

Minahil Malik : ಪಾಕಿಸ್ತಾನ ಮೂಲದ ಖ್ಯಾತ ಟಿಕ್ಟಾಕರ್ ಮತ್ತು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಮಿನಾಹಿಲ್ ಮಲಿಕ್ ಅವರದ್ದು ಎನ್ನಲಾದ ಖಾಸಗಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿದ್ದು, ಎಲ್ಲೆಡೆ ವೈರಲ್ ಆಗುತ್ತಿವೆ.
ಯುವಕನ ಜತೆ ರೊಮ್ಯಾಂಟಿಕ್ ಆಗಿರುವ ಖಾಸಗಿ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮಿನಾಹಿಲ್ ಮಲಿಕ್ ಅವರದ್ದು ಎಂದು ಹೇಳಲಾಗುತ್ತಿದೆ. ವಿಡಿಯೋ ಲೀಕ್ ಆಗುತ್ತಿದ್ದಂತೆ ಮಿನಾಹಿಲ್ ಅವರು ಜಾಲತಾಣದಲ್ಲಿ ಟ್ರೆಂಡಿಂಗ್ನಲ್ಲಿದ್ದಾರೆ. ಕೆಲವರು ಟಿಕ್ಟಾಕರ್ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರೆ, ಇನ್ನು ಕೆಲವರು ವೈಯಕ್ತಿಕ ವಿಚಾರಗಳನ್ನು ಈ ರೀತಿ ಸೋರಿಕೆ ಮಾಡಬಾರದು ಎಂದು ಮಿನಾಹಿಲ್ ಮಲಿಕ್ ಪರ ಬ್ಯಾಟ್ ಬೀಸಿದ್ದಾರೆ.
ತಮ್ಮ ಹೆಸರು ಕೇಳಿಬರುತ್ತಿದ್ದಂತೆ ಟಿಕ್ಟಾಕ್ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಮಿನಾಹಿಲ್ ಮಲಿಕ್ ಸ್ಪಷ್ಟನೆ ನೀಡಿದ್ದಾರೆ. ಹರಿದಾಡುತ್ತಿರುವ ವಿಡಿಯೋ ಮಾರ್ಫ್ ವಿಡಿಯೋ ಆಗಿದೆ. ಅವುಗಳನ್ನು ಎಡಿಟ್ ಮಾಡಿ ಹರಿಬಿಡಲಾಗಿದೆ. ಈ ವಿಡಿಯೋ ಸಂಪೂರ್ಣ ನಕಲಿಯಾಗಿದ್ದು, ಎಫ್ಐಎಗೆ ದೂರು ನೀಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಕಾರಣರಾದವರನ್ನು ಕೂಡಲೇ ಬಂಧಿಸಲಾಗುವುದು. ಈ ಘಟನೆಯು ತನಗೆ ಮತ್ತು ತನ್ನ ಕುಟುಂಬಕ್ಕೆ ಅತೀವ ಮಾನಸಿಕ ಸಂಕಟ ತಂದಿದೆ ಎಂದು ವಿಡಿಯೋದಲ್ಲಿ ಮಿನಾಹಿಲ್ ನೋವು ತೋಡಿಕೊಂಡಿದ್ದಾರೆ.
ಈಗ ಹರಿದಾಡುತ್ತಿರುವ ವಿಡಿಯೋಗಳು ಅವರ ವರ್ಚಸ್ಸು ಹಾಳು ಮಾಡುವ ಷಡ್ಯಂತ್ರದ ಭಾಗವಾಗಿದೆ. ಎಲ್ಲವನ್ನೂ ಎಡಿಟ್ ಮಾಡಿ ಸೇರಿಸಿದ್ದಾರೆ ಎಂದು ಮಿನಾಹಿಲ್ ಹೇಳಿದ್ದಾರೆ. ಅಂದಹಾಗೆ ಮಿನಾಯಿಲ್, ಟಿಕ್ಟಾಕ್ನಲ್ಲಿ ಹಲವಾರು ಅನುಯಾಯಿಗಳನ್ನು ಹೊಂದಿರುವ ಪಾಕಿಸ್ತಾನದ ಸಾಮಾಜಿಕ ಜಾಲತಾಣದ ಸ್ಟಾರ್. ಇನ್ಸ್ಟಾಗ್ರಾಂನಲ್ಲಿ 1.8 ಮಿಲಿಯನ್ಗೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಮಿನಾಹಿಲ್ ದೂರಿನ ಮೇರೆಗೆ ಎಫ್ಐಎ ತನಿಖೆ ಆರಂಭಿಸಿದೆ.
ಓವಿಯಾ ಲೀಕ್ಡ್ ( Oviya Leaked ) ಹ್ಯಾಶ್ಟ್ಯಾಗ್ ಹೆಸರಲ್ಲಿ ಕೆಲ ದಿನಗಳ ಹಿಂದೆ ನಟಿ ಓವಿಯಾ ಅವರದ್ದು ಎನ್ನಲಾದ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಸುದ್ದಿ ಭಾರಿ ಚರ್ಚೆಯಾಗಿತ್ತು. ಈ ಬಗ್ಗೆ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಓವಿಯಾ ಕೊಟ್ಟ ಉತ್ತರವೂ ಕೂಡ ಶಾಕ್ ಆಗಿತ್ತು. ಯಾವಾಗ ವಿಡಿಯೋಗಳು ಹೆಚ್ಚು ಹರಿದಾಡಿತೋ ಆಗ ದೂರು ಸಹ ದಾಖಲಿಸಿದ್ದಾರೆ. ಅಲ್ಲದೆ, ಇದರ ಹಿಂದೆ ಮಾಜಿ ಸ್ನೇಹಿತನಮ ಕೈವಾಡ ಇದೆ ಎಂತಲೂ ಆರೋಪಿಸಿದ್ದಾರೆ. (ಏಜೆನ್ಸೀಸ್)