More

    ಟ್ರೋಫಿ ಮೇಲೆ ಮೂತ್ರ ಮಾಡಿ ಅವಮಾನಿಸಿದ್ದ ವ್ಯಕ್ತಿಗೇ ಸಿಕ್ಕಿತು ಗ್ರ್ಯಾಮಿ ಅವಾರ್ಡ್ಸ್​​ಗೆ ನಾಮಿನೇಶನ್​ ಭಾಗ್ಯ

    ವಾಷಿಂಗ್ಟನ್​: ಯಾವುದೇ ಪ್ರಶಸ್ತಿಯೂ ಸುಮ್ಮನೆ ಸಿಕ್ಕುವುದಿಲ್ಲ. ನಾವು ಪಟ್ಟ ಪರಿಶ್ರಮ, ನಮ್ಮ ಸಾಧನೆಗೆ ಗೌರವಸೂಚಕವಾಗಿ ಸಿಗುವ ಪ್ರಶಸ್ತಿಗೆ ನಾವು ಅಷ್ಟೇ ಗೌರವವನ್ನು ನೀಡಬೇಕು. ಆದರೆ ಕೆಲವರು ತಮ್ಮ ಅಹಂ ಮೂಲಕ ಪ್ರಶಸ್ತಿಗಳನ್ನು ಕಾಲ ಕಸದಂತೆ ಕಾಣುತ್ತಾರೆ. ಆದರೂ ಅಂತವರನ್ನೇ ಪ್ರಶಸ್ತಿಗಳು ಹುಡುಕಿಕೊಂಡು ಹೋಗುತ್ತವೆ ಅಂದರೆ ನೀವು ನಂಬಲೇ ಬೇಕು.

    ಇದನ್ನೂ ಓದಿ: ಧೈರ್ಯವಿದ್ದರೆ ನನ್ನನ್ನು ಬಂಧಿಸಿ, ಜೈಲಿನಲ್ಲಿದ್ದೇ ಗೆದ್ದು ತೋರಿಸುತ್ತೇನೆ; ಬಿಜೆಪಿಗೆ ಮಮತಾ ಸವಾಲ್​

    ಅಮೆರಿಕದ ಪ್ರಸಿದ್ಧ ರ್ಯಾಪರ್​, ಕಂಪೋಸರ್​ ಮತ್ತು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿದ್ದ ​ಕಾನ್ಯೆ ವೆಸ್ಟ್​ 2021ರ ಗ್ರ್ಯಾಮಿ ಅವಾರ್ಡ್ಸ್​ಗೆ ನಾಮಿನೇಟ್​ ಆಗಿದ್ದಾರೆ. ಅವರ ಆಲ್ಬಂ ಜೀಸಸ್​ ಈಸ್​ ಕಿಂಗ್​ನ್ನು ಅತ್ಯುತ್ತಮ ಸಮಕಾಲೀನ ಕ್ರಿಶ್ಚಿಯನ್​ ಮ್ಯೂಸಿಕ್​ ಆಲ್ಬಂ ವಿಭಾಗದಲ್ಲಿ ನಾಮಿನೇಟ್​ ಮಾಡಲಾಗಿದೆ. ಆ ಹಿನ್ನೆಲೆಯಲ್ಲಿ ಇದೀಗ ಕಾನ್ಯೆ ಅವರು ನಾಮಿನೇಟ್​ ಆದವರ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ.

    ಟ್ರೋಫಿ ಮೇಲೆ ಮೂತ್ರ ಮಾಡಿ ಅವಮಾನಿಸಿದ್ದ ವ್ಯಕ್ತಿಗೇ ಸಿಕ್ಕಿತು ಗ್ರ್ಯಾಮಿ ಅವಾರ್ಡ್ಸ್​​ಗೆ ನಾಮಿನೇಶನ್​ ಭಾಗ್ಯಕಾನ್ಯೆ ಅವರು ನಾಮಿನೇಟ್​ ಆಗುವುದಕ್ಕು ಎರಡು ತಿಂಗಳು ಮೊದಲು ಮಾಡಿದ್ದ ಕೆಲಸವೊಂದರ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಒಪ್ಪಂದ ಒಂದರ ವಿಚಾರದಲ್ಲಿ ಯುನಿವರ್ಸಲ್​ ರೆಕಾರ್ಡ್ಸ್​ ಮತ್ತು ಕಾನ್ಯೆ ಅವರ ನಡುವೆ ವಾದ ವಿವಾದ ನಡೆದಿತ್ತು. ಇದರಿಂದಾಗಿ ಸಿಟ್ಟಿಗೆದ್ದಿದ್ದ ಕಾನ್ಯೆ, ಈ ಹಿಂದೆ ತಮಗೆ ಸಿಕ್ಕಿದ್ದ ಗ್ರ್ಯಾಮಿ ಅವಾರ್ಡ್ ಮೇಲೆ ತಮ್ಮ ಸಿಟ್ಟನ್ನು ತೀರಿಸಿಕೊಂಡಿದ್ದರು. ಗ್ರ್ಯಾಮಿ ಅವಾರ್ಡ್​ನ ಟ್ರೋಫಿಯನ್ನು ಟಾಯ್ಲೆಟ್​ನಲ್ಲಿಟ್ಟು ಅದರ ಮೇಲೆ ಮೂತ್ರ ಮಾಡಿದ್ದರು. ಅದರ ವಿಡಿಯೋ ಚಿತ್ರೀಕರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಬಿಟ್ಟಿದ್ದರು. ಪ್ರತಿ ರೆಕಾರ್ಡ್​ಗಳು ರಾಯಾಲಿಟಿ ಆಧಾರಿತವಾಗಿರುತ್ತದೆ ಎಂದು ಸಾಲು ಸಾಲು ಟ್ವೀಟ್​ಗಳಲ್ಲಿ ಆರೋಪಿಸಿದ್ದರು.

    ಇದನ್ನೂ ಓದಿ: ಇನ್ನು ಮುಂದೆ ಸ್ಯಾನಿಟರಿ ಪ್ಯಾಡ್​ಗಳು ಉಚಿತ; ಹೆಣ್ಣು ಮಕ್ಕಳಿಗಾಗಿ ವಿಶೇಷ ಮಸೂದೆ ತಂದ ಮೊದಲ ದೇಶವಿದು

    ಟ್ರೋಫಿ ಮೇಲೆ ಮೂತ್ರ ಮಾಡಿ ಅವಮಾನಿಸಿದ್ದ ರ್ಯಾಪರ್​ಗೇ ಇದೀಗ ಮತ್ತೊಮ್ಮೆ ಪ್ರಶಸ್ತಿ ಪಡೆಯುವ ಅವಕಾಶ ಸಿಕ್ಕಿದೆ. ನಾಮಿನೇಟ್​ ಆದವರ ಪೈಕಿ ಕಾನ್ಯೆ ಅವರಿಗೇ ಪ್ರಶಸ್ತಿ ಸಿಕ್ಕರೆ ಅವರು ಪ್ರಶಸ್ತಿಯನ್ನು ಸ್ವೀಕರಿಸುತ್ತಾರೆಯೇ ಎನ್ನುವ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. (ಏಜೆನ್ಸೀಸ್​)

    ಮನೆಯವರನ್ನು ಕೊಲೆ ಮಾಡುವುದಾಗಿ ಹೆದರಿಸಿ ಅಪ್ರಾಪ್ತೆಯ ಮೇಲೆ ನಿರಂತರ ಅತ್ಯಾಚಾರವೆಸಗಿದ ಯುವಕ

    25 ವರ್ಷ ಹಿಂದೆ ಕೊಲೆ ಮಾಡಿದ್ದ ವ್ಯಕ್ತಿ ಈಗ ಸಿಕ್ಕಿಬಿದ್ದ; ಕೇಸ್ ಸಾಲ್ವ್​ ಆದ ಬಗೆಯೇ ರೋಚಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts