿ: ಇತ್ತೀಚೆಗೆ ಪಾಕಿಸ್ತಾನ ಮೂಲದ ಟಿಕ್ಟಾಕ್ ಸ್ಟಾರ್ ಹಾಗೂ ನಟಿ ಮಿನಾಹಿಲ್ ಮಲಿಕ್ ( Minahil Malik ) ಹೆಸರು ಹೆಚ್ಚು ಚರ್ಚೆಯಲ್ಲಿದೆ. ಅಲ್ಲದೆ, ಗೂಗಲ್‌ನಲ್ಲಿ ಈಕೆಗಾಗಿ ಭಾರಿ ಹುಡುಕಾಟವೇ ನಡೆಯುತ್ತಿದೆ. ಅಚ್ಚರಿಯ ಸಂಗತಿಯೇನೆಂದರೆ, ಈ ಮಿನಾಹಿಲ್‌ಗಾಗಿ ಹುಡುಕಾಟ ನಡೆಸುತ್ತಿರುವವರಲ್ಲಿ ಭಾರತೀಯರೇ ಹೆಚ್ಚು. ಅಷ್ಟಕ್ಕೂ ಈಕೆಯನ್ನು ಹುಡುಕುತ್ತಿರುವುದೇಕೆ ಎಂಬ ಪ್ರಶ್ನೆ ನಿಮ್ಮ ತಲೆಯಲ್ಲಿ ಮೂಡಿರಬಹುದು. ಅದಕ್ಕೆ ಉತ್ತರ ಇಲ್ಲಿದೆ ನೋಡಿ.
ಮಿನಾಹಿಲ್ ಮಲಿಕ್, ತನ್ನ ಗೆಳೆಯನ ಜತೆಗಿರುವ ಖಾಸಗಿ ದೃಶ್ಯಗಳು ವೈರಲ್ ಆದ ನಂತರ ಗೂಗಲ್‌ನಲ್ಲಿ ಆಕೆಯನ್ನು ಹುಡುಕಾಡುತ್ತಿರುವವರ ಸಂಖ್ಯೆಯು ಹೆಚ್ಚಾಗಿದೆ. ಅಕ್ಟೋಬರ್ ತಿಂಗಳಲ್ಲಿ ಮಿನಾಹಿಲ್ ಅವರ ಖಾಸಗಿ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು. ಈ ಘಟನೆಯ ಬಳಿಕ ಮಿನಾಹಿಲ್‌ಗಾಗಿ ಹುಡುಕುತ್ತಿರುವವರ ಸಂಖ್ಯೆ ಮತ್ತು ಆಕೆಯ ವಿರುದ್ಧದ ಟೀಕೆಗಳು ಹೆಚ್ಚಾಗಿವೆ.
ಇದನ್ನೂ ಓದಿ: ಡಾನ್ಸಿಂಗ್ ಕ್ವೀನ್ ಶ್ರೀಲೀಲಾ; “ಪುಷ್ಪ 2: ದ ರೂಲ್’ ಚಿತ್ರದಲ್ಲಿ “ಕಿಸ್’ ಹುಡುಗಿಯ “ಕಿಸಿಕ್’!
ರೂಮ್ನಲ್ಲಿ ತನ್ನ ಗೆಳೆಯನೊಂದಿಗೆ ಏಕಾಂತದಲ್ಲಿರುವ ಖಾಸಗಿ ದೃಶ್ಯಗಳು ವೈರಲ್ ಆಗಿವೆ. ಆದರೆ, ಇದು ಆಕಸ್ಮಿಕವಾಗಿ ನಡೆದದ್ದಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಉದ್ದೇಶದಿಂದಲೇ ಮಿನಾಹಿಲ್ ಮತ್ತು ಆಕೆಯ ಗೆಳೆಯ ಈ ಕೃತ್ಯ ಎಸಗಿದ್ದಾರೆ ಎಂದು ಪಾಕಿಸ್ತಾನದಲ್ಲಿ ವ್ಯಾಪಕ ಟೀಕೆಗಳು ಕೂಡ ವ್ಯಕ್ತವಾಗಿವೆ.
ಇನ್ನು ಕೆಲವರು ಮಿನಾಹಿಲ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಅವರ ಖಾಸಗಿ ಬದುಕನ್ನು ಗೌರವಿಸಬೇಕು ಎಂದಿದ್ದಾರೆ. ಆದರೆ, ಬೆಂಬಲಕ್ಕಿಂತ ಆಕೆ ವಿರುದ್ಧದ ಟೀಕೆಗಳು ಪ್ರಬಲವಾಗಿವೆ. ವಾರಗಟ್ಟಲೆ ಪಾಕಿಸ್ತಾನದ ಸಾಮಾಜಿಕ ಜಾಲತಾಣದಲ್ಲಿ ಮಿನಾಹಿಲ್, ಹಸಿ ಬಿಸಿ ಟಾಪಿಕ್ ಆಗಿರುವುದರಿಂದ ಭಾರತದಲ್ಲಿ ಆಕೆಯನ್ನು ಹುಡುಕುತ್ತಿರುವವರ ಸಂಖ್ಯೆ ಗಗನಕ್ಕೇರಿದೆ. ಇನ್ನು ಖಾಸಗಿ ವಿಡಿಯೋ ಸುದ್ದಿ ಹೊರಬಿದ್ದ ಬೆನ್ನಲ್ಲೇ ಮಿನಾಹಿಲ್ ಮಲಿಕ್ ಅವರ ಈ ಹಿಂದಿನ ಇನ್ಸ್ಟಾಗ್ರಾಂ ವಿಡಿಯೋಗಳ ವೀಕ್ಷಣೆ ಸಂಖ್ಯೆಯಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ.
ಇದನ್ನೂ ಓದಿ: ಲಖನೌ ಸೂಪರ್ಜೈಂಟ್ಸ್ ತಂಡ ತೊರೆದಿದ್ದಕ್ಕೆ ಕಾರಣ ಬಿಚ್ಚಿಟ್ಟ ಕೆಎಲ್ ರಾಹುಲ್!
ಈ ವಿವಾದದ ಬಗ್ಗೆ ಅಕ್ಟೋಬರ್ 30 ರಂದು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಮಿನಾಹಿಲ್, ಹರಿದಾಡುತ್ತಿರುವ ವಿಡಿಯೋ ಮಾರ್ಫ್ ವಿಡಿಯೋ ಆಗಿದೆ. ಅವುಗಳನ್ನು ಎಡಿಟ್ ಮಾಡಿ ಹರಿಬಿಡಲಾಗಿದೆ. ಈ ವಿಡಿಯೋ ಸಂಪೂರ್ಣ ನಕಲಿಯಾಗಿದ್ದು, ಎಫ್‌ಐಎಗೆ ದೂರು ನೀಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಕಾರಣರಾದವರನ್ನು ಕೂಡಲೇ ಬಂಧಿಸಲಾಗುವುದು. ಈ ಘಟನೆಯು ತನಗೆ ಮತ್ತು ತನ್ನ ಕುಟುಂಬಕ್ಕೆ ಅತೀವ ಮಾನಸಿಕ ಸಂಕಟ ತಂದಿದೆ ಎಂದು ವಿಡಿಯೋದಲ್ಲಿ ಮಿನಾಹಿಲ್ ನೋವು ತೋಡಿಕೊಂಡಿದ್ದಾರೆ. ಆದರೆ ಇದು ಕೂಡ ಮತ್ತೊಂದು ಪ್ರಚಾರದ ಸ್ಟಂಟ್ ಎಂದು ಕೆಲವರು ಟೀಕಿಸಿದ್ದಾರೆ.
ವರದಿಗಳ ಪ್ರಕಾರ ‘ಪಾಕಿಸ್ತಾನಿ ಟಿಕ್ಟಾಕ್ ವೈರಲ್ ವಿಡಿಯೋ’, ಪಾಕಿಸ್ತಾನಿ ಎಚ್‌ಡಿ ವಿಡಿಯೋ ಹಾಗೂ ಪಾಕಿಸ್ತಾನಿ ವೈರಲ್ ಎಂಎಂಎಸ್ ಎಂಬ ಕೀವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಮಿನಾಹಿಲ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಉತ್ತರ ಪ್ರದೇಶ ಹಾಗೂ ಬಿಹಾರದಂತಹ ರಾಜ್ಯಗಳಿಂದ ಅಂತಹ ಕೀವರ್ಡ್‌ಗಳನ್ನು ಬಳಸಿಕೊಂಡು ಹೆಚ್ಚಿನ ಹುಡುಕಾಟಗಳು ನಡೆದಿವೆ. ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ಹಿಮಾಚಲ ಪ್ರದೇಶವೂ ಸೇರಿದೆ.
ಅಂದಹಾಗೆ ಮಿನಾಯಿಲ್, ಟಿಕ್ಟಾಕ್ನಲ್ಲಿ ಹಲವಾರು ಅನುಯಾಯಿಗಳನ್ನು ಹೊಂದಿರುವ ಪಾಕಿಸ್ತಾನದ ಸಾಮಾಜಿಕ ಜಾಲತಾಣದ ಸ್ಟಾರ್. ಇನ್ಸ್ಟಾಗ್ರಾಂನಲ್ಲಿ 1.8 ಮಿಲಿಯನ್ಗೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಮಿನಾಹಿಲ್ ದೂರಿನ ಮೇರೆಗೆ ಎಫ್‌ಐಎ ತನಿಖೆ ನಡೆಯುತ್ತಿದೆ. (ಏಜೆನ್ಸೀಸ್)