ಮಾಜಿ ಶಾಸಕರ ಸೊಸೆ ಸತ್ತಿದ್ದು ಆಕ್ಸಿಡೆಂಟ್​ನಿಂದಲ್ಲ! ಬೆಚ್ಚಿ ಬೀಳಿಸುತ್ತೆ ಆಕೆಯ ಸಾವಿನ ಹಿಂದಿನ ರಹಸ್ಯ

mur
Published on

ಇಟಾನಗರ: ಇತ್ತೀಚೆಗೆ ಅರುಣಾಚಲ ಪ್ರದೇಶದಲ್ಲಿ ಅಪಘಾತದಿಂದಾಗಿ ಮೃತರಾದ ಗರ್ಭಿಣಿ ಮೀನಾ ಲಿಶಿ ಅವರ ಸಾವಿನಲ್ಲಿ ಬೇರೆಯದ್ದೇ ಕೈವಾಡಗಳು ಕಾಣಿಸಿಕೊಂಡಿವೆ. ಇದು ಆಕಸ್ಮಿಕ ಅಪಘಾತವಲ್ಲ ಬದಲಾಗಿ ಪೂರ್ವ ನಿಯೋಜಿತ ಕೊಲೆ ಎನ್ನುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಮೀನಾ ಲಿಶಿ ಅವರು ಮಾಜಿ ಶಾಸಕರ ಮಗನಾದ ರೋನ್ನಿ ಲಿಶಿ ಅವರ ಪತ್ನಿ. ಅವರು ಏಳು ತಿಂಗಳ ಗರ್ಭಿಣಿಯಾಗಿದ್ದು, ನವೆಂಬರ್​ 5ರಂದು ಯಾವುದೋ ಕೆಲಸದ ನಿಮಿತ್ತ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಅಪಘಾತವಾಗಿದ್ದು, ಆಕೆ ಮೃತರಾಗಿದ್ದಾರೆ ಎಂದು ವರದಿಯಾಗಿತ್ತು.

ಈ ಘಟನೆಯ ನಿಜಾಂಶ ಹೀಗಿದೆ. ಮೀನಾ ಅವರ ಪತಿ ರೋನ್ನಿ, ಚುಮಿ ತಯಾ ಹೆಸರಿನ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಆಕೆಯ ಮೇಲಿದ್ದ ಪ್ರೀತಿಯಿಂದಾಗಿ ಹೆಂಡತಿ ಬೇಡವೆನಿಸಿದೆ. ಅದೇ ಕಾರಣಕ್ಕೆ ಮೀನಾ ಅವರನ್ನು ಕೊಲೆ ಮಾಡುವ ನಿರ್ಧಾರ ಮಾಡಿದ್ದಾನೆ. ಚುಮಿ ಮತ್ತು ರೋನ್ನಿ ಇಬ್ಬರೂ ಸೇರಿ ಕೊಲೆ ಯೋಜನೆ ಹಾಕಿದ್ದಾರೆ. ಯೋಜನೆಯಂತೆ ತನ್ನ ಸ್ನೇಹಿತನೊಬ್ಬನ ಸಹಾಯದಿಂದ ಒಬ್ಬ ಸುಫಾರಿ ಕಿಲ್ಲರ್​ನ್ನು ಸಂಪರ್ಕಿಸಿದ್ದಾರೆ.

ಮೀನಾ ಅವರ ಕಾರು ಅಪಘಾತ
ಮೀನಾ ಅವರ ಕಾರು ಅಪಘಾತ

ಪತ್ನಿಯನ್ನು ಕೆಲಸದ ನಿಮಿತ್ತ ಕಾರಿನಲ್ಲಿ ಕಳಿಸುವಾಗ ಸುಫಾರಿ ಕಿಲ್ಲರನ್ನೇ ಡ್ರೈವರ್​ ಆಗಿ ಕಳುಹಿಸಲಾಗಿದೆ. ಆತ ಒಂದು ಸ್ಥಳದಲ್ಲಿ ಕಾರು ನಿಲ್ಲಿಸಿ, ಮೀನಾಳ ತಲೆ ಮೇಲೆ ಸುತ್ತಿಗೆಯಿಂದ ಹೊಡೆದಿದ್ದಾನೆ. ನಂತರ ಕಾರನ್ನು ಹಳ್ಳಕ್ಕೆ ತಳ್ಳಿದ್ದಾನೆ. ನೋಡುವವರಿಗೆ ಇದೊಂದು ಅಪಘಾತದ ರೀತಿಯಲ್ಲಿ ಕಾಣುವಂತೆ ಮಾಡಿದ್ದಾನೆ. ಈ ಕೊಲೆಗೆ ಸುಫಾರಿ ಕಿಲ್ಲರ್​ 10 ಲಕ್ಷ ಹಣ ಪಡೆದಿದ್ದಾನೆ ಎನ್ನಲಾಗಿದೆ.

ಪೊಲೀಸರ ಸೂಕ್ಷ್ಮ ತನಿಖೆಯಲ್ಲಿ ಸುಫಾರಿ ಕಿಲ್ಲರ್​ ಬಗ್ಗೆ ಸುಳಿವು ಸಿಕ್ಕಿದೆ. ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆಯ ವಿಚಾರ ತಿಳಿದುಬಂದಿದೆ. ಇದೀಗ ಮೀನಾ ಅವರ ಪತಿ, ಅತನ ಪ್ರಿಯತಮೆ ಮತ್ತು ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net