blank

ಪಕ್ಷದ ರಾಷ್ಟ್ರೀಯ ಪ್ರಧಾನ ಸಂಯೋಜಕರಾಗಿ ಸೋದರಳಿಯ ಆಕಾಶ್ ಆನಂದ್​ರನ್ನು ನೇಮಿಸಿದ ಮಾಯಾವತಿ| Mayawati

blank

ನವದೆಹಲಿ: ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಅವರು ತಮ್ಮ ಸೋದರಳಿಯ ಆಕಾಶ್ ಆನಂದ್ ಅವರನ್ನು ಪಕ್ಷದ ಎಲ್ಲಾ ಹುದ್ದೆಗಳಿಂದ ತೆಗೆದುಹಾಕಿದ ಕೆಲ ತಿಂಗಳುಗಳ ಬಳಿಕ ಅವರನ್ನು ಪಕ್ಷದ ಮುಖ್ಯ ರಾಷ್ಟ್ರೀಯ ಸಂಯೋಜಕರನ್ನಾಗಿ ನೇಮಿಸಿದ್ದಾರೆ. ದೆಹಲಿಯ ಲೋಧಿ ರಸ್ತೆಯಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

blank

ಇದನ್ನೂ ಓದಿ: ಇಷ್ಟು ಕೋಟಿ ರೂ. ಕೊಟ್ಟರೆ ಮಾತ್ರ… ಬಹುನಿರೀಕ್ಷಿತ ಚಿತ್ರಕ್ಕೆ ಗುಡ್​ಬೈ ಹೇಳಿದ ನಟಿ ಶ್ರದ್ಧಾ! ಏಕ್ತಾ ಕಪೂರ್ ಬೇಸರ | Shraddha Kapoor

ಸಭೆಯಲ್ಲಿ ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ ದೇಶದಾದ್ಯಂತದ ಪಕ್ಷದ ಅಧಿಕಾರಿಗಳು ಭಾಗವಹಿಸಿದ್ದರು. ಉತ್ತರ ಪ್ರದೇಶದ ಎಲ್ಲಾ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಮತ್ತು ಸಂಯೋಜಕರು ಸಭೆಯಲ್ಲಿ ಭಾಗವಹಿಸಿದ್ದರು. ಅವರೊಂದಿಗೆ, ಎಲ್ಲಾ ರಾಷ್ಟ್ರೀಯ ಸಂಯೋಜಕರು, ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಅಧ್ಯಕ್ಷರು ಸಹ ಭಾಗಿಯಾಗಿದ್ದರು.
ಇಂದಿನ ಸಭೆಯಲ್ಲಿ ಮಾಯಾವತಿ ತಮ್ಮ ಸೋದರಳಿಯ ಆಕಾಶ್ ಆನಂದ್ ಅವರಿಗೆ ಬಿಎಸ್​ಪಿಯನ್ನು ದೇಶಾದ್ಯಂತ ಮುನ್ನಡೆಸುವ ಮಹತ್ವದ ಜವಾಬ್ದಾರಿಯನ್ನು ವಹಿಸಿದರು. ಈ ಬಾರಿ ಆಕಾಶ್ ಪಕ್ಷ ಮತ್ತು ಅದರ ಚಳುವಳಿ ಎರಡನ್ನೂ ಬಲಪಡಿಸಲು ಶ್ರದ್ಧೆಯಿಂದ ಮತ್ತು ಎಚ್ಚರಿಕೆಯಿಂದ ಕೆಲಸ ಮಾಡುತ್ತಾರೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು.

ಈ ಬಾರಿ ಆಕಾಶ್ ಆನಂದ್ ಅವರು ಪಕ್ಷದ ಮತ್ತು ಚಳವಳಿಯ ಹಿತದೃಷ್ಟಿಯಿಂದ ಎಚ್ಚರಿಕೆಯಿಂದ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಪಕ್ಷದ ಸೈದ್ಧಾಂತಿಕ ಅಡಿಪಾಯವನ್ನು ಬಲಪಡಿಸುತ್ತಾರೆ ಎಂದು ಆಶಿಸಲಾಗಿದೆ ಎಂದು ಬಿಎಸ್​ಪಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದಕ್ಕೂ ಮುನ್ನ ಮಾರ್ಚ್ 3 ರಂದು, ಮಾಯಾವತಿ, ಆಕಾಶ್ ಆನಂದ್ ಅವರನ್ನು ಪಕ್ಷದಿಂದ ಹೊರಹಾಕಿದ್ದರು. ಆದರೆ ಕೇವಲ ನಲವತ್ತು ದಿನಗಳ ಬಳಿಕ, ಏಪ್ರಿಲ್ 13 ರಂದು, ಅವರು ಸಾರ್ವಜನಿಕ ಕ್ಷಮೆಯಾಚಿಸಿದ ನಂತರ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡರು.

ಇದನ್ನೂ ಓದಿ: ಥಗ್ ಲೈಫ್ ಚಿತ್ರದಲ್ಲಿ ಕಮಲ್​ ಹಾಸನ್​-ಅಭಿರಾಮಿ ಲಿಪ್​ಲಾಕ್​: ವಯಸ್ಸಿನ ಅಂತರದ ಬಗ್ಗೆ ಭಾರಿ ಟೀಕೆ! Kamal Hassan

ಮುಂಬರುವ ಚುನಾವಣೆಯಲ್ಲಿ ಆಕಾಶ್ ಆನಂದ್ ಪಕ್ಷದ ಪ್ರಚಾರದ ಜವಾಬ್ದಾರಿಯನ್ನು ಸಹ ವಹಿಸಿಕೊಳ್ಳಲಿದ್ದಾರೆ. ಪ್ರಸ್ತುತ, ಬಿಎಸ್​​ಪಿಯಲ್ಲಿ ಮೂವರು ರಾಷ್ಟ್ರೀಯ ಸಂಯೋಜಕರನ್ನು ನೇಮಿಸಲಾಗಿದೆ. ಮುಖ್ಯ ರಾಷ್ಟ್ರೀಯ ಸಂಯೋಜಕ ಆಕಾಶ್ ಆನಂದ್ ಅವರ ನೇತೃತ್ವ ವಹಿಸಲಿದ್ದಾರೆ.
ರಾಷ್ಟ್ರೀಯ ಸಂಯೋಜಕರಾಗಿ ನೇಮಕಗೊಂಡವರಲ್ಲಿ ರಾಜ್ಯಸಭಾ ಸಂಸದರಾದ ರಾಮ್‌ಜಿ ಗೌತಮ್, ರಣಧೀರ್ ಬೇನಿವಾಲ್ ಮತ್ತು ರಾಜಾರಾಂ ಅವರನ್ನು ರಾಷ್ಟ್ರೀಯ ಸಂಯೋಜಕರಾಗಿ ನೇಮಕ ಮಾಡಲಾಗಿದೆ. ಆಕಾಶ್ ಆನಂದ್ ಅವರ ರಾಜಕೀಯ ಜವಾಬ್ದಾರಿಯನ್ನು ಹೆಚ್ಚಿಸುವ ನಿರ್ಧಾರವನ್ನು ಪಕ್ಷದಲ್ಲಿ ಹೊಸ ಚೈತನ್ಯ ತುಂಬುವ ನಿರ್ಧಾರವೆಂದು ಪರಿಗಣಿಸಲಾಗುತ್ತಿದೆ.

ಮಾಯಾವತಿ ಎಕ್ಸ್​ನಲ್ಲಿ ಪೋಸ್ಟ್ ಮಾಡಿ ಆಕಾಶ್‌ಗೆ ಮತ್ತೊಂದು ಅವಕಾಶ ನೀಡುವುದಾಗಿ ಘೋಷಿಸಿದರು. ಆಕಾಶ್ ಅವರ ಸಾರ್ವಜನಿಕ ಕ್ಷಮೆಯಾಚನೆ, ಹಿರಿಯರಿಗೆ ಸಂಪೂರ್ಣ ಗೌರವ ನೀಡುವ ಭರವಸೆ, ಚಳವಳಿಗೆ ಅವರ ಸಮರ್ಪಣೆಯನ್ನು ಅವರು ಉಲ್ಲೇಖಿಸಿದರು. ಆದಾಗ್ಯೂ, ಭವಿಷ್ಯದಲ್ಲಿ ಯಾರನ್ನೂ ತಮ್ಮ ಉತ್ತರಾಧಿಕಾರಿಯಾಗಿ ನೇಮಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದರು.
(ಏಜೆನ್ಸೀಸ್)

ಅವಳ ದೇಹದಲ್ಲಿ…! ಇದನ್ನೆಲ್ಲ ಮೆಟ್ಟಿ ನಿಲ್ಲಲೇಬೇಕು: ನಟಿ ಅನನ್ಯ ಪಾಂಡೆ ಓಪನ್ ಟಾಕ್ | Ananya Panday

Share This Article
blank

ಬಿಸಾಡುವ ಮುನ್ನ ತಿಳಿಯಿರಿ Watermelon Seeds ಪವರ್​​: ಇದರಲ್ಲಿದೆ 5 ನಂಬಲಾಗದ ಆರೋಗ್ಯ ಪ್ರಯೋಜನೆಗಳು

Watermelon Seeds: ಬೇಸಿಗೆಯಲ್ಲಿ ಬಿಸಿಲು ಜೋರಾದ ತಕ್ಷಣ ದೇಹವನ್ನು ತಂಪಾಗಿಸಲು ನಾವು ಹೆಚ್ಚಾಗಿ ಕಲ್ಲಂಗಡಿಯನ್ನು ಆಶ್ರಯಿಸುತ್ತೇವೆ.…

ಈ ಗಿಡಗಳನ್ನು ಬೆಳೆಸಿದರೆ ಸಾಕು, ನಿಮ್ಮ ಮನೆಗೆ ಒಂದೇ ಒಂದು ಸೊಳ್ಳೆಯೂ ಬರುವುದಿಲ್ಲ..Plants

Plants: ಮಳೆಗಾಲ ಬಂತೆಂದರೆ ಸಾಕು ಅನೇಕ ಜನರು ತಮ್ಮ ಮನೆಯಂಗಳದಲ್ಲಿ ವಿವಿಧ ಗಿಡಗಳನ್ನ ನೆಡಲು ಪ್ರಾರಂಭಿಸುತ್ತಾರೆ.…

blank