ಬೆಂಗಳೂರು: ಕಳೆದ 2 ವರ್ಷಗಳ ಕಾಲ ಬರೋಬ್ಬರಿ 17 ಕೋಟಿ ರೂ. ವಾರ್ಷಿಕ ವೇತನಕ್ಕೆ ಲಖನೌ ಸೂಪರ್ಜೈಂಟ್ಸ್ ತಂಡದ ಪರ ಆಡಿದ್ದರೂ, ಈ ಬಾರಿ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಗೆ ಮುನ್ನ ಕೆಎಲ್ ರಾಹುಲ್ ಆ ತಂಡದಿಂದ ಹೊರಬಂದಿದ್ದಾರೆ. ಇದಕ್ಕೆ ಕಾರಣವೇನೆಂದು ಕನ್ನಡಿಗ ಕೆಎಲ್ ರಾಹುಲ್ ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ.
“ನಾನು ಹೊಸ ಆರಂಭ ಕಾಣಲು ಮುಂದಾಗಿದ್ದೇನೆ. ನನ್ನ ಮುಂದಿರುವ ಹೊಸ ಆಯ್ಕೆಗಳ ಬಗ್ಗೆ ತಿಳಿದುಕೊಳ್ಳಲು ಬಯಸಿದ್ದೇನೆ. ಸ್ವತಂತ್ರವಾಗಿ ಆಡುವ ಹಂಬಲದಲ್ಲಿದ್ದೇನೆ. ತಂಡದ ವಾತಾವರಣ ತಿಳಿಯಾಗಿರುವ ಕಡೆ ಆಡಬೇಕೆಂದಿದ್ದೇನೆ’ ಎಂದು ರಾಹುಲ್ ಹೇಳಿದ್ದಾರೆ. ಜತೆಗೆ 2025ರ ಐಪಿಎಲ್ನಲ್ಲಿ ಮಿಂಚುವ ಮೂಲಕ ಭಾರತ ಟಿ20 ತಂಡಕ್ಕೂ ಮರಳುವ ಆಸೆ ವ್ಯಕ್ತಪಡಿಸಿದ್ದಾರೆ.
ರಾಹುಲ್ ಹೊರಬಿದ್ದ ಬಳಿಕ ಲಖನೌ ತಂಡದ ಮಾಲೀಕ ಸಂಜೀವ್ ಗೋಯೆಂಕಾ, ನಮಗೆ ತಂಡಕ್ಕಾಗಿ ಆಡುವ ಆಟಗಾರರಷ್ಟೇ ಬೇಕು ಎಂದಿದ್ದರೆ, ಇದೀಗ ರಾಹುಲ್ ಸ್ವತಂತ್ರವಾಗಿ ಆಡುವ ಅವಕಾಶ ಬೇಕೆಂದು ಹೇಳಿರುವುದು ಕುತೂಹಲ ಕೆರಳಿಸಿದೆ.
ಅಣಕು ಹರಾಜಿನಲ್ಲಿ 20 ಕೋಟಿ ರೂ.ಗೆ ಆರ್ಸಿಬಿ ಪಾಲಾದ ಕೆಎಲ್ ರಾಹುಲ್!