ಮದ್ವೆ ಏನೋ ತುಂಬಾ ಸರಳವಾಗಿತ್ತು ಆದ್ರೆ ಸಿದ್ಧಾರ್ಥ್​ ಧರಿಸಿದ್ದ ವಾಚ್​ ಬೆಲೆ ಕೇಳಿದ್ರೆ ನೀವು ದಂಗಾಗ್ತೀರಾ!

Siddharth Watch

ಹೈದರಾಬಾದ್​: ನಟ ಸಿದ್ಧಾರ್ಥ್ ಮತ್ತು ನಟಿ ಅದಿತಿ ಹೈದರಿ ರಾವ್ ಎರಡು ದಿನಗಳ ಹಿಂದಷ್ಟೇ ವಿವಾಹವಾದರು. ತೆಲಂಗಾಣದ 400 ವರ್ಷಗಳಷ್ಟು ಹಳೆಯದಾದ ವನಪರ್ತಿ ದೇವಸ್ಥಾನದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ತುಂಬಾ ಸರಳವಾಗಿ ಮದುವೆ ಸಮಾರಂಭ ನಡೆಯಿತು. ಇಬ್ಬರೂ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮದುವೆಯ ಚಿತ್ರಗಳನ್ನು ಹಂಚಿಕೊಂಡು ವಿವಾಹ ಸುದ್ದಿಯನ್ನು ಖಚಿತಪಡಿಸಿದರು.

ಮದುವೆ ಸಮಾರಂಭ ತುಂಬಾ ಸರಳವಾಗಿತ್ತು. ಮದುವೆಯಲ್ಲಿ ಅದಿತಿ ಬಿಳಿ ಮತ್ತು ಚಿನ್ನದ ಬಣ್ಣದ ಸೀರೆಯನ್ನು ಧರಿಸಿದ್ದರು. ಸಿದ್ಧಾರ್ಥ್ ಅವರು ಬಿಳಿ ಕುರ್ತಾ ಧರಿಸಿದ್ದರು. ವಾಚ್ ಕೂಡ ಹಾಕಿಕೊಂಡಿದ್ದರು. ಇದೀಗ ಸಿದ್ಧಾರ್ಥ್​ ಧರಿಸಿದ್ದ ವಾಚ್ ಹಲವರ ಗಮನ ಸೆಳೆದಿದೆ. ವಾಚ್​ ನೋಡಲು ಬಹಳ ಸಿಂಪಲ್ ಆಗಿದೆ. ಆದರೆ, ಅದರ ಬೆಲೆ ಕೇಳಿದರೆ ಒಂದು ಕ್ಷಣ ನಿಮ್ಮ ಹುಬ್ಬೇರೋದು ಖಚಿತ. ಏಕೆಂದರೆ, ಈ ವಾಚ್​ನ ಬೆಲೆ 22 ಲಕ್ಷದಿಂದ 50 ಲಕ್ಷ ರೂಪಾಯಿವರೆಗೂ ಇದೆ. ಈ ವಾಚ್​ನ ಹೆಸರು ಆಡೆಮಾರ್ಸ್ ಪಿಗುಯೆಟ್ ರಾಯಲ್ ಓಕ್ ಡ್ಯುಯಲ್ ಟೀಸ್.

ಅಂದಹಾಗೆ ಅದಿತಿ ರಾವ್ ಅವರು ಹೈದರಾಬಾದ್‌ನ ಪ್ರಸಿದ್ಧ ರಾಜಮನೆತನದಲ್ಲಿ ಜನಿಸಿದರು. ವನಪರ್ತಿ ರಾಜ ಸಾಮ್ರಾಜ್ಯದ ಕೊನೆಯ ದೊರೆ ಅದಿತಿ ರಾವ್ ಅವರ ತಾಯಿಯ ಅಜ್ಜ. ಅದಕ್ಕಾಗಿಯೇ ವನಪರ್ತಿಯ ಶ್ರೀರಂಗಾಪುರದ ಶ್ರೀ ರಂಗನಾಯಕಸ್ವಾಮಿ ದೇವಸ್ಥಾನದಲ್ಲಿ ಈ ಸ್ಟಾರ್​ಗಳ ವಿವಾಹ ಸಮಾರಂಭ ನೆರವೇರಿತು ಎಂದು ವರದಿಯಾಗಿದೆ.

ಸಿದ್ಧಾರ್ಥ್ ಮತ್ತು ಅದಿತಿ ರಾವ್ 2021 ರಿಂದ ಪ್ರೀತಿಸುತ್ತಿದ್ದಾರೆ. 2021 ರಲ್ಲಿ ‘ಮಹಾಸಮುದ್ರಂ’ ಚಿತ್ರದಲ್ಲಿ ಒಟ್ಟಿಗೆ ನಟಿಸಿದಾಗ ಇಬ್ಬರ ನಡುವೆ ಪ್ರೇಮಾಂಕುರವಾಯಿತು. ಕೆಲ ವರ್ಷಗಳ ಕಾಲ ಡೇಟಿಂಗ್​ ಮಾಡಿದ ಈ ಜೋಡಿ ಇದೀಗ ಸಪ್ತಪದಿ ತುಳಿದಿದೆ. ಇದು ಇಬ್ಬರಿಗೂ ಎರಡನೇ ಮದುವೆ. 2003ರಲ್ಲಿ ಸಿದ್ದಾರ್ಥ್ ಅವರಿಗೆ ಮೊದಲ ವಿವಾಹವಾಗಿತ್ತು. ಸಿದ್ಧಾರ್ಥ್ ತಮ್ಮ ಬಾಲ್ಯದ ಗೆಳತಿ ಮೇಘನಾಳನ್ನು ವಿವಾಹವಾಗಿದ್ದರು. ಆದರೆ 2007ರಲ್ಲಿ ದಂಪತಿಗಳು ವಿಚ್ಛೇದನ ಪಡೆದರು. ಅದಿತಿಯ ಮೊದಲ ಪತಿ ಬಾಲಿವುಡ್ ನಟ ಸತ್ಯದೀಪ್ ಮಿಶ್ರಾ. ಅವರು 2009ರಲ್ಲಿ ವಿವಾಹವಾದರು ಮತ್ತು 2013 ರಲ್ಲಿ ಬೇರ್ಪಟ್ಟರು. (ಏಜೆನ್ಸೀಸ್​)

ಭಿಕ್ಷುಕರು ಮನಸ್ಸು ಮಾಡಿದ್ರೆ ಕೋಟಿ ರೂ. ದುಡಿಯಬಹುದೆಂದು ತೋರಿಸಿಕೊಟ್ಟ ಚಂದ್ರ ಮಿಶ್ರಾ! ಇಲ್ಲಿದೆ ಸ್ಫೂರ್ತಿಯ ಕತೆ

ಮಕ್ಕಳಿಗೆ ಬಾಳೆಹಣ್ಣು ಕೊಡುವ ಮುನ್ನ ಈ ವಿಚಾರಗಳು ನಿಮಗೆ ಗೊತ್ತಿರಲಿ ಇಲ್ಲದಿದ್ರೆ ಆರೋಗ್ಯ ಕೆಡಬಹುದು ಎಚ್ಚರ!

ನಿಮಗೂ ಈ ರೀತಿ ಕರೆ ಬರಬಹುದು ಎಚ್ಚರ! ಪೊಲೀಸರ ವೇಷದಲ್ಲಿ ವಿಡಿಯೋ ಕಾಲ್ ಮಾಡಿ ಹಣ ಪೀಕುವ ದುಷ್ಟರು

Share This Article

Salt Water : ಪ್ರತಿದಿನ ಬೆಳಗ್ಗೆ ಉಗುರು ಬೆಚ್ಚನೆಯ ನೀರಿನಲ್ಲಿ ಉಪ್ಪು ಹಾಕಿ ಕುಡಿದರೆ ಏನಾಗುತ್ತೆ ಗೊತ್ತಾ?

ಬೆಂಗಳೂರು: ನಾವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳುವುದು ತುಂಬಾ…

World Arthritis Day: ಸಂಧಿವಾತ ಕಾಯಿಲೆಗೆ ಚಿಕಿತ್ಸೆಯೇ ಮದ್ದು! ತಜ್ಞವೈದ್ಯೆ ಡಾ. ಅರ್ಚನಾ ಎಂ. ಉಪ್ಪಿನ ಅಭಿಮತ

ಪ್ರಸ್ತುತ ದಿನಗಳಲ್ಲಿ ಬಿಪಿ-ಶುಗರ್ ಸಮಸ್ಯೆಯಂತೆ ಅರ್ಥರೈಟಿಸ್ ( Arthritis ) , ರುಮಾಟಾಲಜಿ (ಸಂಧಿವಾತ/ ಕೀಲುವಾಯು)…

Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..

ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…