ಅಣಕು ಹರಾಜಿನಲ್ಲಿ 20 ಕೋಟಿ ರೂ.ಗೆ ಆರ್​ಸಿಬಿ ಪಾಲಾದ ಕೆಎಲ್​ ರಾಹುಲ್​!

web rahul
Published on

ಬೆಂಗಳೂರು: ಲಖನೌ ಸೂಪರ್​ಜೈಂಟ್ಸ್​ ತಂಡದಿಂದ ರಿಲೀಸ್​ ಆಗಿರುವ ಕರ್ನಾಟಕದ ಸ್ಟಾರ್​ ಬ್ಯಾಟರ್​ ಕೆಎಲ್​ ರಾಹುಲ್​ ಈ ಬಾರಿ ಆರ್​ಸಿಬಿ ತಂಡಕ್ಕೆ ಮರಳುವ ಅಭಿಮಾನಿಗಳ ನಿರೀಕ್ಷೆಗಳ ನಡುವೆ, ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಅಣಕು ಐಪಿಎಲ್​ ಹರಾಜಿನಲ್ಲಿ ಬರೋಬ್ಬರಿ 20 ಕೋಟಿ ರೂ.ಗೆ ಆರ್​ಸಿಬಿ ತಂಡದ ಪಾಲಾಗಿದ್ದಾರೆ.

ಅಭಿಮಾನಿಗಳಿಗಾಗಿ ಆರ್​ಸಿಬಿ ಏರ್ಪಡಿಸಿದ್ದ ಅಣಕು ಹರಾಜು ಪ್ರಕ್ರಿಯೆಯಲ್ಲಿ ರಾಹುಲ್​ರನ್ನು ಸೆಳೆದುಕೊಳ್ಳಲು ಅಭಿಮಾನಿಗಳು 20 ಕೋಟಿ ರೂ.ವರೆಗೂ ಬಿಡ್​ ಸಲ್ಲಿಸಿದರು. ಕೆಎಲ್​ ರಾಹುಲ್​ ವೃತ್ತೀಜಿವನದ ಆರಂಭದಲ್ಲಿ 2013ರಿಂದ 2016ರವರೆಗೆ ಆರ್​ಸಿಬಿ ತಂಡದಲ್ಲೇ ಆಡಿದ್ದರು. ಕೆಎಲ್​ ರಾಹುಲ್​ ಆರ್​ಸಿಬಿ ತಂಡಕ್ಕೆ ಮತ್ತೆ ಮರಳಬೇಕು ಮತ್ತು ನಾಯಕರಾಗಬೇಕು ಎಂದು ಅಭಿಮಾನಿಗಳು ಈಗಾಗಲೆ ಸಾಮಾಜಿಕ ಜಾಲತಾಣದಲ್ಲಿ ಬೇಡಿಕೆ ಇಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net