Shraddha Kapoor: ಬಾಲಿವುಡ್ ಅಂಗಳದಲ್ಲಿ ಬ್ಲಾಕ್ಬಸ್ಟರ್ ‘ಆಶಿಕಿ 2’ ಚಿತ್ರದ ಮೂಲಕ ತನ್ನ ಬೇಡಿಕೆಯನ್ನು ಹೆಚ್ಚಿಸಿಕೊಂಡ ನಟಿ ಶ್ರದ್ಧಾ ಕಪೂರ್, ಇದೀಗ ತಮ್ಮ ಪಾಲಿಗೆ ಒಲಿದು ಬಂದ ಬಹುನಿರೀಕ್ಷಿತ ಹಾಗೂ ಅತ್ಯುತ್ತಮ ಚಿತ್ರತಂಡವನ್ನು ಕೇವಲ ಸಂಭಾವನೆ ವಿಷಯಕ್ಕೆ ಕೈಬಿಟ್ಟಿದ್ದಾರೆ ಎಂದು ಸಿನಿ ವರದಿಗಳು ಸ್ಪಷ್ಟಪಡಿಸಿವೆ.

ಇದನ್ನೂ ಓದಿ: ಗ್ರೇಟರ್ ಬೆಂಗಳೂರು? ಅಧಿಕ ಮಳೆಯಾದ್ರೆ ಮುಳುಗುತ್ತದೆ; ಕಡಿಮೆ ಸುರಿದರೆ ತೇಲುತ್ತದೆ: ಸರ್ಕಾರದ ವಿರುದ್ಧ ಎಚ್ಡಿಕೆ ಕಿಡಿ | HDK
ಬಾಲಿವುಡ್ನ ಹೆಸರಾಂತ ನಿರ್ಮಾಪಕಿ, ನಿರ್ದೇಶಕಿ ಏಕ್ತಾ ಕಪೂರ್ ಅವರ ಮುಂದಾಳತ್ವದಲ್ಲಿ ಮೂಡಿಬರಲು ಸಜ್ಜಾಗಿರುವ ಹೈ ಕಾನ್ಸೆಪ್ಟ್ ಥ್ರಿಲ್ಲರ್ ಚಿತ್ರದಲ್ಲಿ ನಟಿಸಲು ಬರೋಬ್ಬರಿ 17 ಕೋಟಿ ರೂ. ಸಂಭಾವನೆ ಕೇಳಿದ ಶ್ರದ್ಧಾ, ಇಷ್ಟೇ ಅಲ್ಲದೇ ಚಿತ್ರ ತೆರೆಕಂಡ ಬಳಿಕ ಅದರಿಂದ ಬರುವ ಲಾಭವನ್ನು ಹಂಚಿಕೊಳ್ಳುವಂತೆ ಬೇಡಿಕೆ ಇಟ್ಟಿದ್ದರು ಎಂದು ವರದಿಗಳು ಹೇಳಿವೆ. ಈ ವಿಚಾರಕ್ಕೆ ಏಕ್ತಾ ಕಪೂರ್ ಮತ್ತು ಶ್ರದ್ಧಾ ನಡುವೆ ಒಂದಷ್ಟು ಮಾತುಕತೆ ಕೂಡ ನಡೆದಿದೆ. ಅಂತಿಮವಾಗಿ ಒಂದು ರೂಪಾಯಿ ಕಡಿಮೆಯಾದರೂ ಪ್ರಾಜೆಕ್ಟ್ ಒಪ್ಪಿಕೊಳ್ಳುವ ಮಾತಿಲ್ಲ ಎಂದ ಶ್ರದ್ಧಾ, ಕಡೆಗೂ ಏಕ್ತಾ ಅವರ ಮಹಿಳಾ ಪ್ರಧಾನ ಚಿತ್ರದಿಂದ ಹೊರನಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
17 ಕೋಟಿ ರೂ. ಮೊತ್ತದ ಭಾರಿ ಸಂಭಾವನೆ ಜೊತೆಗೆ ಚಿತ್ರದ ಲಾಭದಲ್ಲಿ ಪಾಲನ್ನು ಕೇಳಿದ್ದು ನಿರ್ದೇಶಕಿ ಏಕ್ತಾಗೆ ತೀವ್ರ ಅಸಮಧಾನ ಮೂಡಿಸಿತ್ತು. ಈ ಒಪ್ಪಂದದಲ್ಲಿ ದೊಡ್ಡ ಅಪಾಯವಿದೆ ಎಂದು ಭಾವಿಸಿದ ಏಕ್ತಾ ಕಪೂರ್, ಶ್ರದ್ಧಾ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಆ ಬಳಿಕ ಶ್ರದ್ಧಾ ಚಿತ್ರದ ಭಾಗವಾಗದಿರಲು ನಿರ್ಧರಿಸಿದ್ದಾರೆ ಎಂದು ಸಿನಿ ವರದಿಗಳು ಉಲ್ಲೇಖಿಸಿವೆ. ನಟಿಯ ದುಬಾರಿ ಸಂಭಾವನೆಗೆ ಇತ್ತೀಚೆಗೆ ಸೂಪರ್ಹಿಟ್ ಕಂಡ ‘ಸ್ತ್ರೀ 2’ ಸಿನಿಮಾ ಕಾರಣ ಎಂದು ಹೇಳಲಾಗಿದೆ. ಈ ಚಿತ್ರದಲ್ಲಿ ಶ್ರದ್ಧಾ ಕಪೂರ್ ಮುಖ್ಯಭೂಮಿಕೆಯಲ್ಲಿ ನಟಿಸಿ ಮಿಂಚಿದ್ದಾರೆ. ಜೊತೆಗೆ ಚಿತ್ರವು ಬಾಲಿವುಡ್ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ ಕಂಡಿತು,(ಏಜೆನ್ಸೀಸ್).
ಪಾಕ್ಗೆ ಇನ್ನೂ ಬಾಕಿ ಇದೆ! ಶಾಕ್ಗಳಿಂದಲೇ ತತ್ತರಿಸಿರುವ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದ IMF; 11 ಹೊಸ ಷರತ್ತು