More

    ಆರ್ಕಿಟಿಕ್​ ಸಂಸ್ಥೆ ಹೆಸರಿನಲ್ಲಿ ಪೋರ್ನ್​ ದಂಧೆ; ಯುರೋಪ್​ ಪೋರ್ನ್​ ವೆಬ್​ಸೈಟ್​ಗೆ ಸಿಬ್ಬಂದಿಯ ವಿಡಿಯೋ ಕಳುಹಿಸುತ್ತಿದ್ದ ಭೂಪ

    ಗಾಂಧಿನಗರ: ಯಾವುದೇ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಬೇಕೆಂದರೆ ಸಂಸ್ಥೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡಿರಬೇಕು. ಇಲ್ಲವಾದರೆ ಮುಂದೆ ಕೆಲಸ ಮಾಡುವಾಗ ಹಲವು ಕಷ್ಟಗಳು ನಮ್ಮನ್ನಾವರಿಸಬಹುದು. ಆದರೆ ಸಂಸ್ಥೆಯ ಬಗ್ಗೆ ತಿಳಿದುಕೊಳ್ಳದ ಯುವತಿಯರು ಕೆಲಸಕ್ಕೆ ಸೇರಿ, ಪೋರ್ನ್​ ನಟಿಯರಾಗಿ ಬದಲಾದ ಘಟನೆ ಗುಜರಾತ್​ನಲ್ಲಿ ನಡೆದಿದೆ.

    ಇದನ್ನೂ ಓದಿ: ಟ್ರೋಫಿ ಮೇಲೆ ಮೂತ್ರ ಮಾಡಿ ಅವಮಾನಿಸಿದ್ದ ವ್ಯಕ್ತಿಗೇ ಸಿಕ್ಕಿತು ಗ್ರ್ಯಾಮಿ ಅವಾರ್ಡ್ಸ್​​ಗೆ ನಾಮಿನೇಶನ್​ ಭಾಗ್ಯ

    ರಾಜ್ಯದ ಅಕೋಟಾ ಏರಿಯಾದಲ್ಲಿ ಆರ್ಕಿಟೆಕ್ ಸಂಸ್ಥೆಯೊಂದಿತ್ತು. ನಿಲೇಶ್​ ಗುಪ್ತಾ ಒಡೆತನದ ಆ ಸಂಸ್ಥೆಯಲ್ಲಿ ಯುವತಿಯರನ್ನು ಆರ್ಕಿಟೆಕ್​ ಕೆಲಸ ಮಾಡಲು ಸೇರಿಸಿಕೊಳ್ಳಲಾಗುತ್ತಿತ್ತು. ಕೆಲಸದ ಸಂದರ್ಶನ ಮಾಡುವ ಸಮಯದಲ್ಲಿ, ‘ನೀವು ಕ್ಲೈಂಟ್​ಗಳೊಂದಿಗೆ ಚಾಟ್​ ಮಾಡಬೇಕಾಗುತ್ತದೆ’ ಎಂದು ಹೇಳಿ ಕೆಲಸಕ್ಕೆ ಸೇರಿಸಿಕೊಳ್ಳಲಾಗುತ್ತಿತ್ತು. ನಂತರ ಅವರನ್ನು ಕ್ಲೈಂಟ್​ ಚಾಟ್​ ಬದಲಾಗಿ ಸೆಕ್ಸ್​ ಚಾಟ್​ ಮತ್ತು ವಿಡಿಯೋ ಕಾಲ್​ ಪೋರ್ನೋಗ್ರಫಿಗೆ ಬಳಸಿಕೊಳ್ಳಲಾಗುತ್ತಿತ್ತು.

    ನಿಲೇಶ್​ ಗುಪ್ತಾ ಆಗ್ರ ಮೂಲದವನು. 44 ವರ್ಷದ ಆತನಿಗೆ 2012ರಲ್ಲಿ ಮೊದಲನೇ ಪತ್ನಿಯಿಂದ ವಿಚ್ಛೇದನವಾಗಿದೆ. ಅದಾದ ನಂತರ ರಷ್ಯಾ ಮೂಲದ ಮಹಿಳೆಯನ್ನು ಮದುವೆಯಾದ ಆತ ಈ ಆರ್ಕಿಟೆಕ್​ ಸಂಸ್ಥೆಯನ್ನು ತೆರೆದು ಕೆಲಸ ಆರಂಭಿಸಿದ್ದಾನೆ. ಕಳೆದ ವರ್ಷ ರಷ್ಯಾಕ್ಕೆ ತೆರಳಿದ್ದ ಆತನ ಪತ್ನಿ ಲಾಕ್​ಡೌನ್​ ಹಿನ್ನೆಲೆಯಲ್ಲಿ ಮರಳಿ ವಾಪಾಸು ಭಾರತಕ್ಕೆ ಬರಲು ಸಾಧ್ಯವಾಗಿಲ್ಲ. ಇತ್ತೀಚೆಗೆ ಆ ಪ್ರದೇಶದಲ್ಲಿ ಕಾನೂನು ಬಾಹಿರ ಕೆಲಸಗಳು ನಡೆಯುತ್ತಿರುವುದಾಗಿ ಪೊಲೀಸ್​ ಪ್ರಕರಣ ದಾಖಲಾಗಿತ್ತು. ಆ ಹಿನ್ನೆಲೆಯಲ್ಲಿ ಹದ್ದಿನ ಕಣ್ಣಿಟ್ಟ ಪೊಲೀಸರು ಇದೀಗ ಸಂಸ್ಥೆಯ ನಿಜ ಬಣ್ಣವನ್ನು ಬೆಳಕಿಗೆ ತಂದಿದ್ದಾರೆ.

    ಇದನ್ನೂ ಓದಿ: 25 ವರ್ಷ ಹಿಂದೆ ಕೊಲೆ ಮಾಡಿದ್ದ ವ್ಯಕ್ತಿ ಈಗ ಸಿಕ್ಕಿಬಿದ್ದ; ಕೇಸ್ ಸಾಲ್ವ್​ ಆದ ಬಗೆಯೇ ರೋಚಕ

    ಈ ಸಂಸ್ಥೆಯು ಯುರೋಪ್​ನ ಪೋರ್ನ್​ ವೆಬ್​ಸೈಟ್​ ಒಂದಕ್ಕೆ ವಿಡಿಯೋಗಳನ್ನು ನೀಡುತ್ತಿತ್ತು ಎನ್ನಲಾಗಿದೆ. ಗ್ರಾಹಕರ ಗುರುತನ್ನು ಮರೆಮಾಡಲು ವೆಬ್‌ಸೈಟ್ ಟೋಕನ್‌ಗಳ ಮೂಲಕ ಕಾರ್ಯನಿರ್ವಹಿಸುತ್ತಿತ್ತು. ನಂತರ ಟೋಕನ್​ಗಳನ್ನು ಬಿಟ್​ಕಾಯಿನ್​ಗಳಾಗಿ ಪರಿವರ್ತಿಸಲಾಗುತ್ತಿತ್ತು ಎನ್ನಲಾಗಿದೆ.

    ಸಂಸ್ಥೆಯ ಮೇಲೆ ದಾಳಿ ನಡೆಸಿರುವ ಪೊಲೀಸರು ಎರಡು ಸೆಕ್ಟ್​ ಟಾಯ್​, 11 ಲ್ಯಾಪ್​ಟಾಪ್​, 2 ವೆಬ್​ಕಾಮ್​, 2 ರೂಟರ್​, 2 ಟಿವಿ, 1 ಮೊಬೈಲ್​ ಮತ್ತು ಆರೋಪಿಯ ಕಾರನ್ನು ವಶಕ್ಕೆ ಪಡೆದಿದ್ದಾರೆ. ಕಚೇರಿಯಲ್ಲಿ 19 ಯುವತಿಯರಿಗೆ ಸೇರಿರುವ 19 ಪಾಸ್​ಪೋರ್ಟ್​ಗಳು ಸಿಕ್ಕಿವೆ ಎನ್ನಲಾಗಿದೆ. (ಏಜೆನ್ಸೀಸ್​)

    ಕ್ರಷ್​ಗೆ ಮದುವೆಯಾಗಿತ್ತು ಆದರೂ ಸಂಬಂಧ ಬೆಳೆಸಲು ಒತ್ತಾಯಿಸಿದ ಯುವಕ; ಒಪ್ಪದಿದ್ದಾಗ ಏನು ಮಾಡಿದ ಗೊತ್ತಾ?

    VIDEO| ರಸ್ತೆ ಮೇಲೆ ರಾಜಾರೋಷವಾಗಿ ಓಡಾಡಿದ ಚಿರತೆ; ಸಿಸಿಟಿವಿಯಲ್ಲಿ ಸೆರೆಯಾಯ್ತು ಚಿರತೆಯ ಓಡಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts