“ಪುಷ್ಪ : ದ ರೈಸ್’ ಚಿತ್ರದಲ್ಲಿ “ಊ ಅಂಟಾವಾ’ ಹಾಡಿನ ಮೂಲಕ ಸಮಂತಾ ರುತ್ ಪ್ರಭು ಪ್ಯಾನ್ ಇಂಡಿಯಾ ಸದ್ದು ಮಾಡಿದ್ದರು. ಇದೀಗ ಮೂರು ವರ್ಷಗಳ ಬಳಿಕ “ಪುಷ್ಪ 2: ದ ರೂಲ್’ನಲ್ಲಿ ಸಮಂತಾ ಜಾಗಕ್ಕೆ ಕನ್ನಡದ ಹುಡುಗಿ ಶ್ರೀಲೀಲಾ ಬಂದಿದ್ದಾರೆ. ಕೆಲ ದಿನಗಳ ಹಿಂದೆಯೇ ಶ್ರೀಲೀಲಾ “ಪುಷ್ಪ 2’ನ ಸ್ಪೆಷಲ್ ಸಾಂಗ್ನಲ್ಲಿ ಕುಣಿಯಲಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿದ್ದಾರೂ, ಚಿತ್ರತಂಡ ಆ ಬಗ್ಗೆ ಅಧಿಕೃತ ಘೋಷಣೆ ಮಾಡಿರಲಿಲ್ಲ. ಇತ್ತೀಚೆಗಷ್ಟೆ ಅಲ್ಲು ಅರ್ಜುನ್ ಮತ್ತು ಶ್ರೀಲಿಲಾ ಸೆಟ್ನಲ್ಲಿ ಡಾನ್ಸ್ ಮಾಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದರ ಬೆನ್ನಲ್ಲೇ ತಡ ಮಾಡುವುದು ಬೇಡವೆಂದು ಚಿತ್ರತಂಡ ಶ್ರೀಲೀಲಾ ಲುಕ್ ರಿವೀಲ್ ಮಾಡಿದೆ.
ಶ್ರೀಲೀಲಾರನ್ನು ಡಾನ್ಸಿಂಗ್ ಕ್ವೀನ್ ಎಂದಿರುವ ಹೊಚ್ಚ ಹೊಸ ಪೋಸ್ಟರ್ ರಿಲೀಸ್ ಮಾಡಿರುವ “ಪುಷ್ಪ’ ಟೀಮ್, ಈ ವಿಶೇಷ ಹಾಡನ್ನು ” 2024ರ ಕಿಸಿಕ್ ಸಾಂಗ್’ ಎಂದು ಕರೆದಿದೆ. ಕನ್ನಡದಲ್ಲಿ “ಕಿಸ್’, “ಬೈಟೂ ಲವ್’, ತೆಲುಗಿನ “ಧಮಾಕಾ’ ಸೇರಿ ಹಲವು ಚಿತ್ರಗಳಲ್ಲಿ ನಟಿಸಿರುವ ಶ್ರೀಲೀಲಾ ಸದ್ಯ ಟಾಲಿವುಡ್ನಲ್ಲಿ ಹೆಚ್ಚು ಬಿಜಿಯಾಗಿದ್ದಾರೆ. ಜತೆಗೆ ತಮ್ಮ ಹೈಪರ್ ಸ್ಟೆಪ್ಸ್ ಮೂಲಕ ಉತ್ತಮ ಡಾನ್ಸರ್ ಆಗಿಯೂ ಗುರುತಿಸಿಕೊಂಡಿದ್ದಾರೆ.
ಹೀಗಾಗಿಯೇ ಅವರನ್ನು “ಪುಷ್ಪ 2′ ಸ್ಪೆಷಲ್ ಸಾಂಗ್ಗೆ ಆಯ್ಕೆ ಮಾಡಿಕೊಳ್ಳಲಾಗಿದ್ದು, ಶ್ರೀಲೀಲಾ ಮತ್ತು ಅಲ್ಲು ಅರ್ಜುನ್ ನಡುವೆ ಒಂದೊಳ್ಳೆ ಡಾನ್ಸ್ ಶೋಡೌನ್ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಅಂದಹಾಗೆ ಈ ಸೀಕ್ವೆಲ್ ಇದೇ ಡಿ. 5ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ.